2ನೇ ಟೆಸ್ಟ್​​​​ ಪಂದ್ಯ; ನ್ಯೂಜಿಲೆಂಡ್​ ತಂಡಕ್ಕೆ ಖಡಕ್​ ವಾರ್ನಿಂಗ್​ ಕೊಟ್ಟ ಕ್ಯಾಪ್ಟನ್​ ರೋಹಿತ್​​

author-image
Ganesh Nachikethu
Updated On
2ನೇ ಟೆಸ್ಟ್​​​​ ಪಂದ್ಯ; ನ್ಯೂಜಿಲೆಂಡ್​ ತಂಡಕ್ಕೆ ಖಡಕ್​ ವಾರ್ನಿಂಗ್​ ಕೊಟ್ಟ ಕ್ಯಾಪ್ಟನ್​ ರೋಹಿತ್​​
Advertisment
  • ಮೊದಲ ಟೆಸ್ಟ್​ನಲ್ಲಿ ಟೀಮ್​ ಇಂಡಿಯಾಗೆ ಹೀನಾಯ ಸೋಲು
  • ಅ. 24ರಿಂದ ಟೀಮ್​ ಇಂಡಿಯಾ, ನ್ಯೂಜಿಲೆಂಡ್​ ಮಧ್ಯೆ 2 ಟೆಸ್ಟ್​
  • ಈ ಮುನ್ನವೇ ನ್ಯೂಜಿಲೆಂಡ್​ಗೆ ರೋಹಿತ್​​ ಖಡಕ್​​​​ ವಾರ್ನಿಂಗ್​​​

ಟೀಮ್ ಇಂಡಿಯಾ, ನ್ಯೂಜಿಲೆಂಡ್​​ ನಡುವಿನ ಮೊದಲ ಟೆಸ್ಟ್​​ ಪಂದ್ಯ ಅಂತ್ಯಗೊಂಡಿದೆ. 2ನೇ ಟೆಸ್ಟ್​​ ಪಂದ್ಯವೂ ಪುಣೆಯಲ್ಲಿರೋ ಮಹಾರಾಷ್ಟ್ರ ಕ್ರಿಕೆಟ್​ ಅಸೋಸಿಯೇಷನ್​​ ಸ್ಟೇಡಿಯಮ್​ನಲ್ಲಿ ನಡೆಯಲಿದೆ. ಇದಕ್ಕೆ ಟೀಮ್​ ಇಂಡಿಯಾ ಭರ್ಜರಿ ತಯಾರಿ ನಡೆಸಿಕೊಂಡಿದೆ. ಅಕ್ಟೋಬರ್​​ 24ನೇ ತಾರೀಕಿನಿಂದ ಶುರುವಾಗೋ ಈ ಟೆಸ್ಟ್​ ಪಂದ್ಯ 28ರ ವರೆಗೆ ನಡೆಯಲಿದ್ದು, ಈ ಮುನ್ನವೇ ನ್ಯೂಜಿಲೆಂಡ್​ ತಂಡಕ್ಕೆ ರೋಹಿತ್​ ಶರ್ಮಾ ಖಡಕ್​ ವಾರ್ನಿಂಗ್​ ಕೊಟ್ಟಿದ್ದಾರೆ.

ಈ ಸಂಬಂಧ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಕ್ಯಾಪ್ಟನ್​ ರೋಹಿತ್​ ಶರ್ಮಾ, ಕೆಲವೊಮ್ಮೆ ಇಂತಹ ಪರಿಸ್ಥಿತಿಗಳು ಎದುರಾಗುತ್ತವೆ. ನಾವು ಈ ಪಂದ್ಯದಲ್ಲಿ ಏನೆಲ್ಲಾ ಚೆನ್ನಾಗಿ ಮಾಡಿದ್ದೇವೆ ಎನ್ನುವುದು ಅರ್ಥಮಾಡಿಕೊಳ್ಳಬೇಕು. ಮುಂದಿನ ಪಂದ್ಯ ಗೆಲ್ಲಲು ಸಜ್ಜಾಗಬೇಕು. ಇಂಥಹ ಪರಿಸ್ಥಿತಿಯನ್ನು ನಾವು ಹಲವು ಬಾರಿ ಎದುರಿಸಿದ್ದೇವೆ. ಅಂದು ನಾವು ಇಂಗ್ಲೆಂಡ್ ವಿರುದ್ಧ ಮೊದಲ ಪಂದ್ಯ ಸೋತು 0-1ರ ಹಿನ್ನಡೆಯಲ್ಲಿದ್ದೆವು. ಬಳಿಕ ಅದೇ ಸರಣಿಯನ್ನು 4-1 ಅಂತರದಲ್ಲಿ ಗೆದ್ದು ತೋರಿಸಿದೆವು. ಇದು ಎಲ್ಲರಿಗೂ ನೆನಪಿರಬೇಕು ಎಂದರು.

ಎಂ. ಚಿನ್ನಸ್ವಾಮಿ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​​ನಲ್ಲಿ ನಡೆದ ಮೊದಲ ಟೆಸ್ಟ್​​ ಪಂದ್ಯದಲ್ಲಿ ಟೀಮ್​ ಇಂಡಿಯಾ ವಿರುದ್ಧ ನ್ಯೂಜಿಲೆಂಡ್​​ ಬರೋಬ್ಬರಿ 8 ವಿಕೆಟ್​ಗಳಿಂದ ಗೆದ್ದು ಬೀಗಿದೆ. ಈ ಮೂಲಕ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ನ್ಯೂಜಿಲೆಂಡ್​ ತಂಡ 1-0 ಅಂತರದ ಮುನ್ನಡೆ ಸಾಧಿಸಿದೆ.

ಟೀಮ್​ ಇಂಡಿಯಾಗೆ ಹೀನಾಯ ಸೋಲು

ಭಾರತದ ನೆಲದಲ್ಲಿ ಬರೋಬ್ಬರಿ 36 ವರ್ಷಗಳ ಬಳಿಕ ಮೊದಲ ಟೆಸ್ಟ್ ಗೆಲುವು ದಾಖಲಿಸುವಲ್ಲಿ ನ್ಯೂಜಿಲೆಂಡ್​ ತಂಡ ಯಶಸ್ವಿಯಾಗಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಟೀಮ್​ ಇಂಡಿಯಾ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 46 ರನ್‌ಗಳಿಗೆ ಆಲೌಟ್​ ಆಗಿತ್ತು. ಇನ್ನು ಮೊದಲ ಇನ್ನಿಂಗ್ಸ್‌ನಲ್ಲಿ ರಚಿನ್ ರವೀಂದ್ರ ಆಕರ್ಷಕ ಶತಕದ ನೆರವಿನಿಂದ ನ್ಯೂಜಿಲೆಂಡ್ 402 ರನ್ ಕಲೆಹಾಕಿತು. ಭಾರೀ ಹಿನ್ನಡೆ ಜತೆ 2ನೇ ಇನ್ನಿಂಗ್ಸ್‌ ಆರಂಭಿಸಿದ ಟೀಮ್​ ಇಂಡಿಯಾ ಸರ್ಫರಾಜ್ ಖಾನ್(150) ಹಾಗೂ ರಿಷಭ್ ಪಂತ್(99) ನೆರವಿನಿಂದ 462 ರನ್ ಕಲೆಹಾಕಿತು. ಈ ಮೂಲಕ ಕಿವೀಸ್‌ಗೆ ಗೆಲ್ಲಲು 107 ರನ್ ಗುರಿ ನೀಡಿತು. ಈ ಸಾಧಾರಣ ರನ್​ಗಳ ಗುರಿ ಬೆನ್ನತ್ತಿದ ನ್ಯೂಜಿಲೆಂಡ್ ಕೇವಲ 2 ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿದೆ.

ಇದನ್ನೂ ಓದಿ: ಟೀಮ್​ ಇಂಡಿಯಾ ಸೋಲಿಗೆ ಅಸಲಿ ಕಾರಣ ಬಿಚ್ಚಿಟ್ಟ ಕ್ಯಾಪ್ಟನ್​​.. ರೋಹಿತ್​ ಶರ್ಮಾ ಏನಂದ್ರು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment