newsfirstkannada.com

ಟಿ20 ವಿಶ್ವಕಪ್​​ಗೆ ಟೀಂ ಇಂಡಿಯಾದಲ್ಲಿ ಯಾರಿಗೆ ಸ್ಥಾನ..? ಅಸಲಿ ಸತ್ಯ ಬಿಚ್ಚಿಟ್ಟ ಕ್ಯಾಪ್ಟನ್​ ರೋಹಿತ್​!

Share :

Published January 18, 2024 at 5:30pm

Update January 18, 2024 at 5:32pm

    ಅಫ್ಘಾನ್​​ ವಿರುದ್ಧದ ಟಿ20 ಸೀರೀಸ್​ ಗೆದ್ದು ಬೀಗಿದ ಟೀಂ ಇಂಡಿಯಾ

    ಟಿ20 ವಿಶ್ವಕಪ್​​ಗೆ ಟೀಂ ಇಂಡಿಯಾದ ತಯಾರಿ ಬಗ್ಗೆ ಏನಂದ್ರು ಕ್ಯಾಪ್ಟನ್​?

    ಟೀಂ ಇಂಡಿಯಾದ ತಯಾರಿ ಬಗ್ಗೆ ಮಾತಾಡಿದ ನಾಯಕ ರೋಹಿತ್​ ಶರ್ಮಾ

ಅಫ್ಘಾನ್​​ ತಂಡದ ವಿರುದ್ಧದ ಟಿ20 ಸೀರೀಸ್​ನಲ್ಲಿ ಟೀಂ ಇಂಡಿಯಾ ಗೆದ್ದು ಬೀಗಿದೆ. ಈ ಬೆನ್ನಲ್ಲೇ 2024ರ ಇಂಡಿಯನ್​ ಪ್ರೀಮಿಯರ್​ ಲೀಗ್​ ಶುರುವಾಗಲಿದ್ದು, ಇದಾದ ಬೆನ್ನಲ್ಲೇ ಟಿ20 ವಿಶ್ವಕಪ್ ನಡೆಯಲಿದೆ. ಹೀಗಾಗಿ ಟೀಂ ಇಂಡಿಯಾ ಈಗಿನಿಂದಲೇ ಭರ್ಜರಿ ತಯಾರಿ ಶುರು ಮಾಡಿದೆ.

ಇನ್ನು, ವಿಶ್ವಕಪ್​​ಗೆ ಆಟಗಾರರ ಆಯ್ಕೆ ಬಗ್ಗೆ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮಾತಾಡಿದ್ದಾರೆ. ಟಿ20 ವಿಶ್ವಕಪ್​ಗೆ ಇನ್ನೂ ಟೀಂ ಇಂಡಿಯಾ ಸೆಲೆಕ್ಟ್​ ಆಗಿಲ್ಲ. ಸದ್ಯ ಕೇವಲ 10 ಆಟಗಾರರು ಮಾತ್ರ ತಲೆಯಲ್ಲಿ ಇದ್ದಾರೆ. ನಾವು 15 ಸದಸ್ಯರ ತಂಡ ಅಂತಿಮಗೊಳಿಸಲು ಇನ್ನೂ 5 ಮಂದಿ ಬೇಕಾಗಿದ್ದಾರೆ ಎಂದರು.

ಪರಿಸ್ಥಿತಿಗಳಿಗೆ ಅನುಗುಣವಾಗಿ ಟೀಮ್​ ಪ್ಲಾನ್​ ಮಾಡಲಿದ್ದೇವೆ. ವೆಸ್ಟ್ ಇಂಡೀಸ್‌ನಲ್ಲಿ ವಿಶ್ವಕಪ್​​ ನಡೆಯಲಿದೆ. ಇಲ್ಲಿ ಪಿಚ್​ ಸ್ಲೋ ಆಗಿರೋ ಕಾರಣ ಹೊಸ ಸ್ಟ್ರಾಟಜಿ ರೂಪಿಸಲಿದ್ದೇವೆ. ಅದಕ್ಕೆ ತಕ್ಕಂತೆ ತಂಡ ಆಯ್ಕೆಯಾಗಲಿದೆ ಎಂದರು.

ಇತ್ತೀಚೆಗೆ ನಡೆದ ಅಫ್ಘಾನ್​​ ವಿರುದ್ಧ ಟಿ20 ಪಂದ್ಯದಲ್ಲಿ ಕ್ಯಾಪ್ಟನ್​ ರೋಹಿತ್​ ಶರ್ಮಾ ಸಿಡಿಲಬ್ಬರದ ಶತಕ ಸಿಡಿಸಿದರು. ಈ ಮೂಲಕ ಮ್ಯಾನ್​ ಆಫ್​ ದಿ ಮ್ಯಾಚ್​​ಗೆ ಭಾಜನರಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಟಿ20 ವಿಶ್ವಕಪ್​​ಗೆ ಟೀಂ ಇಂಡಿಯಾದಲ್ಲಿ ಯಾರಿಗೆ ಸ್ಥಾನ..? ಅಸಲಿ ಸತ್ಯ ಬಿಚ್ಚಿಟ್ಟ ಕ್ಯಾಪ್ಟನ್​ ರೋಹಿತ್​!

https://newsfirstlive.com/wp-content/uploads/2023/06/DRAVID_ROHIT-1.jpg

Load More