‘ಟೀಮ್​ ಇಂಡಿಯಾದ ಸೋಲಿಗೆ ಇವರೇ ಕಾರಣ’- ಕ್ಯಾಪ್ಟನ್​​ ರೋಹಿತ್​ ಬಿಚ್ಚಿಟ್ಟ ಸ್ಫೋಟಕ ಸತ್ಯ

author-image
Ganesh Nachikethu
Updated On
‘ಟೀಮ್​ ಇಂಡಿಯಾದ ಸೋಲಿಗೆ ಇವರೇ ಕಾರಣ’- ಕ್ಯಾಪ್ಟನ್​​ ರೋಹಿತ್​ ಬಿಚ್ಚಿಟ್ಟ ಸ್ಫೋಟಕ ಸತ್ಯ
Advertisment
  • ಅಡಿಲೇಡ್​ನಲ್ಲಿ ನಡೆದ 2ನೇ ಟೆಸ್ಟ್​ ಪಂದ್ಯದಲ್ಲಿ ಹೀನಾಯ ಸೋಲು
  • 2ನೇ ಟೆಸ್ಟ್​ ಪಂದ್ಯದಲ್ಲಿ ಭಾರತ ತಂಡದ ಸೋಲಿಗೆ ಕಾರಣವೇನು..?
  • ಟೀಮ್​ ಇಂಡಿಯಾ ಸೋಲಿಗ ಬಗ್ಗೆ ಕ್ಯಾಪ್ಟನ್​ ರೋಹಿತ್​​ ಏನಂದ್ರು?

ಪರ್ತ್​​ನಲ್ಲಿ ನಡೆದ ಮೊದಲ ಟೆಸ್ಟ್​ ಪಂದ್ಯದಲ್ಲಿ 290ಕ್ಕೂ ಹೆಚ್ಚು ರನ್​​ಗಳಿಂದ ಗೆದ್ದು ವಿಶ್ವದಾಖಲೆ ಬರೆದಿದ್ದ ಟೀಮ್​​ ಇಂಡಿಯಾ 2ನೇ ಮ್ಯಾಚ್​​ನಲ್ಲಿ ಆಸ್ಟ್ರೇಲಿಯಾ ತಂಡದ ವಿರುದ್ಧ ಮುಗ್ಗರಿಸಿದೆ. ಅಡಿಲೇಡ್​ನಲ್ಲಿ ನಡೆದ 2ನೇ ಟೆಸ್ಟ್​ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೀಮ್​ ಇಂಡಿಯಾ ಹೀನಾಯ ಸೋಲು ಕಂಡಿದೆ.

ಇನ್ನು, ಟೀಮ್​ ಇಂಡಿಯಾ ಸೋಲಿನ ಬಳಿಕ ಕ್ಯಾಪ್ಟನ್​ ರೋಹಿತ್​ ಶರ್ಮಾ ಮಾತಾಡಿದ್ದಾರೆ. ಇದು ನಮಗೆ ನಿರಾಶಾದಾಯಕ ವಾರ. ನಾವು ಉತ್ತಮ ಪ್ರದರ್ಶನ ನೀಡಲಿಲ್ಲ. ಆಸ್ಟ್ರೇಲಿಯಾ ನಮಗಿಂತ ಚೆನ್ನಾಗಿ ಆಡಿದೆ. ಸಿಕ್ಕ ಅವಕಾಶ ಬಳಸಿಕೊಳ್ಳುವಲ್ಲಿ ವಿಫಲರಾಗಿದ್ದೇವೆ ಎಂದರು.

ಮೊದಲ ಟೆಸ್ಟ್​ ಬಗ್ಗೆ ಏನಂದ್ರು ರೋಹಿತ್​?

ಮೊದಲ ಟೆಸ್ಟ್​ ಪಂದ್ಯದಲ್ಲಿ ನಾವು ವಿಶೇಷ ದಾಖಲೆ ಮಾಡಿದ್ದೆವು. ಪ್ರತಿ ಟೆಸ್ಟ್ ಪಂದ್ಯದಲ್ಲೂ ಹಲವಾರು ಸವಾಲುಗಳು ಇರುತ್ತವೆ. ಪಿಂಕ್‌ ಬಾಲ್‌ನೊಂದಿಗೆ ಆಡುವುದು ಸವಾಲಿನ ಆಟ ಎಂಬುದು ನಮಗೆ ಗೊತ್ತಿತ್ತು. ಗಬ್ಬಾದಲ್ಲಿ ನಡೆಯಲಿರೋ 3ನೇ ಟೆಸ್ಟ್​​ಗಾಗಿ ಎದುರು ನೋಡುತ್ತಿದ್ದೇವೆ ಎಂದರು.

ಸೋಲಿಗೆ ಕಾರಣ ಬಿಟ್ಟಿಟ್ಟ ರೋಹಿತ್​​

3ನೇ ಟೆಸ್ಟ್​​ನಲ್ಲಿ ಚೆನ್ನಾಗಿ ಆಡುವ ಭರವಸೆ ಹೊಂದಿದ್ದೇವೆ. ಪರ್ತ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಕಾರಣದಿಂದಲೇ ಗೆದ್ದೆವು. ಅಡಿಲೇಡ್‌ನಲ್ಲಿ ಟೀಮ್​ ಇಂಡಿಯಾದ ಆಟಗಾರರು ಚೆನ್ನಾಗಿ ಆಡಲಿಲ್ಲ. ಹಾಗಾಗಿ ಸೋತೆವು. ಇದರ ಕುರಿತು ಚರ್ಚೆ ಮಾಡುತ್ತೇವೆ ಎಂದರು.

ಭಾರತಕ್ಕೆ ಹೀನಾಯ ಸೋಲು

ಪಂದ್ಯದ ಮೊದಲ ಇನ್ನಿಂಗ್ಸ್​​ನಲ್ಲಿ ಬ್ಯಾಟ್ ಮಾಡಿದ ಭಾರತ 180 ರನ್‌ಗಳಿಗೆ ಆಲೌಟ್ ಆಗಿತ್ತು. ಇದಕ್ಕೆ ಉತ್ತರವಾಗಿ ಆಸ್ಟ್ರೇಲಿಯಾ 337 ರನ್​ಗಳಿಸಿ 157 ರನ್ ಗಳ ಬೃಹತ್ ಮುನ್ನಡೆ ಸಾಧಿಸಿತ್ತು. 2ನೇ ಇನ್ನಿಂಗ್ಸ್‌ನಲ್ಲಿ ಭಾರತ 175 ರನ್‌ಗಳಿಗೆ ಆಲೌಟ್ ಆಗಿತ್ತು. ಆಸ್ಟ್ರೇಲಿಯಾ 19 ರನ್‌ಗಳ ಗುರಿಯನ್ನು ಕೇವಲ 3.1 ಓವರ್​​ನಲ್ಲಿ ಮುಟ್ಟಿತು.

ಇದನ್ನೂ ಓದಿ:ಒಂದು ಸೋಲು, 3ನೇ ಸ್ಥಾನಕ್ಕೆ ಕುಸಿದ ಟೀಮ್ ಇಂಡಿಯಾ.. ಫಸ್ಟ್, ಸೆಕೆಂಡ್ ಯಾವ ಟೀಮ್ ಇವೆ?

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment