ಎದುರಾಳಿ ಪ್ಲಾನ್ ಉಲ್ಟಾ ಮಾಡೋ ನಂಬಿಕೆಯ ಆಟಗಾರ.. RCB ಆಪದ್ಬಾಂಧವ ಯಾರು?

author-image
Bheemappa
Updated On
ಎದುರಾಳಿ ಪ್ಲಾನ್ ಉಲ್ಟಾ ಮಾಡೋ ನಂಬಿಕೆಯ ಆಟಗಾರ.. RCB ಆಪದ್ಬಾಂಧವ ಯಾರು?
Advertisment
  • ಚೆನ್ನೈ ವಿರುದ್ಧ ಪಂದ್ಯದ ಕೊನೆಯ ಓವರ್​ನಲ್ಲಿ ಸ್ಫೋಟಕ ಬ್ಯಾಟಿಂಗ್
  • ಈ ಸಲ ಕಪ್ ನಮ್ದು ಆಗಬೇಕು ಆದರೆ ಇವರ ಪರ್ಫಾಮೆನ್ಸ್ ಬೇಕು
  • ಆಕ್ರಮಣಕಾರಿ ಬ್ಯಾಟಿಂಗ್ ನಡೆಸ್ತಿರುವ ನಾಯಕ ರಜತ್ ಪಾಟಿದಾರ್

ಸತತ ಎರಡು ಪಂದ್ಯಗಳ ಗೆಲುವು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆತ್ಮವಿಶ್ವಾಶ ಹೆಚ್ಚಿಸಿದೆ. ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಮೂರೂ ವಿಭಾಗಗಳಲ್ಲೂ ಸ್ಟ್ರಾಂಗ್ ಆಗಿ ಕಾಣ್ತಿರುವ ಆರ್​ಸಿಬಿ, ಈ ಸೀಸನ್​ನಲ್ಲಿ ಡಿಫರೆಂಟ್ ಟೀಮ್ ಆಗಿ ಕಾಣ್ತಿದೆ. ಇದಕ್ಕೆ ಕಾರಣ ಆ ಸೂಪರ್ ಸಿಕ್ಸ್ ಆಟಗಾರರು. ಯಾರವರು?.

ಕೆಕೆಆರ್​ ಹೋಂ ಗ್ರೌಂಡ್​ನಲ್ಲಿ 7 ವಿಕೆಟ್​ಗಳ ಭರ್ಜರಿ ಗೆಲುವು. ಚೆಪಾಕ್​ನಲ್ಲಿ ಚೆನ್ನೈ ಸೂಪರ್​ಕಿಂಗ್ಸ್​​ ವಿರುದ್ಧ, 50 ರನ್​ಗಳ ವಿಯಜೋತ್ಸವ. ಈ ಎರಡೂ ಗೆಲುವುಗಳು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪಾಲಿಗೆ ಅತ್ಯಂತ ವಿಶೇಷತೆ. ಯಾಕಂದ್ರೆ AWAY ಕಂಡೀಷನ್ಸ್​ನಲ್ಲಿ ಗೆಲ್ಲೋದು ಅಷ್ಟು ಸುಲಭವಲ್ಲ. ಹಾಗಾಗಿ ಈ ಗೆಲುವು, ಆರ್​ಸಿಬಿ ಆಟಗಾರರ ಆತ್ಮವಿಶ್ವಾಸ ಹೆಚ್ಚಿಸಿದೆ. ಈ ಸಂಭ್ರಮಕ್ಕೆ ಕಾರಣ ಇವರೇ.

publive-image

ಪವರ್​​ ಪ್ಲೇನಲ್ಲಿ 'ಸಾಲ್ಟ್​​ ಸಾಲಿಡ್' ಬ್ಯಾಟಿಂಗ್..!

ಡ್ಯಾಶಿಂಗ್​​ ಓಪನರ್ ಫಿಲ್ ಸಾಲ್ಟ್​, ಆಡಿದ ಎರಡೂ ಪಂದ್ಯಗಳಲ್ಲಿ ತಂಡಕ್ಕೆ ಸಾಲಿಡ್ ಸ್ಟಾರ್ಟ್ ನೀಡಿದ್ದಾರೆ. ಹಿಟ್​​ ಔಟ್ OR ಗೆಟ್​​ ಔಟ್​​ ಕಾನ್ಸೆಪ್ಟ್​​ನಲ್ಲಿ ಬ್ಯಾಟ್​​ ಬೀಸ್ತಿರುವ ಸಾಲ್ಟ್​​, ಎದುರಾಳಿಗಳಿಗೆ ತನ್ನ ತಾಕತ್ತು ಪ್ರದರ್ಶಿಸಿದ್ದಾರೆ. ಅಲ್ಲದೇ, ಪವರ್​ ಪ್ಲೇನಲ್ಲಿ ಪವರ್​ಫುಲ್ ಬ್ಯಾಟಿಂಗ್ ನಡೆಸಿ, ಆರ್​ಸಿಬಿ ರನ್​ವೇಗ ಹೆಚ್ಚಿಸ್ತಿದ್ದಾರೆ.

ಮಿಡಲ್ ಓವರ್ಸ್​​ಗೆ ಪಟಿದಾರ್ 'ರಾಜ'..!

ಕೆಕೆಆರ್​ ವಿರುದ್ಧ 16 ಎಸೆತಗಳಲ್ಲಿ 34 ರನ್. ಚೆನ್ನೈ ವಿರುದ್ಧ 32 ಎಸೆತಗಳಲ್ಲಿ 51 ರನ್. ಹೀಗೆ ಕ್ರೀಸ್​​ಗೆ ಎಂಟ್ರಿ ಕೊಟ್ಟ ಕ್ಷಣದಿಂದಲೇ ಆಕ್ರಮಣಕಾರಿ ಬ್ಯಾಟಿಂಗ್ ನಡೆಸ್ತಿರುವ ನಾಯಕ ರಜತ್ ಪಟಿದಾರ್, ಮಿಡಲ್ ಓವರ್​ಗಳಲ್ಲಿ ಆರ್​ಸಿಬಿ ಆಪತ್ಬಾಂಧವ. ಫಾಸ್ಟ್​ ಆಗಿ ರನ್​​ ಕಲೆಹಾಕೋ ಪಾಟಿದಾರ್, ಎದುರಾಳಿಗಳ ಪ್ಲಾನ್ ಉಲ್ಟಾ ಮಾಡ್ತಿದ್ದಾರೆ.

ಡೆತ್ ಓವರ್​ಗಳಲ್ಲಿ ಟಿಮ್ ಡೇವಿಡ್ 'ಸ್ಪೋಟ'..!

ನೈಟ್​ರೈಡರ್ಸ್​ ವಿರುದ್ಧ ಟಿಮ್ ಡೇವಿಡ್​​ಗೆ ಬ್ಯಾಟಿಂಗ್​ ಮಾಡೋ ಅವಕಾಶ ಸಿಗಲಿಲ್ಲ. ಆದ್ರೆ ಈ ಆಸಿಸ್ ಬ್ಯಾಟರ್​ಗೆ ಅವಕಾಶ ಸಿಕ್ಕಿದ್ರೆ, ಡ್ಯಾಮೇಜ್ ಮಾಡೋದು ಗ್ಯಾರಂಟಿ. ಇದಕ್ಕೆ ಬೆಸ್ಟ್ ಎಕ್ಸಾಂಪಲ್, ಸಿಎಸ್​​​ಕೆ ವಿರುದ್ಧದ ಪಂದ್ಯ. ಕೊನೆಯ ಓವರ್​ನಲ್ಲಿ ಸ್ಫೋಟಿಸಿದ ಡೇವಿಡ್, 3 ಸಿಕ್ಸರ್​ಗಳನ್ನ ಸಿಡಿಸಿ ಪಂದ್ಯದ ಗತಿಯನ್ನೇ ಬದಲಾಯಿಸಿದ್ರು.

ಆರ್​ಸಿಬಿಯ 'ಟ್ರಬಲ್ ಶೂಟರ್'​ ಹೇಝಲ್​ವುಡ್..!

ಪವರ್​ ಪ್ಲೇ ಇರ್ಲಿ, ಡೆತ್ ಓವರ್ಸ್ ಇರ್ಲಿ, ವೇಗಿ ಜೋಷ್ ಹೇಝಲ್​ವುಡ್​​​, ಆರ್​ಸಿಬಿಯ ಟ್ರಬಲ್ ಶೂಟರ್ ಅನ್ನೋದನ್ನ ಪ್ರೂವ್ ಮಾಡಿದ್ದಾರೆ. ಕೆಕೆಆರ್ ವಿರುದ್ಧ ತನ್ನ ಮೊದಲ ಓವರ್​ನಲ್ಲೇ ಬ್ರೇಕ್ ಥ್ರೂ ಕೊಟ್ಟ ಹೇಝಲ್​ವುಡ್, ಚೆನ್ನೈ ವಿರುದ್ಧವೂ ಮೊದಲ ಓವರ್​ನಲ್ಲೇ 2 ವಿಕೆಟ್ ಪಡೆದ್ರು. ಇನ್ನು ಡೆತ್ ಓವರ್​ಗಳಲ್ಲಿ ಹೇಝಲ್​ವುಡ್, ಸೂಪರ್​ ಸ್ಪೆಲ್ ಹಾಕೋ ಮೂಲಕ, ಬೆಂಗಳೂರು ತಂಡದ ಆತಂಕ ದೂರ ಮಾಡಿದ್ದಾರೆ.

ದಯಾಳ್ ಸ್ಪೆಲ್​​ಗೆ ಮಿಡಲ್​​​​​​​​ ಓವರ್ಸ್​ನಲ್ಲಿ 'ಯಶಸ್ಸು'..!

ಮಿಡಲ್ ಓವರ್​​​ಗಳಲ್ಲಿ ಎಡಗೈ ವೇಗಿ ಯಶ್​​ ದಯಾಳ್, ಸಿಕ್ಕಾಪಟ್ಟೆ ಎಫೆಕ್ಟೀವ್. ಪೇಸ್, ಸ್ವಿಂಗ್, ಸ್ಲೋ ಕಟ್ಟರ್ಸ್, ಬ್ಯಾಕ್ ಆಫ್ ದ ಹ್ಯಾಂಡ್​​ನಿಂದ ಡಿಫರೆಂಟ್ ವೇರಿಯೇಷನ್ಸ್ ಕ್ರಿಯೇಟ್ ಮಾಡೋ ಯಶ್, ಯಾವುದೇ ಪಿಚ್​ಗೂ ಬೇಗ ಅಡ್ಜೆಸ್ಟ್ ಆಗ್ತಾರೆ. ಡೆತ್ ಓವರ್​ಗಳಲ್ಲೂ ಅದ್ಭುತ ಎಕನಾಮಿ ಹೊಂದಿರುವ ದಯಾಳ್, ಆರ್​ಸಿಬಿಗೆ ಯಶಸ್ಸು ತಂದುಕೊಟ್ಟಿದ್ದಾರೆ.

ಇದನ್ನೂ ಓದಿ:ಮ್ಯಾಚ್ ಸೋತರೂ ಹಾರ್ದಿಕ್​ ಪಾಂಡ್ಯ 12 ಲಕ್ಷ ರೂಪಾಯಿ ದಂಡ ಕಟ್ಟಬೇಕು.. ಯಾಕೆ?

publive-image

ಭುವಿ ಎಂಟ್ರಿಯಿಂದ ಆರ್​ಸಿಬಿ ಪೇಸ್ ಅಟ್ಯಾಕ್ 'ಸ್ಟ್ರಾಂಗ್'..!

ಅನುಭವಿ ವೇಗಿ ಭುವನೇಶ್ವರ್ ಕುಮಾರ್ ಎಂಟ್ರಿಯಿಂದ, ಆರ್​ಸಿಬಿ ತಂಡಕ್ಕೆ ಹೊಸ ಉತ್ಸಾಹ ಬಂದಂತಾಗಿದೆ. ಸದ್ಯ ಆರ್​ಸಿಬಿಯ ಪೇಸ್ ಅಟ್ಯಾಕ್, ಸಿಕ್ಕಾಪಟ್ಟೆ ಸ್ಟ್ರಾಂಗ್ ಆಗಿ ಕಾಣ್ತಿದೆ. ಭುವನೇಶ್ವರ್, ಹೇಝಲ್​ವುಡ್, ಯಶ್ ದಯಾಳ್.. ಈ ಮೂವರು ವೇಗಿಗಳು ಡಿಫರೆಂಟ್ ಬೌಲರ್​ಗಳಾಗಿ ಗುರುತಿಸಿಕೊಂಡಿದ್ದಾರೆ. ಇದೇ ಆರ್​ಸಿಬಿಗೂ ಬೇಕಾಗಿದ್ದದ್ದು.

17 ವರ್ಷಗಳ ಬಳಿಕ ಚೆನ್ನೈನಲ್ಲಿ ಗೆಲುವು ದಾಖಲಿಸಿರುವ ಆರ್​ಸಿಬಿ, ಕಪ್ ವನವಾಸಕ್ಕೂ ಇದೇ ಸೀಸನ್​​ನಲ್ಲಿ ಅಂತ್ಯಗೊಳಿಸುವ ಲೆಕ್ಕಾಚಾರದಲ್ಲಿದೆ. ಈ ಸೂಪರ್ ಸಿಕ್ಸ್ ಆಟಗಾರರು ಕನ್ಸಿಸ್ಟೆಂಟ್ ಪರ್ಫಾಮೆನ್ಸ್​ ಮುಂದುವರೆಸಿದ್ರೆ, ಈ ಸಲ ಕಪ್ ನಮ್ದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment