ಕೊಹ್ಲಿಗಾಗಿ ಅಲ್ಲವೇ ಅಲ್ಲ.. RCB ಫ್ಯಾನ್ಸ್​ಗೆ ಕ್ಯಾಪ್ಟನ್ ರಜತ್ ಥ್ಯಾಂಕ್ಸ್ ಹೇಳಿದ್ದು ಯಾಕೆ?

author-image
Bheemappa
Updated On
ಕೊಹ್ಲಿಗಾಗಿ ಅಲ್ಲವೇ ಅಲ್ಲ.. RCB ಫ್ಯಾನ್ಸ್​ಗೆ ಕ್ಯಾಪ್ಟನ್ ರಜತ್ ಥ್ಯಾಂಕ್ಸ್ ಹೇಳಿದ್ದು ಯಾಕೆ?
Advertisment
  • ಆರ್​ಸಿಬಿ ಅಭಿಮಾನಿಗಳಿಗೆ ವಿ ಲವ್​ ಯೂ ಎಂದ ಕ್ಯಾಪ್ಟನ್
  • ಪಂದ್ಯದಲ್ಲಿ ಟಾಸ್ ಹಾಕುವುದಕ್ಕೂ ಬಿಡದಂತೆ ಸುರಿದ ಮಳೆ
  • ಮಳೆಯಿಂದ ಕೆಕೆಆರ್- ಆರ್​​ಸಿಬಿ ನಡುವಿನ ಪಂದ್ಯ ಆಡಲಿಲ್ಲ

ಈ ಬಾರಿಯ ಐಪಿಎಲ್​ ಅಂತಿಮಘಟ್ಟ ತಲುಪಿದ್ದರೂ, ಯಾವುದೇ ತಂಡ ಈವರೆಗೂ ಪ್ಲೇಆಫ್​ಗೆ ಎಂಟ್ರಿ ಕೊಟ್ಟಿಲ್ಲ. ಇದರಿಂದ ಐಪಿಎಲ್ ಮತ್ತಷ್ಟು ರೋಚಕತೆ ಪಡೆದುಕೊಂಡಿದೆ. ಪಾಯಿಂಟ್ಸ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದ ಗುಜರಾತ್ ಅನ್ನು ಆರ್​ಸಿಬಿ ಹಿಂದಿಕ್ಕಿ ಮೊದಲ ಸ್ಥಾನ ಸ್ವೀಕರಿಸಿದೆ. ಇದರ ಬೆನ್ನಲ್ಲೇ ಆರ್​ಸಿಬಿ ಅಭಿಮಾನಿಗಳಿಗೆ ಕ್ಯಾಪ್ಟನ್ ರಜತ್ ಪಾಟಿದಾರ್ ಧನ್ಯವಾದಗಳನ್ನು ಹೇಳಿದ್ದಾರೆ.

ರಾಯಲ್ ಚಾಲೆಂಜರ್ಸ್​ ಬೆಂಗಳೂರು ಹಾಗೂ ಕೋಲ್ಕತ್ತಾ ನೈಟ್​ ರೈಡರ್ಸ್​ ನಡುವಿನ ಐಪಿಎಲ್ ಪಂದ್ಯ ಮಳೆಯಿಂದ ರದ್ದು ಆಯಿತು. ಮೇ 17 ರಂದು ನಡೆಯಬೇಕಿದ್ದ ಪಂದ್ಯಕ್ಕೆ ಟಾಸ್ ಹಾಕುವುದಕ್ಕೂ ಅವಕಾಶ ಕೊಡದ ಮಳೆ, ಆಡದಂತೆ ಮಾಡಿತು. ಈ ಪಂದ್ಯ ನೋಡಲೆಂದು ಬಂದಿದ್ದ ಸಾವಿರಾರು ಅಭಿಮಾನಿಗಳು ಕೊನೆವರೆಗೂ ಕಾದು ಕುಳಿತಿರುವುದನ್ನು ನೋಡಿ, ನಾಯಕ ರಜತ್ ಪಾಟಿದಾರ್​ ಥ್ಯಾಂಕ್ಸ್ ಹೇಳಿದ್ದಾರೆ.

ಇದನ್ನೂ ಓದಿ: RCB ಪ್ಲೇ ಆಫ್ ಸುಲಭವಲ್ಲ, ಮತ್ತಷ್ಟು ಕಷ್ಟ ಕಷ್ಟ.. 5 ಟೀಮ್​ಗಳ ಪಾಯಿಂಟ್ಸ್​ ಹೇಗಿದೆ​?

publive-image

ಎಂ.ಚಿನ್ನಸ್ವಾಮಿ ಸ್ಟೇಡಿಯಂಗೆ ಬಂದಿದ್ದ ಎಲ್ಲ ಆರ್​ಸಿಬಿ ಅಭಿಮಾನಿಗಳಿಗೆ ಧನ್ಯವಾದಗಳು. ಪಂದ್ಯ ನಡೆಯುತ್ತದೆ ಎಂದು ಆರಂಭದಿಂದಲೂ ಬಹಳ ಸಮಯ ಕಾದು ಕಾದು ಸುಸ್ತಾದರೂ ನಿಮ್ಮ ಅಭಿಮಾನ ಬೀಡಲಿಲ್ಲ. ಮಳೆಯ ನಡುವೆ ದೀರ್ಘವಾಗಿ ಕಾದಿದ್ದಕ್ಕಾಗಿ ನಿಮಗೆಲ್ಲರಿಗೂ ಧನ್ಯವಾದ. ತಂಡಕ್ಕಾಗಿ ನೀವು ಮಾಡುತ್ತಿರುವ ಸಪೋರ್ಟ್​ ಮೆಚ್ಚುವಂತಹದ್ದು. ನಿಮ್ಮ ಈ ಬೆಂಬಲ ಮುಂದೆಯೂ ಹೀಗೆ ಇರಲಿ. ಎಲ್ಲರಿಗೂ ವಿ ಆಲ್​ ಲವ್ ಯು ಎಂದು ಹೇಳಿದ್ದಾರೆ.

ಪ್ಲೇ ಆಫ್​ಗೆ​ ರಜತ್ ಪಡೆಗೆ ಇನ್ನೊಂದು ಅಂಕ ಮಾತ್ರ ಬಾಕಿ ಇದೆ. ಪಂದ್ಯ ರದ್ದುಗೊಂಡ ಹಿನ್ನೆಲೆಯಲ್ಲಿ ಎರಡೂ ತಂಡಗಳು ತಲಾ ಒಂದೊಂದು ಪಾಯಿಂಟ್ಸ್ ಪಡೆದುಕೊಂಡಿವೆ. ಒಟ್ಟು 17 ಅಂಕಗಳಿಂದ ಆರ್​ಸಿಬಿ ಪಾಯಿಂಟ್ಸ್​ ಟೇಬಲ್​​ನಲ್ಲಿ ಅಗ್ರ ಸ್ಥಾನಕ್ಕೆ ಏರಿದೆ. ಮಳೆಯಿಂದ ಐಪಿಎಲ್ ಪಂದ್ಯ ನಡೆಯದಿದ್ದಕ್ಕೆ ಕೋಲ್ಕತ್ತ ತಂಡ ಟೂರ್ನಿಯಿಂದಲೇ ಹೊರಬಿದ್ದಿದೆ. ಇದರ ಜೊತೆಗೆ ಆರ್​ಸಿಬಿ ಪ್ಲೇ ಆಫ್​ಗೆ​ ಪ್ರವೇಶ ಮಾಡಲಾಗಲಿಲ್ಲ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment