ನಿವೃತ್ತಿ ಬಗ್ಗೆ ಮಾತನಾಡಿ ಸ್ಪಷ್ಟನೆ ಕೊಟ್ಟ ಕ್ಯಾಪ್ಟನ್ ರೋಹಿತ್ ಶರ್ಮಾ..!

author-image
Ganesh
Updated On
ಆ ನೋವು ಮರೆಯಲು ರೋಹಿತ್ ಶಪಥ, ಇಂದಿನಿಂದಲೇ ಸಿದ್ಧತೆ ಆರಂಭಿಸಿದ ನಾಯಕ..!
Advertisment
  • ರೋಹಿತ್ ಶರ್ಮಾ ODIಗೆ ನಿವೃತ್ತಿ ಪಡೆಯುವ ವದಂತಿ
  • ಚಾಂಪಿಯನ್ಸ್ ಟ್ರೋಫಿ ಗೆದ್ದ ಬಳಿಕ ರೋಹಿತ್ ಮಾತು
  • ನಿನ್ನೆಯ ಪಂದ್ಯದಲ್ಲಿ 76 ರನ್​​ಗಳಿಸಿರುವ ಕ್ಯಾಪ್ಟನ್ ರೋಹಿತ್

2025ರ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿ ಪ್ರಾರಂಭಕ್ಕೂ ಮೊದಲು ಕ್ಯಾಪ್ಟನ್ ರೋಹಿತ್ ಶರ್ಮಾ ಟೂರ್ನಿ ನಂತರ ನಿವೃತ್ತಿ ಪಡೆಯಲಿದ್ದಾರೆ ಎಂಬ ವದಂತಿ ಇತ್ತು. ಫೈನಲ್ ಪಂದ್ಯದ ವೇಳೆ ಊಹಾಪೋಹ ಜೋರಾಗಿತ್ತು. ಚಾಂಪಿಯನ್ಸ್ ಟ್ರೋಫಿಯಲ್ಲಿ ಐತಿಹಾಸಿಕ ಸಾಧನೆ ಬೆನ್ನಲ್ಲೇ ನಾಯಕ ರೋಹಿತ್, ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ನಿವೃತ್ತಿ ಹೊಂದುವ ಯಾವುದೇ ಪ್ಲಾನ್ ಇಲ್ಲ ಎಂದಿದ್ದಾರೆ.

ಇದನ್ನೂ ಓದಿ: ಕ್ಯಾಪ್ಟನ್ ರೋಹಿತ್ ಶರ್ಮಾಗೆ Hats off ಎಂದ ಕಾಂಗ್ರೆಸ್ ನಾಯಕಿ.. ಇಂದು ಹೇಗೆಲ್ಲ ಬಣ್ಣಿಸಿದರು..?

publive-image

ಟ್ರೋಫಿ ಗೆದ್ದ ನಂತರ ಮಾತನಾಡಿರುವ ರೋಹಿತ್ ಶರ್ಮಾ, ಭವಿಷ್ಯದ ಬಗ್ಗೆ ಯಾವುದೇ ಯೋಜನೆ ಇಲ್ಲ. ಏನಾಗುತ್ತಿದೆಯೋ ಅದು ಮುಂದುವರಿಯುತ್ತದೆ. ಏಕದಿನ ಕ್ರಿಕೆಟ್​ನಿಂದ ನಿವೃತ್ತಿ ಹೊಂದುತ್ತಿಲ್ಲ. ದಯವಿಟ್ಟು ವದಂತಿಗಳಿಗೆ ಪ್ರಾಮುಖ್ಯತೆ ನೀಡಬೇಡಿ ಎಂದು ಪತ್ರಿಕಾಗೋಷ್ಟಿಯಲ್ಲಿ ಸ್ಪಷ್ಟಪಡಿಸಿದ್ದಾರೆ.

ನ್ಯೂಜಿಲೆಂಡ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಭಾರತ 4 ವಿಕೆಟ್‌ಗಳ ಜಯ ಸಾಧಿಸಿದ ನಂತರ ಈ ಹೇಳಿಕೆ ನೀಡಿದ್ದಾರೆ. ನಿನ್ನೆಯ ಪಂದ್ಯದಲ್ಲಿ ರೋಹಿತ್ 76 ರನ್‌ಗಳನ್ನು ಚಚ್ಚಿದ್ದಾರೆ. ಇನ್ನು ರೋಹಿತ್ ಶರ್ಮಾ, ಶ್ರೇಯಸ್ ಅಯ್ಯರ್ ಅವರನ್ನು ಹೀರೋ ಎದರು. ಜೊತೆಗೆ ಟ್ರೋಫಿಯನ್ನು ದೇಶಕ್ಕೆ ಅರ್ಪಿಸಿದರು.

ಇದನ್ನೂ ಓದಿ: ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಂ ಇಂಡಿಯಾ ಎಷ್ಟು ICC ಟ್ರೋಫಿ ಗೆದ್ದಿದೆ..?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment