/newsfirstlive-kannada/media/post_attachments/wp-content/uploads/2024/11/Rohit-Sharma_IND-Test.jpg)
ಟೀಮ್ ಇಂಡಿಯಾವನ್ನು ನ್ಯೂಜಿಲೆಂಡ್ ತಂಡ 3-0 ಅಂತರದಲ್ಲಿ ಸೋಲಿಸಿ ಗೆದ್ದು ಬೀಗಿದೆ. ಬರೋಬ್ಬರಿ 24 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಭಾರತದಲ್ಲಿ ಟೀಮ್ ಇಂಡಿಯಾವನ್ನು ಸೋಲಿಸಿ ನ್ಯೂಜಿಲೆಂಡ್ ತಂಡ ವೈಟ್ವಾಶ್ ಮಾಡಿದೆ.
ಕೊನೆಯ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾವನ್ನು ನ್ಯೂಜಿಲೆಂಡ್ ಟೀಮ್ 25 ರನ್ಗಳಿಂದ ಸೋಲಿಸಿದೆ. ಈ ಗೆಲುವಿನ ಮೂಲಕ ನ್ಯೂಜಿಲೆಂಡ್ ಐತಿಹಾಸಿಕ ಟೆಸ್ಟ್ ಸರಣಿ ಗೆದ್ದಿದೆ. ಇನ್ನು, ಟೀಮ್ ಇಂಡಿಯಾ ಹೀನಾಯ ಸೋಲಿನ ಬಳಿಕ ಕ್ಯಾಪ್ಟನ್ ರೋಹಿತ್ ಶರ್ಮಾ ಮಾತಾಡಿದ್ದಾರೆ.
ಕ್ಯಾಪ್ಟನ್ ರೋಹಿತ್ ಏನಂದ್ರು?
ಟೆಸ್ಟ್ ಸೀರೀಸ್ ಸೋಲೋದು ಅಷ್ಟು ಸುಲಭವಲ್ಲ. ನನಗೆ ಸೋಲನ್ನು ಅರಗಿಸಿಕೊಳ್ಳಲು ಸಾಧ್ಯ ಆಗುತ್ತಿಲ್ಲ. ನಾವು ಕೊನೆಯ ಟೆಸ್ಟ್ ಪಂದ್ಯದಲ್ಲೂ ಸರಿಯಾಗಿ ಆಡಲಿಲ್ಲ. ನಮಗಿಂತ ನ್ಯೂಜಿಲೆಂಡ್ ಚೆನ್ನಾಗಿ ಆಡಿದೆ ಎಂದರು ರೋಹಿತ್.
ನಾವು ಸಾಕಷ್ಟು ತಪ್ಪುಗಳು ಮಾಡಿದ್ದೇವೆ. ನಮ್ಮ ತಪ್ಪುಗಳನ್ನು ನಾವು ಒಪ್ಪಿಕೊಳ್ಳಲೇಬೇಕು. ಮೊದಲ ಎರಡು ಟೆಸ್ಟ್ಗಳಲ್ಲಿ ನಾವು ರನ್ ಕಲೆ ಹಾಕುವಲ್ಲಿ ಹಿಂದೆ ಬಿದ್ದಿದ್ದೆವು. 3ನೇ ಟೆಸ್ಟ್ನಲ್ಲಿ 30 ರನ್ಗಳಿಂದ ಲೀಡ್ನಲ್ಲಿದ್ದೆವು. ನಾವು ಚೇಸ್ ಮಾಡುವಾಗ ರನ್ ಕಲೆ ಹಾಕಲೇಬೇಕು. ನಾವು ಆ ವಿಚಾರದಲ್ಲಿ ಎಡವಿದೆವು ಎಂದರು.
ನಾನು ಬ್ಯಾಟರ್ ಆಗಿ ಮತ್ತು ಕ್ಯಾಪ್ಟನ್ ಆಗಿ ಫೇಲ್ ಆಗಿದ್ದೇವೆ. ನಾನು ಅಂದುಕೊಂಡಿದ್ದು ಎಕ್ಸಿಗ್ಯೂಟ್ ಮಾಡಲು ಆಗಲಿಲ್ಲ. ಜೈಸ್ವಾಲ್, ಗಿಲ್ ಮತ್ತು ಪಂತ್ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಬ್ಯಾಟ್ ಮಾಡಿದ್ರು. ಇಡೀ ತಂಡ ಬೌಲಿಂಗ್ ಮತ್ತು ಬ್ಯಾಟಿಂಗ್ ಕಳಪೆ ಪ್ರದರ್ಶನ ನೀಡಿದೆ. ನನಗೆ ಈ ಸೋಲು ಬಹಳ ಬೇಸರ ತಂದಿದೆ ಎಂದು ಅಸಮಾಧಾನ ಹೊರಹಾಕಿದ್ರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ