/newsfirstlive-kannada/media/post_attachments/wp-content/uploads/2025/06/Rajath-Patidar-RCB-2.jpg)
18 ವರ್ಷಗಳ ತಪಸ್ಸಿಗೆ ಈ ದಿನ ಫಲ ಸಿಗಲಿದೆ ಎಂದು ಕನ್ನಡಿಗರು ಕಾದು ಕೂತಿದ್ದಾರೆ. ಈ ಬಾರಿಯ ಐಪಿಎಲ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟೀಮ್ನ ಕ್ಯಾಪ್ಟನ್ ರಜತ್ ಪಾಟಿದಾರ್ ಕುರಿತ 3 ವರ್ಷಗಳ ಹಿಂದಿನ ಸೀಕ್ರೆಟ್ ಒಂದು ಹೊರ ಬಿದ್ದಿದೆ.
2025ರ ಐಪಿಎಲ್ನ ಆರ್‌ಸಿಬಿ ಲೀಡರ್ ಕೊಹ್ಲಿ ಅಲ್ಲ, ರಜತ್ ಪಾಟಿದಾರ್ ಅನ್ನೋದು ಎಲ್ಲರಿಗೂ ಗೊತ್ತಿದೆ. ಆದ್ರೆ ರಜತ್ ಪಾಟಿದಾರ್ ಇದೇ ಐಪಿಎಲ್ಗಾಗಿ ಒಂದು ತ್ಯಾಗ ಮಾಡಿದ್ದಾರೆ.
ಕ್ರಿಕೆಟ್ ಮೇಲೆ ವ್ಯಾಮೋಹ ಬೆಳೆಸಿಕೊಂಡು, 2015ರಲ್ಲಿ ಎಂಟ್ರಿ ಕೊಟ್ಟಿದ್ದ ಪಾಟಿದಾರ್ ಅವರು 2021ರಲ್ಲೇ ಆರ್‌ಸಿಬಿ ತಂಡ ಸೇರಿದ್ದರು. 2022ರ ಐಪಿಎಲ್ ಹರಾಜಿನಲ್ಲಿ ಇಲ್ಲದೇ ಇದ್ದರೂ, ರಜತ್‌ಗೆ ಬದಲಿ ಆಟಗಾರನಾಗುವ ಚಾನ್ಸ್ ಸಿಕ್ಕಿತ್ತು.
2022ರ ಐಪಿಎಲ್ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಎಲಿಮಿನೇಟರ್‌ನಲ್ಲಿ ರಜತ್ ಸಿಡಿಸಿದ್ದ ಭರ್ಜರಿ ಶತಕ ರಜತ್ ಜೀವನಕ್ಕೆ ತಿರುವು ಕೊಟ್ಟಿತ್ತು. ಆದರೆ ಇಲ್ಲಿ ಮತ್ತೊಂದು ರೋಚಕ ವಿಷಯ ಇದೆ.
ಇದನ್ನೂ ಓದಿ: RCB VS PBKS ಫೈನಲ್ ಮ್ಯಾಚ್ ಆರಂಭಕ್ಕೂ ಮೊದಲೇ ಶಾಕಿಂಗ್ ನ್ಯೂಸ್..
ರಜತ್ ಪಾಟಿದಾರ್ ಪ್ರೀತಿಸಿದ್ದ ಗುಂಜನ್ ಪಾಟಿದಾರ್ ಜೊತೆ ಮದುವೆ ದಿನಾಂಕ ಅನೇಕ ಬಾರಿ ನಿಶ್ಚಯವಾಗಿತ್ತು. ಆದರೆ ಕ್ರಿಕೆಟ್ ಮೇಲೆ ಪ್ರೀತಿಗೆ, ಕ್ರಿಕೆಟ್‌ನ ಬದ್ಧತೆಗೆ ರಜತ್ ತಲೆ ಬಾಗಿದ್ದ. ಹಾಗಾಗಿ ಗುಂಜನ್ ಜೊತೆ ಮದುವೆಯನ್ನ ಪದೇ ಪದೇ ಮುಂದೂಡಿಕೊಂಡೆ ಬಂದಿದ್ದರಂತೆ. ಅದೇ ರೀತಿ 2022ರ ಮೇ 9, ಐಪಿಎಲ್ ಸಮಯದಲ್ಲೇ ರಜತ್‌ಗೆ ಮದುವೆ ಫಿಕ್ಸ್ ಆಗಿತ್ತು. ಇಂದೋರ್‌ನಲ್ಲಿ ಹೋಟೆಲ್ ಸಹ ಬುಕ್ ಆಗಿಬಿಟ್ಟಿತ್ತು. ಅದೇ ಸಮಯಕ್ಕೆ ರಜತ್‌ಗೆ ಆರ್‌ಸಿಬಿ ಟೀಮ್ನಲ್ಲಿ ಬದಲಿ ಆಟಗಾರನಾಗಿ ಕರೆಯಲಾಗಿತ್ತು. ಹಾಗಾಗಿ ರಜತ್ ಪಾಟಿದಾರ್ ಗುಂಜನ್ ಮದುವೆ ಆಗ ಕೂಡ ಮುಂದೂಡಲಾಗಿತ್ತು.
ಕೊನೆಗೆ IPL ಮುಗಿದ ಮೇಲೆ 2022ರ ಜುಲೈನಲ್ಲಿ ರಜತ್, ಗುಂಜನ್ ಪಾಟಿದಾರ್ ವಿವಾಹ ನೆರವೇರಿದೆ. ರಜತ್ ಪಾಟಿದಾರ್ರ ನಾಯಕತ್ವ, ಅವರ ಬದ್ಧತೆ ಆರ್‌ಸಿಬಿ ಅಭಿಮಾನಿಗಳನ್ನ ಹೃದಯ ಗೆದ್ದಿದೆ. ಈಗ ತಮ್ಮ ಕಠಿಣ ಶ್ರಮದಿಂದ ರಜತ್ ಪಾಟಿದಾರ್ ಮೊದಲ ಬಾರಿಗೆ ಐಪಿಎಲ್ ಕಪ್ ಗೆಲ್ಲೋ ಉತ್ಸಾಹದಲ್ಲಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ