/newsfirstlive-kannada/media/post_attachments/wp-content/uploads/2025/04/RCB-3.jpg)
ಟೆನ್ಶನ್.. ಟೆನ್ಶನ್.. ಟೆನ್ಶನ್..! ಆರ್ಸಿಬಿ ಕ್ಯಾಂಪ್ನಲ್ಲಿ ಟೆನ್ಶನ್.. ಟೆನ್ಶನ್.. ಕೋಚ್ ಌಂಡಿ ಫ್ಲವರ್ ಟೆನ್ಶನ್.. ಟೀಮ್ ಮ್ಯಾನೇಜ್ಮೆಂಟ್ಗೂ ಕೂಡ ಟೆನ್ಶನ್.. ಅಷ್ಟಕ್ಕೂ ಮಹತ್ವದ ಪಂದ್ಯದಕ್ಕೂ ಮುನ್ನ, ಟೆನ್ಶನ್ ಯಾಕೆ..? ಆರ್ಸಿಬಿ ತಂಡದಲ್ಲಿ ಏನಾಗ್ತಿದೆ..? ಲಕ್ನೋ ವಿರುದ್ಧ ಗೆಲ್ಲೋಕೆ ಗೇಮ್ಪ್ಲಾನ್ ರೂಪಿಸಬೇಕಿದ್ದ ಆರ್ಸಿಬಿ, ಆ ಒಬ್ಬ ಆಟಗಾರನ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿದೆ. ಆ ಆಟಗಾರ ಸಾಮನ್ಯ ಆಟಗಾರ ಅಲ್ಲ.. ಆತನೇ ಆರ್ಸಿಬಿ ತಂಡದ ಸಾರಥಿ, ರಜತ್ ಪಾಟೀದಾರ್.
ಪಾಟೀದಾರ್ ಕೈಕೊಟ್ರೆ RCB ಮಿಡಲ್ ಆರ್ಡರ್ ಖಲಾಸ್
ಆರ್ಸಿಬಿಗೆ ಮಿಡಲ್ ಆರ್ಡರ್ ಬ್ಯಾಟಿಂಗ್ಲೈನ್ ಅಪ್ದೇ ಚಿಂತೆ. ಫಸ್ಟ್ ಹಾಫ್ನಲ್ಲಿ ಆರ್ಸಿಬಿ, ಮಿಡಲ್ ಆರ್ಡರ್ ಬ್ಯಾಟಿಂಗ್ ಸಖತ್ ಸ್ಟ್ರಾಂಗ್ ಆಗಿತ್ತು. ನಾಯಕ ರಜತ್ ಪಾಟೀದಾರ್, ಮಿಡಲ್ ಆರ್ಡರ್ನಲ್ಲಿ ಕಲ್ಲುಬಂಡೆಯಂತೆ ನಿಂತು ಬ್ಯಾಟಿಂಗ್ ನಡೆಸುತ್ತಿದ್ರು. ತಂಡಕ್ಕೆ ಬಲ ತುಂಬಿ ನೆರವಾಗ್ತಿದ್ರು. ಸೆಕೆಂಡ್ ಆಫ್ನಲ್ಲಿ ಕ್ಯಾಪ್ಟನ್ ಸಾಭ್, ಫುಲ್ ಡಲ್ ಆಗ್ಬಿಟ್ಟಿದ್ದಾರೆ. ಪಾಟೀದಾರ್ ವೈಫಲ್ಯದಿಂದ ಆರ್ಸಿಬಿ ಮಿಡಲ್ ಆರ್ಡರ್, ಕೊಲ್ಯಾಪ್ಸ್ ಆಗ್ತಿದೆ.
ಮೊದಲ 4 ಪಂದ್ಯಗಳಲ್ಲಿ ಪಾಟೀದಾರ್ ಸೂಪರ್ಹಿಟ್
ಐಪಿಎಲ್ ಸೀಸನ್-18ರ ಆರಂಭದಲ್ಲಿ ರಜತ್ ಪಾಟೀದಾರ್, ಅದ್ಭುತ ಬ್ಯಾಟಿಂಗ್ ನಡೆಸಿದ್ರು. ನಾಯಕನಾದ ಹೊಸದರಲ್ಲಿ ಪಾಟೀದಾರ್ ಪರ್ವ, ಸಿಕ್ಕಾಪಟ್ಟೇ ಜೋರಾಗಿತ್ತು. ಎದುರಾಳಿ ಬೌಲರ್ಗಳ ಮೇಲೆ ಸವಾರಿ ಮಾಡೋದೇನು..? ಬೌಂಡರಿ, ಸಿಕ್ಸರ್ಗಳು ಸಿಡಿಸೋದೇನು..? ಅಬ್ಬಬ್ಬಬ್ಬಾ..! ನೋಡೋಕೆ ಎರಡು ಕಣ್ಣು ಸಾಕಾಗ್ತಿರಲಿಲ್ಲ. ಮಿಡಲ್ ಆರ್ಡರ್ನಲ್ಲಿ ಪಾಟೀದಾರ್ರ ಡಿಸ್ಟ್ರಕ್ಟೀವ್ ಬ್ಯಾಟಿಂಗ್ ನೋಡಿ, ಅದೆಷ್ಟೋ ಮಂದಿ, ಆರ್ಸಿಬಿ ನಾಯಕನ ಬ್ಯಾಟಿಂಗ್ಗೆ ಫಿದಾ ಆಗ್ಬಿಟ್ರು.
ಇದನ್ನೂ ಓದಿ: RCB ಗೆಲ್ಲಲು ಈ ಫಾರ್ಮುಲಾ ಬೇಕೇಬೇಕು.. ಇವತ್ತು ಯಾರ ಕೊಡುಗೆ ತುಂಬಾನೇ ಮುಖ್ಯ ಗೊತ್ತಾ..?
ಕ್ಯಾಪ್ಟನ್ ಸೂಪರ್ಹಿಟ್
ಮೊದಲ 4 ಪಂದ್ಯಗಳಲ್ಲಿ ರಜತ್ ಪಾಟೀದಾರ್, 40.25ರ ಬ್ಯಾಟಿಂಗ್ ಸರಾಸರಿಯಲ್ಲಿ 161 ರನ್ ಸಿಡಿಸಿದ್ರು. 175ರ ಸ್ಟ್ರೈಕ್ರೇಟ್ನಲ್ಲಿ ಪಾಟೀದಾರ್ ರನ್ಗಳಿಸಿದ್ರು. ಮೊದಲ 4 ಪಂದ್ಯಗಳಲ್ಲಿ ಸೂಪರ್ಹಿಟ್ ಆಗಿದ್ದ ಪಾಟೀದಾರ್, ನಂತರ ನಡೆದ 7 ಪಂದ್ಯಗಳಲ್ಲಿ ಸೂಪರ್ ಫ್ಲಾಪ್ ಆಗಿದ್ದಾರೆ. ರನ್ಗಳಿಸೋದು ಇರಲಿ, ಕ್ರೀಸ್ನಲ್ಲಿ ಸೆಟಲ್ ಆಗೋಕೂ ಪಾಟೀದಾರ್ ಪರದಾಡುತ್ತಿದ್ದಾರೆ. ಮಿಡಲ್ ಆರ್ಡರ್ನಲ್ಲಿ ಸ್ಪಿನ್ ಬೌಲರ್ಗಳನ್ನ ಅಟ್ಟಾಡಿಸಿಕೊಂಡು ಹೊಡೆಯುತ್ತಿದ್ದ ಪಾಟೀದಾರ್ ಬ್ಯಾಟ್ ಈಗ ಇದ್ದಕ್ಕಿದಂತೆ ಫುಲ್ ಸೈಲೆಂಟ್ ಆಗ್ಬಿಟ್ಟಿದೆ. ಪಾಟೀದಾರ್ರ ಫ್ಲಾಪ್ ಶೋ, ತಂಡದ ಮೇಲೆ ದೊಡ್ಡ ಪರಿಣಾಮ ಬೀರಿದೆ.
ಕ್ಯಾಪ್ಟನ್ ಅಟ್ಟರ್ ಫ್ಲಾಪ್
ಕಳೆದ 7 ಪಂದ್ಯಗಳಲ್ಲಿ ರಜತ್ ಪಾಟೀದಾರ್ 13.71 ಬ್ಯಾಟಿಂಗ್ ಸರಾಸರಿ ಹೊಂದಿದ್ದಾರೆ. ಕೇವಲ 96 ರನ್ಗಳಿಸಿರುವ ಪಾಟೀದಾರ್ ಸ್ಟ್ರೈಕ್ರೇಟ್, ಜಸ್ಟ್ 102. ಇತ್ತೀಚಿನ ಪಂದ್ಯಗಳಲ್ಲಿ ರಜತ್ ಪಾಟೀದಾರ್ ಬ್ಯಾಟಿಂಗ್ ರೆಕಾರ್ಡ್ಸ್ ನೋಡ್ತಿದ್ರೆ, ಗಾಬರಿಯಾಗುತ್ತದೆ. ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ಕಿಂಗ್ಸ್ ವಿರುದ್ಧದ ಆ ಎರಡು ಪಂದ್ಯಗಳನ್ನ ಬಿಟ್ರೆ, ಪಾಟೀದಾರ್ ಬ್ಯಾಟಿಂಗ್ ಪರ್ಫಾಮೆನ್ಸ್ ಹೇಳಿಕೊಳ್ಳುವಂತಿಲ್ಲ. ನಾಯಕನ ಫ್ಲಾಪ್ ಶೋ ಬಗ್ಗೆ, ಕೋಚ್ ಌಂಡಿ ಫ್ಲವರ್ ಮತ್ತು ಟೀಮ್ ಮ್ಯಾನೇಜ್ಮೆಂಟ್ ಸಿಕ್ಕಾಪಟ್ಟೆ ತಲೆಕೆಡಿಸಿಕೊಂಡಿದೆ.
ಗಾಯದ ಸಮಸ್ಯೆ..!
ನಾಯಕ ರಜತ್ ಪಾಟೀದಾರ್ಗೆ ಎದುರಾಗಿರೋ ಸಮಸ್ಯೆ ಒಂದರೆಡಲ್ಲ. ಬ್ಯಾಟಿಂಗ್ ಫಾರ್ಮ್ ಕಳೆದುಕೊಂಡಿರುವ ಪಾಟೀದಾರ್, ಒಂದೊಂದು ರನ್ಗಳಿಸೋಕೂ ಪರದಾಡ್ತಿದ್ದಾರೆ. ಇದೆಲ್ಲದರ ನಡುವೆ ಇಂಜುರಿ ಸಮಸ್ಯೆ ಎದುರಿಸ್ತಿರೋ ಪಾಟೀದಾರ್, ನಾಯಕತ್ವದಿಂದಲೂ ದೂರ ಉಳಿದಿದ್ದಾರೆ. ಕಳೆದ ಪಂದ್ಯದಲ್ಲಿ ಪಾಟೀದಾರ್, ಕೇವಲ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿದಿದ್ರು. ಆದ್ರೆ ಪಾಟೀದಾರ್, ತನ್ನ ಬ್ಯಾಟಿಂಗ್ನಿಂದ ಇಂಪ್ಯಾಕ್ಟ್ ಮಾಡಲೇ ಇಲ್ಲ.
ಇದನ್ನೂ ಓದಿ: ಪ್ರಜ್ವಲ್ ರೇವಣ್ಣಗೆ ಮಾಜಿ ಕಾರು ಚಾಲಕನಿಂದ ಮತ್ತೆ ಸಂಕಷ್ಟ.. ಕೋರ್ಟ್ಗೆ ನೀಡಿದ ಹೇಳಿಕೆಯಲ್ಲಿ ಏನೇನಿದೆ..?
RCBಗೆ ಸಾರಥಿಯ ಚಿಂತೆ.!
ಕೈಗೆ ಗಾಯಮಾಡಿಕೊಂಡಿರುವ ರಜತ್ ಪಾಟೀದಾರ್, ಲಕ್ನೋ ವಿರುದ್ಧದ ಪಂದ್ಯಕ್ಕೆ ಫಿಟ್ಟಾ-ಅನ್ಫಿಟ್ಟಾ ಅನ್ನೋದು ಗೊತ್ತಿಲ್ಲ. ಒಂದು ವೇಳೆ ಪಾಟೀದಾರ್ಗೆ ಗಾಯ ಇನ್ನೂ ವಾಸಿಯಾಗದೇ ಇದ್ರೆ, ಆರ್ಸಿಬಿ ತಂಡಕ್ಕೆ ದೊಡ್ಡ ಸೆಟ್ಬ್ಯಾಕ್ ಆಗೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಹಂಗಾಮಿ ನಾಯಕ ಅನಾನುಭವಿ ಜಿತೇಶ್ ಶರ್ಮಾ, ನಾಯಕನ ಪೋಸ್ಟ್ಗೆ ಸೂಟ್ ಆಗ್ತಿಲ್ಲ. ಜಿತೇಶ್ ಕ್ಯಾಪ್ಟೆನ್ಸಿ ಸ್ಟೈಲ್, ಬೆಂಗಳೂರು ತಂಡಕ್ಕೆ ಪ್ರಯೋಜನವಾಗ್ತಿಲ್ಲ. ಸೋ, ಪಾಟೀದಾರ್ರ ಫಿಟ್ನೆಸ್ ರಿಪೋರ್ಟ್ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.
ಟೂರ್ನಿಯಲ್ಲಿ ತನ್ನ ಗೆಲುವಿನ ಓಟದಿಂದ ಪ್ಲೇ-ಆಫ್ಗೆ ಎಂಟ್ರಿ ಕೊಟ್ಟಿರುವ ಆರ್ಸಿಬಿಗೆ, ಕಪ್ ಗೆಲ್ಲೋಕೂ ಮುನ್ನ ಸಮಸ್ಯೆಗಳ ಮೇಲೆ ಸಮಸ್ಯೆಗಳು ಎದುರಾಗಿವೆ.
ಇದನ್ನೂ ಓದಿ: ಆಘಾತಕಾರಿ ಸುದ್ದಿ.. ನಿನ್ನ ಅಕ್ರಮ ಸಂಬಂಧ ಬಹಿರಂಗ ಮಾಡ್ತೀನಿ ಎಂದು ಡೆವಲಪರ್ಗೇ AI ಬ್ಲ್ಯಾಕ್ಮೇಲ್..!