/newsfirstlive-kannada/media/post_attachments/wp-content/uploads/2024/06/Gambhir-Rohit.jpg)
ಇತ್ತೀಚೆಗೆ ನಡೆದ ಬಹುನಿರೀಕ್ಷಿತ 2024ರ ಟಿ20 ವಿಶ್ವಕಪ್ ಫೈನಲ್ನಲ್ಲಿ ಸೌತ್ ಆಫ್ರಿಕಾ ವಿರುದ್ಧ ಕ್ಯಾಪ್ಟನ್ ರೋಹಿತ್ ಶರ್ಮಾ ನೇತೃತ್ವದ ಟೀಮ್ ಇಂಡಿಯಾ ಗೆದ್ದು ಬೀಗಿದೆ. ಈ ಮೂಲಕ ಬರೋಬ್ಬರಿ 17 ವರ್ಷಗಳ ಬಳಿಕ ಟೀಮ್ ಇಂಡಿಯಾ ಟಿ20 ವಿಶ್ವಕಪ್ ಗೆದ್ದಿದೆ.
ಇನ್ನು, ವಿಶ್ವಕಪ್ ಗೆದ್ದ ಬಳಿಕ ಮಾತಾಡಿದ ಕ್ಯಾಪ್ಟನ್ ರೋಹಿತ್ ಶರ್ಮಾ ಅಂತರಾಷ್ಟ್ರೀಯ ಟಿ20 ಕ್ರಿಕೆಟ್ಗೆ ಗುಡ್ ಬೈ ಹೇಳಿದ್ರು. ಈ ಬೆನ್ನಲ್ಲೇ ತನ್ನ ನಿರ್ಧಾರದ ಬಗ್ಗೆ ರೋಹಿತ್ ಶರ್ಮಾ ಬೇಸರ ಕೂಡ ಹೊರಹಾಕಿದ್ರು.
ನಾನು ಟಿ20 ಕ್ರಿಕೆಟ್ ಫಾರ್ಮೆಟ್ನಿಂದ ರಿಟೈರ್ ಆಗೋ ಯೋಚಕೆ ಮಾಡಿರಲಿಲ್ಲ. ಆದರೆ, ಸಂದರ್ಭ ಹಾಗೇ ಮಾಡಿಬಿಡ್ತು. ಟಿ20 ವಿಶ್ವಕಪ್ ಗೆಲ್ಲುವುದಕ್ಕಿಂತ ಖುಷಿ ವಿಚಾರ ಮತ್ತೊಂದಿಲ್ಲ. ಹಾಗಾಗಿ ಟಿ20 ಕ್ರಿಕೆಟ್ ಫಾರ್ಮೆಟ್ಗೆ ಗುಡ್ ಬೈ ಹೇಳಿದ್ದೇನೆ ಎಂದು ಬೇಸರ ಹೊರಹಾಕಿದ್ರು. ಜತೆಗೆ ಮುಂದೆ ಐಪಿಎಲ್ ಆಡುವುದಾಗಿ ಹೇಳಿದ್ರು.
Rohit Sharma: "I was not in the mood to retire from T20I, but the situation has arisen, so I decided to do so."
Is he targeting Gambhir? Perhaps he is thinking of building a new team. He might have thought of retiring on his own. pic.twitter.com/bD47G9UXUV
— Jod Insane (@jod_insane)
Rohit Sharma: "I was not in the mood to retire from T20I, but the situation has arisen, so I decided to do so."
Is he targeting Gambhir? Perhaps he is thinking of building a new team. He might have thought of retiring on his own. pic.twitter.com/bD47G9UXUV— 𝐉𝐨𝐝 𝐈𝐧𝐬𝐚𝐧𝐞 (@jod_insane) June 30, 2024
">June 30, 2024
ಸದ್ಯ ರೋಹಿತ್ ಶರ್ಮಾ ಹೇಳಿಕೆ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ಆಗುತ್ತಿದೆ. ಟೀಮ್ ಇಂಡಿಯಾ ಮುಖ್ಯ ಕೋಚ್ ಸ್ಥಾನದಲ್ಲಿ ರಾಹುಲ್ ದ್ರಾವಿಡ್ ಅವರು ಕೆಳಗಿಳಿಯುತ್ತಿದ್ದಾರೆ. ಇವರ ಸ್ಥಾನಕ್ಕೆ ಗೌತಮ್ ಗಂಭೀರ ಕೋಚ್ ಆಗಿ ಬರಲಿದ್ದಾರೆ. ಅಷ್ಟೇ ಮೂರು ಫಾರ್ಮೇಟ್ಗೂ ಪ್ರತ್ಯೇಕ ಆಟಗಾರರನ್ನು ಆಯ್ಕೆ ಮಾಡೋ ಪ್ಲಾನ್ ಗಂಭೀರ್ ಅವರದ್ದು. ಜತೆಗೆ ಕೊಹ್ಲಿ, ರೋಹಿತ್ ವೈಟ್ ಬಾಲ್ ಕ್ರಿಕೆಟ್ನಿಂದ ಹೊರ ಹೋಗಬೇಕು ಅನ್ನೋ ಡಿಮ್ಯಾಂಡ್ ಕೂಡ ಇದೆಯಂತೆ. ಹಾಗಾಗಿ ರೋಹಿತ್, ಕೊಹ್ಲಿ ಟಿ20 ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ:ರಾಹುಲ್ ದ್ರಾವಿಡ್ಗೆ ಅಭಿನಂದನೆಗಳ ಸುರಿಮಳೆ.. ಹೆಮ್ಮೆಯ ಕನ್ನಡಿಗನ ಬಗ್ಗೆ PM ಮೋದಿ ಏನಂದ್ರು?
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ