ಶಿಷ್ಯನಿಗಾಗಿ ವಿರಾಟ್​​ನಿಂದ ದೊಡ್ಡ ತ್ಯಾಗ​​; ಕ್ಯಾಪ್ಟನ್​​ ಆಗುತ್ತಿದ್ದಂತೆ ಕೊಹ್ಲಿ ಬಗ್ಗೆ ಹೇಳಿದ್ದೇನು ರಜತ್..?

author-image
Ganesh Nachikethu
Updated On
ಶಿಷ್ಯನಿಗಾಗಿ ವಿರಾಟ್​​ನಿಂದ ದೊಡ್ಡ ತ್ಯಾಗ​​; ಕ್ಯಾಪ್ಟನ್​​ ಆಗುತ್ತಿದ್ದಂತೆ ಕೊಹ್ಲಿ ಬಗ್ಗೆ ಹೇಳಿದ್ದೇನು ರಜತ್..?
Advertisment
  • ಆರ್​​ಸಿಬಿ ತಂಡದ ಹೊಸ ಕ್ಯಾಪ್ಟನ್​ ರಜತ್​ ಪಾಟಿದಾರ್​
  • ಕ್ಯಾಪ್ಟನ್​ ಆಗುತ್ತಿದ್ದಂತೆಯೇ ವಿರಾಟ್ ಬಗ್ಗೆ ಗುಣಗಾನ..!
  • ಕೊಹ್ಲಿ ಬಗ್ಗೆ ಕ್ಯಾಪ್ಟನ್​​ ರಜತ್​ ಪಾಟಿದಾರ್​ ಏನಂದ್ರು?

2025ರ ಇಂಡಿಯನ್​ ಪ್ರೀಮಿಯರ್​​ ಲೀಗ್​ಗೆ ಇನ್ನೇನು ಕೇವಲ ಒಂದು ತಿಂಗಳು ಮಾತ್ರ ಬಾಕಿ ಇದೆ. ಹೇಗಾದ್ರೂ ಮಾಡಿ ಈ ಸಲ ಕಪ್​ ಗೆಲ್ಲಲೇಬೇಕು ಎಂದು ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಜಿದ್ದಿಗೆ ಬಿದ್ದಿದೆ. ಹಾಗಾಗಿ ಈ ಸೀಸನ್​ನಲ್ಲಿ ಆರ್​​ಸಿಬಿಯನ್ನು ಲೀಡ್​ ಮಾಡೋದು ಯಾರು? ಅನ್ನೋ ಚರ್ಚೆ ಜೋರಾಗಿತ್ತು. ಕ್ಯಾಪ್ಟನ್ಸಿ ರೇಸ್​ನಲ್ಲಿ ಸ್ಟಾರ್​ ಪ್ಲೇಯರ್​​ ವಿರಾಟ್​ ಕೊಹ್ಲಿ ಸೇರಿದಂತೆ ಹಲವರ ಹೆಸರುಗಳು ಕೇಳಿ ಬಂದಿದ್ದವು. ಈ ಎಲ್ಲಾ ಚರ್ಚೆಗಳಿಗೂ ತೆರೆ ಎಳೆದಿರೋ ಆರ್​​ಸಿಬಿ ಸ್ಟಾರ್​ ಪ್ಲೇಯರ್​​ ರಜತ್​ ಪಾಟಿದಾರ್​ ಅವರಿಗೆ ಕ್ಯಾಪ್ಟನ್ಸಿ ಪಟ್ಟ ಕಟ್ಟಿದೆ.

ಐಪಿಎಲ್‌ನಲ್ಲಿ ರಜತ್ ಪಾಟಿದಾರ್ ದೊಡ್ಡ ಹೆಸರು ಮಾಡಲು ವಿರಾಟ್ ಕೊಹ್ಲಿ ಕೃಪೆ ಇದೆ. ಈಗ ರಜತ್​ ಪಾಟಿದಾರ್​ ಕ್ಯಾಪ್ಟನ್​ ಆಗಲು ವಿರಾಟ್​ ಕೊಹ್ಲಿಯೇ ಕಾರಣ. ಕ್ಯಾಪ್ಟನ್​ ಆಗುತ್ತಿದ್ದಂತೆಯೇ ರಜತ್​ ಪಾಟಿದಾರ್​ ಮೊದಲು ಗುಣಗಾನ ಮಾಡಿದ್ದು ವಿರಾಟ್​ ಕೊಹ್ಲಿ ಅವರನ್ನೇ.

ಕ್ಯಾಪ್ಟನ್​ ರಜತ್​​ ವಿರಾಟ್​​ ಬಗ್ಗೆ ಏನಂದ್ರು?

ವಿರಾಟ್ ಭಾಯ್​ ಆರ್​​ಸಿಬಿ ತಂಡದ ಲೀಡರ್. ಇವರ ಅನುಭವ ಮತ್ತು ಆಲೋಚನೆಗಳು ನನ್ನ ಕ್ಯಾಪ್ಟನ್ಸಿಗೆ ಸಹಾಯ ಮಾಡಲಿವೆ. ವಿಶ್ವಶ್ರೇಷ್ಠ ಕ್ರಿಕೆಟಿಗರಲ್ಲಿ ಕೊಹ್ಲಿ ಒಬ್ಬರು. ಇವರಿಂದ ಸಾಕಷ್ಟು ಕಲಿತಿದ್ದೇನೆ. ಅದು ನನ್ನ ಅದೃಷ್ಟ ಎಂದರು.

ಕಳೆದ ವರ್ಷವೇ ನನಗೆ ಕೋಚ್ ಆ್ಯಂಡಿ ಫ್ಲವರ್​ ಅವರು ಆರ್​​ಸಿಬಿ ಕ್ಯಾಪ್ಟನ್​ ಆಗೋ ಪ್ಲಾನ್​ ಎಂದು ಕೇಳಿದರು. ನಾನು ಮೊದಲು ಮಧ್ಯಪ್ರದೇಶವನ್ನು ಲೀಡ್​ ಮಾಡುವ ಮೂಲಕ ಇನ್ನೂ ಸಾಕಷ್ಟು ಕಲಿಯಬೇಕಿದೆ. ಆಗ ಮಾತ್ರ ನಾನು ಆರ್​​ಸಿಬಿ ಕ್ಯಾಪ್ಟನ್ ಆಗಲು ಸಾಧ್ಯ ಎಂದೆ. ಅಂದೇ ನನಗೆ ಆರ್​​ಸಿಬಿ ಕ್ಯಾಪ್ಟನ್​ ಆಗೋ ಸುಳಿವು ಸಿಕ್ಕಿತ್ತು. ನನಗೆ ತಂಡದ ನಾಯಕನ ಜವಾಬ್ದಾರಿ ಸಿಕ್ಕಿದ್ದು ಖುಷಿ ಕೊಟ್ಟಿದೆ ಎಂದರು.

ಇದನ್ನೂ ಓದಿ:ಕೊಹ್ಲಿ ಇದ್ರೂ ರಜತ್​ ಪಾಟಿದಾರ್​ಗೆ ಕ್ಯಾಪ್ಟನ್ಸಿ ಪಟ್ಟ ಕಟ್ಟಿದ್ದೇಕೆ? ಕೊನೆಗೂ ಅಸಲಿ ಕಾರಣ ಬಹಿರಂಗ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment