newsfirstkannada.com

ಟೀಮ್​ ಇಂಡಿಯಾ 434 ರನ್​ಗಳ ಭರ್ಜರಿ ಗೆಲುವು.. ಈ ಬಗ್ಗೆ ಕ್ಯಾಪ್ಟನ್​ ರೋಹಿತ್​ ಏನಂದ್ರು?

Share :

Published February 18, 2024 at 7:42pm

    3ನೇ ಟೆಸ್ಟ್​ನಲ್ಲಿ ಇಂಗ್ಲೆಂಡ್​ ವಿರುದ್ಧ ಗೆದ್ದು ಬೀಗಿದ ಟೀಮ್​ ಇಂಡಿಯಾ

    ಕ್ಯಾಪ್ಟನ್​ ರೋಹಿತ್​ ಪಡೆಗೆ ಬರೋಬ್ಬರಿ 434 ರನ್​ಗಳ ಭರ್ಜರಿ ಜಯ

    ಇಂಗ್ಲೆಂಡ್​​ ವಿರುದ್ಧ ಗೆಲುವಿನ ಬಗ್ಗೆ ರೋಹಿತ್​ ಹೇಳಿದ್ದೇನು ಗೊತ್ತಾ..?

ರಾಜ್​ಕೋಟ್​ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ 3ನೇ ಟೆಸ್ಟ್​ನಲ್ಲಿ ಇಂಗ್ಲೆಂಡ್​​ ವಿರುದ್ಧ ಟೀಮ್​ ಇಂಡಿಯಾ ಬರೋಬ್ಬರಿ 434 ರನ್​ಗಳಿಂದ ಗೆದ್ದು ಬೀಗಿದೆ. ಗೆದ್ದ ಬಳಿಕ ಮಾತಾಡಿದ ಕ್ಯಾಪ್ಟನ್​​​ ರೋಹಿತ್​ ಶರ್ಮಾ, ಭಾರತದ ಗೆಲುವಿಗೆ ಎಲ್ಲರ ಶ್ರಮ ಕಾರಣ ಎಂದರು.

ನಾವು ಟೆಸ್ಟ್​ ಕ್ರಿಕೆಟ್​ ಆಡುವಾಗ 5 ದಿನದ ಮಹತ್ವವನ್ನು ಅರ್ಥ ಮಾಡಿಕೊಳ್ಳಬೇಕು. ಇದು ಮೂರು ದಿನ ಕ್ರಿಕೆಟ್​ ಅಲ್ಲ, ಐದು ದಿನದ ಆಟ. ಹಾಗಾಗಿ ಟೆಸ್ಟ್​ ಕ್ರಿಕೆಟ್​ ಆಡುವಾಗ ತಾಳ್ಮೆ ಇರಬೇಕು. ಇಂಗ್ಲೆಂಡ್​ ನಮ್ಮ ಮೇಲೆ ಬಹಳ ಒತ್ತಡ ಹಾಕಿದ್ರು. ಆದ್ರೂ, ನಾವು ಬೌನ್ಸ್​ ಬ್ಯಾಕ್​ ಮಾಡಿದ್ವಿ ಎಂದರು.

ಇಂಗ್ಲೆಂಡ್​ ಗೆದ್ದಿರುವುದು ನಮಗೆ ಖುಷಿ ತಂದಿದೆ. ಸರ್ಫರಾಜ್​ ಖಾನ್​​ ತುಂಬಾ ಅದ್ಭುತ ಬ್ಯಾಟಿಂಗ್​ ಮಾಡಿದ್ರು. ಇನ್ನೂ, ಚೂರು ಟೈಮ್​ ತೆಗೆದುಕೊಂಡು ಆಡಬಹುದಿತ್ತು ಎಂದು ನಾವು ಭಾವಸಿದ್ದೆವು. ಇವರು ಟೀಮ್​ ಇಂಡಿಯಾ ಇನ್ನೂ ಕೊಡುಗೆ ನೀಡಬೇಕಿದೆ ಎಂದರು,

ನಾನು ಯಶಸ್ವಿ ಜೈಸ್ವಾಲ್​ ಬಗ್ಗೆ ಜಾಸ್ತಿ ಮಾತಾಡಬೇಕಾದ ಅಗತ್ಯ ಇಲ್ಲ. ಹಲವು ಬಾರಿ ನಾನು ಜೈಸ್ವಾಲ್​ ಬಗ್ಗೆ ಹೇಳಿದ್ದೇನೆ. ಪದೇ ಪದೇ ಮಾತಾಡೋದು ಒಳ್ಳೆಯದಲ್ಲ, ಆತ ಕ್ವಾಲಿಟಿ ಪ್ಲೇಯರ್​​. ಜಡೇಜಾ ಬಗ್ಗೆ ಕೂಡ ನಾವು ನೆನೆಯಲೇಬೇಕು. ಎಲ್ಲರೂ ತುಂಬಾ ಚೆನ್ನಾಗಿ ಪ್ರದರ್ಶನ ನೀಡಿದ್ರು. ಮುಂದಿನ ಟೆಸ್ಟ್​ನಲ್ಲೂ ಹೀಗೆ ಆಡಲಿ ಎಂದು ಬಯಸುತ್ತೇನೆ ಎಂದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಟೀಮ್​ ಇಂಡಿಯಾ 434 ರನ್​ಗಳ ಭರ್ಜರಿ ಗೆಲುವು.. ಈ ಬಗ್ಗೆ ಕ್ಯಾಪ್ಟನ್​ ರೋಹಿತ್​ ಏನಂದ್ರು?

https://newsfirstlive.com/wp-content/uploads/2024/02/Rohit-Sharma_test.jpg

Load More