/newsfirstlive-kannada/media/post_attachments/wp-content/uploads/2024/06/ROHIT-SHARMA-14.jpg)
ಇತ್ತೀಚೆಗೆ ನಡೆದ ಆಸ್ಟ್ರೇಲಿಯಾ ಪ್ರವಾಸದಲ್ಲಿ ಟೀಂ ಇಂಡಿಯಾಗೆ ದೊಡ್ಡ ಆಘಾತದ ಸುದ್ದಿ ಒಂದು ಕಾದಿತ್ತು. ಬಾರ್ಡರ್ ಗವಾಸ್ಕರ್ ಟೆಸ್ಟ್ ಸೀರಿಸ್ ಮಧ್ಯೆಯೇ ಟೀಮ್ ಇಂಡಿಯಾದ ಸ್ಟಾರ್ ಆಲ್ರೌಂಡರ್ ಆರ್. ಅಶ್ವಿನ್ ಅವರು ತಮ್ಮ ಅಂತರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ರು. ಅಶ್ವಿನ್ ಅವರ ಈ ದಿಢೀರ್ ನಿರ್ಧಾರ ಭಾರತ ಕ್ರಿಕೆಟ್ ಅಭಿಮಾನಿಗಳ ಅಚ್ಚರಿಗೆ ಕಾರಣವಾಗಿತ್ತು.
ಆರ್. ಅಶ್ವಿನ್ ನಿವೃತ್ತಿ ಘೋಷಿಸಿ ಇಷ್ಟು ದಿನ ಆಯ್ತು. ಈಗ ಮೊದಲ ಬಾರಿಗೆ ಕ್ಯಾಪ್ಟನ್ ರೋಹಿತ್ ಶರ್ಮಾ ಮಾತಾಡಿದ್ದಾರೆ. ಟೀಮ್ ಇಂಡಿಯಾದ ಸ್ಟಾರ್ ಆಲ್ರೌಂಡರ್ ಆರ್. ಅಶ್ವಿನ್. ಇವರು ಮ್ಯಾಚ್ ವಿನ್ನರ್ ಕೂಡ. ಇಂತಹ ಸ್ಪಿನ್ ಮಾಂತ್ರಿಕನನ್ನು ಪಡೆಯಲು ಭಾರತ ಕ್ರಿಕೆಟ್ ತಂಡ ಅದೃಷ್ಟ ಮಾಡಿತ್ತು ಎಂದರು.
ಭಾರತ ಕ್ರಿಕೆಟ್ ತಂಡಕ್ಕೆ ಅಶ್ವಿನ್ ಅವರ ಕೊಡುಗೆ ದೊಡ್ಡದು. ತವರಿನಲ್ಲಿ ಅಶ್ವಿನ್ ಅವರ ಚಮತ್ಕಾರದಿಂದ ಬಹಳಷ್ಟು ಟೆಸ್ಟ್‌ಗಳನ್ನ ಗೆದ್ದಿದ್ದೇವೆ. ಹೀಗಾಗಿ ಇವರು ಬಿಗ್ ಮ್ಯಾಚ್ ವಿನ್ನರ್ ಅನ್ನೋದರಲ್ಲಿ ಸಂಶಯವೇ ಇಲ್ಲ. ಇವರನ್ನು ಕೆಲವು ಪಂದ್ಯಗಳಲ್ಲಿ ಬೆಂಚ್ ಕಾಯಿಸಿದ್ದು ನಿಜ. ಎಷ್ಟೇ ದೊಡ್ಡ ಆಟಗಾರನಾದ್ರೂ ಕೆಲವು ಪಂದ್ಯಗಳಲ್ಲಿ ಬೆಂಚ್ ಕಾಯಲೇಬೇಕು. ನಾನು ಹಲವು ಬಾರಿ ಬೆಂಚ್ ಕಾದಿದ್ದೇನೆ. ಇದು ಅವರಿಗೆ ಬೇಸರ ತರಿಸಿರಬಹುದು ಎಂದರು.
ಆರಂಭದಲ್ಲಿ ಅಶ್ವಿನ್ ಆರಂಭಿಕ ಬ್ಯಾಟ್ಸ್‌ಮನ್ ಆಗಿದ್ದ. ಕೆಲವು ವರ್ಷಗಳ ಬಳಿಕ ಅಶ್ವಿನ್ ಸ್ಪಿನ್ನರ್ ಆದರು. ಅವರು 5 ಮತ್ತು 7 ವಿಕೆಟ್ ತೆಗೆದಾಗ ನನಗೆ ಅಚ್ಚರಿ ಆಗುತ್ತಿತ್ತು. ಬ್ಯಾಟ್ಸ್‌ಮನ್ ಆಗಿದ್ದ ಇವರು ಬೌಲರ್ ಆಗಿ ಬದಲಾಗಿದ್ದು ಶಾಕಿಂಗ್ ಸುದ್ದಿ ಎಂದರು.
ಇದನ್ನೂ ಓದಿ:RCB ಮಾಜಿ ಆಟಗಾರನ ಸಂಸಾರದಲ್ಲಿ ಬಿರುಗಾಳಿ; ಸ್ಟಾರ್ ಕ್ರಿಕೆಟರ್ ಡಿವೋರ್ಸ್ ಕೇಸ್ಗೆ ಮೇಜರ್ ಟ್ವಿಸ್ಟ್
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ