newsfirstkannada.com

ಕೊಹ್ಲಿ ಹಾದಿಯಲ್ಲೇ ರೋಹಿತ್ ಶರ್ಮಾ.. ವಿಶ್ವಕಪ್​ ಗೆಲ್ಲಿಸಿಕೊಟ್ಟ ಬೆನ್ನಲ್ಲೇ ಶಾಕ್ ಕೊಟ್ಟ ಕ್ಯಾಪ್ಟನ್..!

Share :

Published June 30, 2024 at 8:10am

  ಟಿ20 ಕ್ರಿಕೆಟ್​ಗೆ ವಿದಾಯ ಹೇಳಿದ ರೋಹಿತ್ ಶರ್ಮಾ

  ಕೊಹ್ಲಿ, ರೋಹಿತ್, ದ್ರಾವಿಡ್ ನಿವೃತ್ತಿ ದೊಡ್ಡ ಹೊಡೆತ

  ಭಾರತಕ್ಕೆ ಟಿ20 ವಿಶ್ವಕಪ್ ಗೆಲ್ಲಿಸಿಕೊಟ್ಟ ನಾಯಕ ರೋಹಿತ್

ಭಾರತಕ್ಕೆ ಟಿ20 ವಿಶ್ವಕಪ್​ ಗೆಲ್ಲಿಸಿಕೊಟ್ಟ ನಾಯಕ ರೋಹಿತ್ T20 ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಟಿ 20 ವಿಶ್ವಕಪ್ ಗೆದ್ದ ನಂತರ, ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್​​ಗೆ ಗುಡ್​ಬೈ ಹೇಳಿ ಅಚ್ಚರಿ ಮೂಡಿಸಿದ್ದರು. ಈ ಬೆನ್ನಲ್ಲೇ ರೋಹಿತ್ ಶರ್ಮಾ ಕೂಡ ನಿವೃತ್ತಿ ಪಡೆಯುತ್ತಿರೋದಾಗಿ ಹೇಳಿದರು.

ಪಂದ್ಯ ಮುಗಿದ ಬಳಿಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ರೋಹಿತ್ ಶರ್ಮಾ.. ಇದು ನನ್ನ ಕೊನೆಯ ಪಂದ್ಯ. ವಿದಾಯ ಹೇಳಲು ಇದು ಸರಿಯಾದ ಸಮಯ. ನಾನು ಯಾವುದೇ ಬೆಲೆ ತೆತ್ತಾದರೂ ಪ್ರಶಸ್ತಿ ಗೆಲ್ಲಲು ಬಯಸಿದ್ದೆ. ಅದನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ಇದು ನಾನು ಬಯಸಿದ್ದು ಸಂಭವಿಸಿದೆ. ನನ್ನ ಜೀವನದಲ್ಲಿ ಇದಕ್ಕಾಗಿ ತುಂಬಾ ಹತಾಶನಾಗಿದ್ದೆ. ಈ ಬಾರಿ ಗೆದ್ದಿದ್ದಕ್ಕೆ ಖುಷಿಯಾಗಿದೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.

ಇದನ್ನೂ ಓದಿ:‘ನೀನೇ ನಾಯಕ..’ ಹಾರ್ದಿಕ್ ಪಾಂಡ್ಯರನ್ನು ತಬ್ಬಿ ಮುತ್ತಿಟ್ಟು ಕಣ್ಣೀರು ಇಟ್ಟ ರೋಹಿತ್ ಶರ್ಮಾ

2022ರ ಟಿ 20 ವಿಶ್ವಕಪ್‌ನಲ್ಲಿ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ಸೋತಾಗ ರೋಹಿತ್ ನಾಯಕರಾಗಿದ್ದರು. ಒಂದು ವರ್ಷದ ನಂತರ ಏಕದಿನ ವಿಶ್ವಕಪ್‌ ನಡೆದಿತ್ತು. ರೋಹಿತ್ ನಾಯಕತ್ವದಲ್ಲಿ ಫೈನಲ್ ಪ್ರವೇಶ ಮಾಡಿದ್ದ ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಸೋತಿತ್ತು.

ರೋಹಿತ್ ಶರ್ಮಾ ಭಾರತದ ಪರ ಟಿ20 ಕ್ರಿಕೆಟ್‌ನಲ್ಲಿ 159 ಪಂದ್ಯ ಆಡಿದ್ದಾರೆ. 4231 ರನ್ ಗಳಿಸಿರುವ ಅವರು, ಐದು ಶತಕಗಳು ಮತ್ತು 32 ಅರ್ಧ ಶತಕಗಳನ್ನು ಬಾರಿಸಿದ್ದಾರೆ. ಅವರು ಟೆಸ್ಟ್ ಮತ್ತು ಏಕದಿನ ಪಂದ್ಯವನ್ನು ಮುಂದುವರಿಸಲಿದ್ದಾರೆ. ರೋಹಿತ್ ಶರ್ಮಾ 2007ರಲ್ಲಿ T20 ವಿಶ್ವಕಪ್ ಗೆದ್ದ ತಂಡದ ಭಾಗವಾಗಿದ್ದರು. ಭಾರತಕ್ಕೆ ಎರಡು ಟಿ20 ವಿಶ್ವಕಪ್ ಗೆದ್ದ ಏಕೈಕ ಭಾರತೀಯ ಆಟಗಾರ ರೋಹಿತ್.

ಇದನ್ನೂ ಓದಿ:ಕೊಹ್ಲಿ ಮಾತ್ರವಲ್ಲ.. ಟೀಂ ಇಂಡಿಯಾಗೆ ಗೆದ್ದ ಖುಷಿಯಲ್ಲೇ ಡಬಲ್ ಶಾಕ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೊಹ್ಲಿ ಹಾದಿಯಲ್ಲೇ ರೋಹಿತ್ ಶರ್ಮಾ.. ವಿಶ್ವಕಪ್​ ಗೆಲ್ಲಿಸಿಕೊಟ್ಟ ಬೆನ್ನಲ್ಲೇ ಶಾಕ್ ಕೊಟ್ಟ ಕ್ಯಾಪ್ಟನ್..!

https://newsfirstlive.com/wp-content/uploads/2024/06/ROHIT-21.jpg

Load More