RCB ಗೆಲುವಿನ ಕ್ರೆಡಿಟ್​ ಯಾರಿಗೆ..? ಕ್ಯಾಪ್ಟನ್​ ರಜತ್ ಹೇಳಿದ ಹೆಸರು ಹ್ಯಾಜಲ್ವುಡ್​ ಅಲ್ಲವೇ ಅಲ್ಲ!

author-image
Bheemappa
Updated On
ಟ್ರೋಫಿ ಗೆಲ್ಲಿಸಿಕೊಟ್ಟ ಪಾಟೀದಾರ್ ಜರ್ನಿ ಹಿಂದೆ ತ್ಯಾಗದ ಕತೆ.. ಝೀರೋ ಟು ಹೀರೋ..!
Advertisment
  • ಪಂದ್ಯದಲ್ಲಿ ಕೊನೆವರೆಗೆ ಪಂಜಾಬ್​ ಅನ್ನು ಮೇಲೇಳಲು ಬಿಡಲಿಲ್ಲ
  • ಆರ್​ಸಿಬಿಯ ಗೆಲುವಿನ ಕ್ರೆಡಿಟ್ ಅನ್ನು ರಜತ್ ಕೊಟ್ಟಿದ್ದು ಯಾರಿಗೆ?
  • ಸ್ಟಂಪ್​ಗಳನ್ನ ಟಾರ್ಗೆಟ್​ ಮಾಡುವುದೇ ಈ ಬೌಲರ್​ನ ಸ್ಟ್ರೆಂಥ್..!

ಕ್ವಾಲಿಫೈಯರ್​- 1ರ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್​ ವಿರುದ್ಧ ರಾಯಲ್ ಚಾಲೆಂಜರ್ಸ್​ ಬೆಂಗಳೂರು ಸುಲಭ ಜಯ ಪಡೆದಿದೆ. ಮೊದಲ ಇನ್ನಿಂಗ್ಸ್​​ನಿಂದಲೂ ಎದುರಾಳಿ ಮೇಲೆ ಹಿಡಿತ ಸಾಧಿಸಿದ ಆರ್​ಸಿಬಿ ತಂಡ, ಪಂಜಾಬ್​ ಅನ್ನು ಯಾವ ಹಂತದಲ್ಲೂ ಮೇಲೆ ಏಳಲು ಬಿಡಲೇ ಇಲ್ಲ. ಸದ್ಯ ತಂಡದಲ್ಲಿ ಯಾರು ಚೆನ್ನಾಗಿ ಆಡಿದ್ದಾರೆ ಎನ್ನುವ ಕುರಿತು ಕ್ಯಾಪ್ಟನ್​ ರಜತ್ ಪಾಟಿದಾರ್ ಮಾತನಾಡಿದ್ದಾರೆ.

ಪಂಜಾಬ್ ಕಿಂಗ್ಸ್​ ವಿರುದ್ಧ ಗೆಲುವು ಪಡೆದ ಬಳಿಕ ಮಾತನಾಡಿದ ಬೆಂಗಳೂರು ತಂಡದ ಕ್ಯಾಪ್ಟನ್​ ರಜತ್ ಪಾಟಿದಾರ್ ಅವರು, ಪಂದ್ಯದಲ್ಲಿ ಹೇಗೆ ಬೌಲಿಂಗ್ ಮಾಡಬೇಕೆಂದು ನಾವು ಸ್ಪಷ್ಟವಾಗಿ ಯೋಜನೆ ಹಾಕಿಕೊಂಡಿದ್ದೇವು. ಆರ್​ಸಿಬಿಯ ವೇಗದ ಬೌಲರ್‌ಗಳು ಚೆನ್ನಾಗಿ ಆಡಿದರು. ಆದರೆ ಇವರಿಗಿಂತ ಸುಯಶ್ ಶರ್ಮಾ ಸ್ಪಿನ್​ ಎಲ್ಲರನ್ನೂ ಬೆರಗುಗೊಳಿಸಿತು. ಸುಯಶ್ ಶರ್ಮಾ ಬೌಲಿಂಗ್ ಮಾಡಿದ ರೀತಿ ಹಾಗೂ ಅವರು ಬೌಲಿಂಗ್​ ಲೈನ್ಸ್ ಅಂಡ್ ಲೆಂತ್‌ಗಳನ್ನು ಎಲ್ಲ ರೀತಿ ನಿಜಕ್ಕೂ ಚೆನ್ನಾಗಿತ್ತು ಎಂದು ಹೇಳಿದರು.

ಇದನ್ನೂ ಓದಿ: ಫೈನಲ್​ಗೆ 4ನೇ ಬಾರಿ ಎಂಟ್ರಿಕೊಟ್ಟ RCB.. Qualifier-1ರಲ್ಲಿ ಬೆಂಗಳೂರಿಗೆ ಸುಲಭ ಜಯ

publive-image

ನಾನು ನಾಯಕನಾಗಿ ಸುಯಶ್ ಸ್ಪಿನ್​ ಬೌಲಿಂಗ್​​ ಅನ್ನು ಚೆನ್ನಾಗಿ ಬಲ್ಲೇ. ಸ್ಟಂಪ್​ಗಳನ್ನು ಟಾರ್ಗೆಟ್ ಮಾಡೋದೇ ಸುಯಶ್ ಸ್ಟ್ರೆಂಥ್​ ಆಗಿದೆ. ಅವರ ಬೌಲಿಂಗ್ ಅನ್ನು ಜಡ್ಜ್​​ ಮಾಡೋದು ತುಂಬಾ ಕಷ್ಟ. ಯಾವುದೇ ಕನ್​​ಫ್ಯೂಸ್​ ಮಾಡದೇ ಸುಯಶ್​​​ಗೆ ಕ್ಲೀಯರ್ ಐಡಿಯಾ ಕೊಟ್ಟಿದ್ದೆ. ಸಾಕಷ್ಟು ಅಭ್ಯಾಸ ಮಾಡಿದ್ದರಿಂದ ಈ ಯಶಸ್ಸು ಸಿಕ್ಕಿದೆ. ಗೆಲುವಿನ ಕ್ರೆಡಿಟ್​ ಏನಿದ್ದರೂ ಸುಯಶ್​ ಶರ್ಮಾದ್ದೇ ಎಂದರು.

ಫಿಲ್​ ಸಾಲ್ಟ್ ಬ್ಯಾಟಿಂಗ್ ಅಂದರೆ ನನಗೆ ತುಂಬಾ ಇಷ್ಟ. ಡಗೌಟ್​ ಅಲ್ಲಿ ಕುಳಿತು ಸಾಲ್ಟ್​ ಬ್ಯಾಟಿಂಗ್ ನೋಡುತ್ತಿರುತ್ತೇನೆ. ಅವರ ಬಿಗ್ ಫ್ಯಾನ್​ ನಾನು. ಇದರ ಜೊತೆಗೆ ಎಲ್ಲ ಆರ್​ಸಿಬಿ ಅಭಿಮಾನಿಗಳಿಗೆ ತುಂಬಾ ಧನ್ಯವಾದಗಳನ್ನು ಹೇಳುತ್ತೇನೆ. ಎಂ ಚಿನ್ನಸ್ವಾಮಿ ಸ್ಟೇಡಿಯಂ ಅಷ್ಟೇ ಅಲ್ಲ, ನಾವು ಎಲ್ಲೇ ಆಡಲು ಹೋದರೂ ಅದನ್ನು ಹೋಮ್​ ಗ್ರೌಂಡ್​ ಎಂದು ಭಾವಿಸುತ್ತೇವೆ. We love you, ಯಾವಾಗಲೂ ನಿಮ್ಮ ಸಪೋರ್ಟ್​ ಹೀಗೆ ಇರಲಿ. ಇನ್ನೊಂದು ಪಂದ್ಯ ಗೆದ್ದರೇ ಎಲ್ಲರೂ ಒಟ್ಟಿಗೆ ಸೆಲೆಬ್ರೆಷನ್ ಮಾಡೋಣ ಎಂದು ಫ್ಯಾನ್ಸ್​ಗೆ ರಜತ್ ಪಾಟಿದಾರ್ ಅವರು ಹೇಳಿದರು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment