/newsfirstlive-kannada/media/post_attachments/wp-content/uploads/2025/02/ROHIT_SHARMA_JOSH.jpg)
ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಈಗಾಗಲೇ ಒಂದು ಪಂದ್ಯದವನ್ನು ಟೀಮ್ ಇಂಡಿಯಾ ಗೆದ್ದುಕೊಂಡಿದೆ. ಸದ್ಯ ನಡೆಯುತ್ತಿರುವ 2ನೇ ಪಂದ್ಯದಲ್ಲಿ ಆಂಗ್ಲರ ಕ್ಯಾಪ್ಟನ್ ಜೋಶ್ ಬಟ್ಲರ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಭಾರತ ತಂಡವನ್ನು ಫೀಲ್ಡಿಂಗ್ಗೆ ಆಹ್ವಾನಿಸಿದ್ದಾರೆ.
ರೋಹಿತ್ ಶರ್ಮಾ 2ನೇ ಪಂದ್ಯದಲ್ಲೂ ಟಾಸ್ ಸೋತಿದ್ದಾರೆ. ಆದರೆ ಗೆಲುವು ಯಾರ ಕಡೆ ಇದೆ ಎಂಬುದು ನಿಗೂಢ. ಪಂದ್ಯದ ಅಂತಿಮದಲ್ಲಿ ಇದಕ್ಕೆ ಉತ್ತರ ಸಿಗಲಿದೆ. ರೋಹಿತ್ ಶರ್ಮಾ ಈ ಪಂದ್ಯವನ್ನು ಗೆದ್ದರೇ ಸರಣಿ ವಶಕ್ಕೆ ಪಡೆದಂತೆ ಆಗಲಿದೆ. ಇನ್ನು ಮೊದಲ ಪಂದ್ಯದಲ್ಲಿ ಆರಂಭಿಕ ಬ್ಯಾಟ್ಸ್ಮನ್ಗಳು ವಿಫಲವಾಗಿದ್ದರು. ನಾಯಕ ರೋಹಿತ್ ಶರ್ಮಾ ಹಾಗೂ ಯುವ ಪ್ಲೇಯರ್ ಯಶಸ್ವಿ ಜೈಸ್ವಾಲ್ ಬ್ಯಾಟಿಂಗ್ನಲ್ಲಿ ವೈಫಲ್ಯ ಅನುಭವಿಸಿದ್ದರು.
ಆದರೆ ಮಧ್ಯಮ ಕ್ರಮಾಂಕದಲ್ಲಿ ಮೂಡಿ ಬಂದ ಅದ್ಭುತ ಆಟದಿಂದ ಟೀಮ್ ಇಂಡಿಯಾ ಗೆಲುವು ಸಾಧಿಸಿತ್ತು. ಸದ್ಯ 2ನೇ ಪಂದ್ಯದಲ್ಲಿ ರೋಹಿತ್ ಶರ್ಮಾ ಬಳಗದಲ್ಲಿ ಶ್ರೇಯಸ್ ಅಯ್ಯರ್, ಅಕ್ಷರ್ ಪಟೇಲ್ ಸೇರಿದಂತೆ ಯುವ ಆಟಗಾರರು ಗಮನ ಸೆಳೆಯುತ್ತಿದ್ದಾರೆ. ಸದ್ಯ ಇಂದಿನ ಪಂದ್ಯದಲ್ಲಿ ರೋಹಿತ್ ಶರ್ಮಾ, ಶುಭಮನ್ ಗಿಲ್ ಓಪನರ್ ಆಗಿ ಕ್ರೀಸ್ಗೆ ಆಗಮಿಸಲಿದ್ದಾರೆ. ವಿರಾಟ್ ಕೊಹ್ಲಿ ಆಗಮನದ ಹಿನ್ನೆಲೆಯಲ್ಲಿ ಯುವ ಆಟಗಾರ ಯಶಸ್ವಿ ಜೈಸ್ವಾಲ್ ಅವರಿಗೆ ಬೆಂಚ್ಗೆ ಸೀಮಿತ ಮಾಡಲಾಗಿದೆ.
ಇದನ್ನೂ ಓದಿ:ವಿರಾಟ್ ಎಂಟ್ರಿ ಆದರೆ ಯಾರಿಗೆ ಕೊಕ್.. ಈ ಸ್ಟೇಡಿಯಂನಲ್ಲಿ ಕೊಹ್ಲಿ ಪರ್ಫಾಮೆನ್ಸ್ ಹೇಗಿದೆ?
ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ಸರಣಿಯಿಂದಲೂ ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತಿರುವ ಕಿಂಗ್ ಕೊಹ್ಲಿ ಈ ಪಂದ್ಯದಲ್ಲಾದರೂ ಸುಧಾರಿಸಿಕೊಳ್ಳಬೇಕಿದೆ. ಏಕೆಂದರೆ ಚಾಂಪಿನ್ಸ್ ಟ್ರೋಫಿಗೆ ಈ ಪಂದ್ಯಗಳಿಂದಲೇ ತಯಾರಿ ನಡೆದಿದೆ ಎನ್ನಬಹುದು. ಹೀಗಾಗಿ ಇಲ್ಲಿ ಚೆನ್ನಾಗಿ ಪರ್ಫಾಮೆನ್ಸ್ ಮಾಡಿದರೆ ಚಾಂಪಿಯನ್ ಟ್ರೋಫಿಯಲ್ಲಿ ಉತ್ತಮವಾಗಿ ಬ್ಯಾಟಿಂಗ್ ಮಾಡುವ ಸಾಧ್ಯತೆ ಇರುತ್ತದೆ.
ಗಿಲ್, ಶ್ರೇಯಸ್ ಅಯ್ಯರ್ ಈಗಾಗಲೇ ಮೊದಲ ಪಂದ್ಯದಲ್ಲಿ ಅದ್ಭುತವಾದ ಪರ್ಫಾಮೆನ್ಸ್ ನೀಡಿದ್ದಾರೆ. ಈ ಪಂದ್ಯದಲ್ಲೂ ಅದನ್ನೇ ಮುಂದುವರೆಸಿಕೊಂಡುವ ಹೋಗುವ ನಿರೀಕ್ಷೆ ಇದೆ. ಅಕ್ಷರ್ ಪಟೇಲ್ ಹಾಗೂ ಜಡೇಜಾ ಮತ್ತೆ ಆಲ್ರೌಂಡರ್ ಪ್ರದರ್ಶನ ತೋರಲಿದ್ದಾರೆ. ವಿಕೆಟ್ ಕೀಪರ್ ಆಗಿ ಕಣದಲ್ಲಿರುವ ಕನ್ನಡಿಗ ಕೆ.ಎಲ್ ರಾಹುಲ್ ಈ ಪಂದ್ಯದಲ್ಲಿ ಮತ್ತೆ ಸ್ಥಾನ ನೀಡಲಾಗಿದ್ದು ಸುಧಾರಿಸಿಕೊಂಡು ಆಡಬೇಕಿದೆ. ಇಲ್ಲದಿದ್ದರೇ ಮುಂದಿನ ಪಂದ್ಯಕ್ಕೆ ರಿಷಬ್ ಪಂತ್ ಆಗಮನ ಆಗಬಹುದು.
ಟೀಮ್ ಇಂಡಿಯಾದ ಪ್ಲೇಯಿಂಗ್- 11
ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್ (ಉಪನಾಯಕ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ರವೀಂದ್ರ ಜಡೇಜಾ, ಹರ್ಷಿತ್ ರಾಣಾ, ಮೊಹಮ್ಮದ್ ಶಮಿ, ವರುಣ್ ಚಕ್ರವರ್ತಿ
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ