/newsfirstlive-kannada/media/post_attachments/wp-content/uploads/2025/04/KOHLI-RCB-1.jpg)
ಐಪಿಎಲ್ ಮರು ಆರಂಭಕ್ಕೆ ಕೌಂಟ್ಡೌನ್ ಶುರುವಾಗಿದೆ. ಅಂತೆಯೇ ಕ್ಯಾಪ್ಟನ್ ರಜತ್ ಪಾಟೀದಾರ್ ತಂಡವನ್ನು ಕೂಡಿಕೊಂಡಿದ್ದು, ಆರ್ಸಿಬಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ರಜತ್ ಪಾಟೀದಾರ್ ಜೊತೆಗೆ ವಿಕೆಟ್ ಕೀಪರ್ ಜಿತೇಶ್ ಶರ್ಮಾ ಕೂಡ ಕ್ಯಾಂಪ್ ಸೇರಿದ್ದಾರೆ.
ರಜತ್ ಪಾಟೀದಾರ್ ಗಾಯದಿಂದ ಚೇತರಿಸಿಕೊಂಡಿಲ್ಲ. ಹೀಗಾಗಿ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧದ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ ಎಂದು ಹೇಳಲಾಗಿತ್ತು. ಇದೀಗ ಆರ್ಸಿಬಿ ಸೋಶಿಯಲ್ ಮೀಡಿಯಾ ಮೂಲಕ ವಿಡಿಯೋ ಹಂಚಿಕೊಂಡಿದ್ದು, ಕ್ಯಾಪ್ಟನ್ ಫುಲ್ ಫಿಟ್ ಆಗಿದ್ದಾರೆ. ವಿಡಿಯೋದಲ್ಲಿ ರಜತ್ ಪಾಟೀದಾದರ್, ನೆಟ್ಸ್ನಲ್ಲಿ ಪ್ರ್ಯಾಕ್ಟೀಸ್ ಮಾಡ್ತಿದ್ದಾರೆ. ಆ ಮೂಲಕ ರಜತ್ ಪಾಟೀದಾರ್ ಫಿಟ್ ಆಗಿದ್ದಾರೆ ಎಂಬ ಸಂದೇಶವನ್ನು ಆರ್ಸಿಬಿ ನೀಡಿದೆ .
ಇದನ್ನೂ ಓದಿ: ಪ್ಲೇ ಆಫ್ಗಾಗಿ 6 ತಂಡಗಳ ನಡುವೆ ಮಹಾಯುದ್ಧ.. RCB, ಗುಜರಾತ್ಗೆ ಬಿಗ್ ಟೆನ್ಷನ್ ಶುರು..!
ಆರ್ಸಿಬಿ ಕ್ಯಾಂಪ್ಗೆ ಬಂದ ಬೆನ್ನಲ್ಲೇ ರಜತ್ ಪಾಟೀದಾರ್ ಸಮಯ ವ್ಯರ್ಥ ಮಾಡದೇ ಬ್ಯಾಟ್ ಹಿಡಿದು ಪ್ರ್ಯಾಕ್ಟೀಸ್ಗೆ ಧುಮುಕಿದ್ದಾರೆ. ನಾಡಿದ್ದು ಚಿನ್ನಸ್ವಾಮಿ ಮೈದಾನದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ಆರ್ಸಿಬಿ ಪಂದ್ಯವನ್ನ ಆಡಲಿದೆ. ಅಧಿಕೃತವಾಗಿ ಪ್ಲೇ-ಆಫ್ ಪ್ರವೇಶಿಸಲು ಆರ್ಸಿಬಿಗೆ ಕೆಕೆಆರ್ ವಿರುದ್ಧ ಗೆಲುವು ಅಗತ್ಯವಾಗಿದೆ. ಈ ಬಾರಿಯ ಐಪಿಎಲ್ನಲ್ಲಿ ರಜತ್ ಪಾಟೀದಾರ್, 11 ಪಂದ್ಯಗಳಲ್ಲಿ 23.90 ಸರಾಸರಿಯಲ್ಲಿ 239 ರನ್ಗಳಿಸಿದ್ದಾರೆ.
ಇದನ್ನೂ ಓದಿ:ಪ್ಲೇ ಆಫ್ಗಾಗಿ 6 ತಂಡಗಳ ನಡುವೆ ಮಹಾಯುದ್ಧ.. RCB, ಗುಜರಾತ್ಗೆ ಬಿಗ್ ಟೆನ್ಷನ್ ಶುರು..!
Captain 𝐑𝐚𝐣𝐚𝐭 and his partner-in-crime 𝐉𝐢𝐭𝐞𝐬𝐡 are back at base, ready to light up the remainder of #IPL2025 with the same swag, same intent, and more fire! 🔥
Let’s wish them the best in the comments, 12th Man Army! 🔽
This is Royal Challenge presents RCB Shorts. 📹 pic.twitter.com/uglwP5hyt0— Royal Challengers Bengaluru (@RCBTweets) May 15, 2025
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ