ODI ಸೇರಿ 3 ಫಾರ್ಮೆಟ್​ನಲ್ಲೂ ಗಿಲ್ ಸಿಂಹ​ ಘರ್ಜನೆ.. ಯುವರಾಜನಿಂದ ಆಂಗ್ಲರ ಎದೆಯಲ್ಲಿ ನಡುಕ!

author-image
Bheemappa
ಗಿಲ್ ಬಲು ದುಬಾರಿ.. ಬ್ರಾಂಡ್ ವ್ಯಾಲ್ಯೂ ದುಪ್ಪಟ್ಟು ಏರಿಕೆ.. ಕೊಹ್ಲಿಯನ್ನೂ ಮೀರಿಸಿ ಬಿಟ್ರಾ..?
Advertisment
  • ಎದುರಾಳಿ ಮೇಲೆ ದಂಡೆತ್ತಿ ಹೋಗಿ ಗಿಲ್​ ಬ್ಯಾಟ್​​ನಿಂದ ರನ್ ಹೊಳೆ
  • ಸೆಂಚುರಿ ಮೇಲೆ ಸೆಂಚುರಿ ಸಿಡಿಸಿ ಖಡಕ್ ಉತ್ತರ ಕೊಟ್ಟ ಶುಭ್​ಮನ್​
  • ಏಕದಿನ, ಟೆಸ್ಟ್​, ಟಿ20 ಫಾರ್ಮೆಟ್​ನಲ್ಲೂ ಶುಭ್​ಮನ್ ಗಿಲ್​​ ಶೈನಿಂಗ್

2025 ಈ ವರ್ಷದಲ್ಲಿ ಕ್ರಿಕೆಟ್​ ಜಗತ್ತಲ್ಲಿ ಏನ್​ ಆಯ್ತೋ ಇಲ್ವೋ. ಕ್ರಿಕೆಟ್​​ ಜಗತ್ತಿನ ಮುಂದಿನ ಕಿಂಗ್​ ಯಾರು ಅನ್ನೋದಂತೂ ನಿರ್ಧಾರವಾಗಿದೆ. ಯುವರಾಜ ಶುಭ್​​ಮನ್​ ಗಿಲ್​ ಮಹಾರಾಜನ ಸಿಂಹಾಸನದತ್ತ ದಿಟ್ಟ ಹೆಜ್ಜೆ ಇಡ್ತಿದ್ದಾರೆ. ಮೂರೂ ಫಾರ್ಮೆಟ್​ನಲ್ಲಿ ಗಿಲ್​ ಅಕ್ಷರಶಃ ಘರ್ಜಿಸಿದ್ದಾರೆ. ಈ ವರ್ಷ ಪಂಜಾಬ್​ ಪುತ್ತರ್​​ ಆಟ ಹೇಗಿತ್ತು?.

ಆಂಗ್ಲರ ನಾಡಲ್ಲಿ ಟೀಮ್​ ಇಂಡಿಯಾ ಕ್ಯಾಪ್ಟನ್​ ಶುಭ್​ಮನ್​ ಗಿಲ್​​ ಘರ್ಜನೆ ಜೋರಾಗಿದೆ. ಫಸ್ಟ್​​ ಟೆಸ್ಟ್​​ನಲ್ಲಿ ಸೆಂಚುರಿ ಸಿಡಿಸಿದ ಶುಭ್​ಮನ್​, 2ನೇ ಟೆಸ್ಟ್​​ನಲ್ಲಿ ಡಬಲ್​ ಸೆಂಚುರಿ ಬಾರಿಸಿದ್ದಾರೆ. ಲೀಲಾಜಾಲವಾಗಿ ಬ್ಯಾಟ್​ ಬೀಸ್ತಾ ಇರೋ ಪಂಜಾಬ್​ ಪುತ್ತರ್​​ ಆಂಗ್ಲರ ಎದೆಯಲ್ಲಿ ನಡುಕ ಹುಟ್ಟಿಸಿದ್ದಾರೆ.

publive-image

2025ರಲ್ಲಿ ಶುಭ್​ಮನ್​ ಸೂಪರ್​.! ‘ಮುಟ್ಟಿದ್ದೆಲ್ಲಾ ಚಿನ್ನ’.!

ಸದ್ಯ ಇಂಗ್ಲೆಂಡ್​ ಪ್ರವಾಸದಲ್ಲಿ ಸೂಪರ್​ ಪರ್ಫಾಮೆನ್ಸ್​​ ನೀಡ್ತಿರೋ ಗಿಲ್​ ಪಾಲಿಗೆ 2025 ಲಕ್ಕಿ ವರ್ಷ. ಈ ವರ್ಷದಲ್ಲಿ ಗಿಲ್​ ಮುಟ್ಟಿದ್ದೆಲ್ಲಾ ಚಿನ್ನ. ಫಾರ್ಮೆಟ್​, ಕಂಡಿಷನ್ಸ್​, ಎದುರಾಳಿ.. ಯಾವುದೂ ಕೌಂಟೇ ಇಲ್ಲ. ಟೆಸ್ಟ್​​, ಏಕದಿನ, ಟಿ20 ಮೂರೂ ಫಾರ್ಮೆಟ್​ನಲ್ಲಿ ಯುವರಾಜ ದರ್ಬಾರ್​ ನಡೆಸಿದ್ದಾರೆ. ರನ್​ಭೂಮಿಯಲ್ಲಿ ಎದುರಾಳಿಗಳ ಮೇಲೆ ದಂಡೆತ್ತಿ ಹೋಗಿರೋ ಗಿಲ್​, ಬೌಲರ್​ಗಳ ಬೆಂಡೆತ್ತಿ​ ರನ್​ ಕೊಳ್ಳೆ ಹೊಡೆದಿದ್ದಾರೆ.

ಟೆಸ್ಟ್​​ನಲ್ಲಿ ಶುಭ್​​ಮನ್​ ಸೂಪರ್​ ಡೂಪರ್​​.!

ಟೆಸ್ಟ್​​ ಫಾರ್ಮೆಟ್​​ನಲ್ಲಿ ಟೀಮ್​ ಇಂಡಿಯಾದ ಖಾಯಂ ಪ್ಲೇಯರ್​ ಆಗಿದ್ರೂ, ಶುಭ್​ಮನ್​ ಸಾಮರ್ಥ್ಯದ ಬಗ್ಗೆ ಹಲವು ಪ್ರಶ್ನೆಗಳಿದ್ವು. ಬಾಂಗ್ಲಾದೇಶದಲ್ಲಿ ಒಂದು ಸೆಂಚುರಿ ಸಿಡಿಸಿದ್ದು ಬಿಟ್ರೆ, ವಿದೇಶದಲ್ಲಿ ಗಿಲ್​ ಪರ್ಫಾಮೆನ್ಸ್​​ ಅಷ್ಟಕಷ್ಟೆ ಆಗಿತ್ತು. ಇಂಗ್ಲೆಂಡ್​ನಲ್ಲಂತೂ ಅಟ್ಟರ್​ಫ್ಲಾಪ್​ ಆಗಿದ್ರು. ಆದ್ರೆ, ಆ ವೈಫಲ್ಯವನ್ನ ಈಗ ಗಿಲ್​ ಮೆಟ್ಟಿ ನಿಂತಿದ್ದಾರೆ. ಆಂಗ್ಲರ ನಾಡಲ್ಲಿ ಸೆಂಚುರಿ ಮೇಲೆ ಸೆಂಚುರಿ ಬಾರಿಸಿ ಶುಭ್​ಮನ್​ ಟೀಕೆಗಳಿಗೆ ಆನ್ಸರ್​ ಕೊಟ್ಟಿದ್ದಾರೆ.

ಇಂಗ್ಲೆಂಡ್​ ಪ್ರವಾಸ ಮಾತ್ರವಲ್ಲ, ಈ ವರ್ಷ ರೆಡ್​ಬಾಲ್​ ಕ್ರಿಕೆಟ್​ನಲ್ಲಿ ಶುಭ್​ಮನ್​ ಗಿಲ್​ ಘರ್ಜನೆ ಜೋರಾಗಿ ನಡೆದಿದೆ. ನೀವು ನಂಬ್ತಿರೋ ಇಲ್ವೋ ನೂರಕ್ಕೂ ಅಧಿಕ ಸರಾಸರಿಯಲ್ಲಿ ಗಿಲ್​ ರನ್ ಗಳಿಸಿದ್ದಾರೆ.

ಈ ವರ್ಷ ಟೆಸ್ಟ್​​ ಫಾರ್ಮೆಟ್​​ನಲ್ಲಿ ಗಿಲ್​

2025ರಲ್ಲಿ ಟೆಸ್ಟ್​ ಫಾರ್ಮೆಟ್​ನಲ್ಲಿ 5 ಇನ್ನಿಂಗ್ಸ್​ಗಳಲ್ಲಿ ಬ್ಯಾಟ್​ ಬೀಸಿರುವ ಶುಭ್​ಮನ್​ ಗಿಲ್​ 618 ರನ್​ಗಳಿಸಿದ್ದಾರೆ. 123.60ರ ಸರಾಸರಿಯಲ್ಲಿ ರನ್​ಗಳಿಸಿದ್ದು, 2 ಶತಕ, 1 ದ್ವಿಶತಕ ಸಿಡಿಸಿದ್ದಾರೆ. ಗಿಲ್​ ಅಬ್ಬರ ಟೆಸ್ಟ್​​ ಕ್ರಿಕೆಟ್​ಗೆ​ ಮಾತ್ರ ಸೀಮಿತವಾಗಿಲ್ಲ. ಏಕದಿನ ಫಾರ್ಮೆಟ್​​ನಲ್ಲೂ ಶುಭ್​ಮನ್ ಬೊಂಬಾಟ್​ ಪರ್ಫಾಮೆನ್ಸ್​​ ನೀಡಿದ್ದಾರೆ. ಒನ್​​ ಡೇ ಫಾರ್ಮೆಟ್​ನಲ್ಲಿ 63.85ರ ಸರಾಸರಿಯಲ್ಲಿ ಬ್ಯಾಟ್​ ಬೀಸಿದ್ದಾರೆ. ಪ್ರತಿಷ್ಟಿತ ಚಾಂಪಿಯನ್ಸ್​​ ಟ್ರೋಫಿ ಗೆಲುವಿನಲ್ಲೂ ಗಿಲ್​, ಪ್ರಮುಖ ಪಾತ್ರ ನಿರ್ವಹಿಸಿದರು.

ಈ ವರ್ಷ ಏಕದಿನದಲ್ಲಿ ಶುಭ್​ಮನ್​

ಈ ವರ್ಷ ಏಕದಿನ ಮಾದರಿಯಲ್ಲಿ ಶುಭ್​ಮನ್​ ಗಿಲ್​ 8 ಇನ್ನಿಂಗ್ಸ್​ಗಳಲ್ಲಿ ಬ್ಯಾಟಿಂಗ್​ ನಡೆಸಿದ್ದಾರೆ. 63.85ರ ಸಾಲಿಡ್​​ ಸರಾಸರಿಯಲ್ಲಿ 447 ರನ್​ಗಳಿಸಿದ್ದಾರೆ. 2 ಶತಕ, 2 ಹಾಫ್​ ಸೆಂಚುರಿ ಸಿಡಿಸಿ ಶುಭ್​ಮನ್​ ಮಿಂಚಿದ್ದಾರೆ.

ಕಲರ್​ಫುಲ್​ ಲೀಗ್​ನಲ್ಲಿ ಕಲರ್​ಫುಲ್​ ಆಟ.!

ಟಿ20 ಫಾರ್ಮೆಟ್​ನಲ್ಲೂ ಶುಭ್​ಮನ್​ ಬೌಲರ್​ಗಳ ಮೇಲೆ ಸವಾರಿ ಮಾಡಿದ್ದಾರೆ. ಕಲರ್​ಫುಲ್​ ಲೀಗ್​​ನಲ್ಲಿ ಕಲರ್​​ಫುಲ್​ ಬ್ಯಾಟಿಂಗ್​ ನಡೆಸಿದ ಶುಭ್​ಮನ್​ ಗಿಲ್​ ಬೌಲರ್​ಗಳಿಗೆ ಸಖತ್​ ಕಾಟ ಕೊಟ್ರು. ಕನ್ಸಿಸ್ಟೆಂಟ್​ ಆಗಿ ಸೀಸನ್​ 18ರ ಐಪಿಎಲ್​ನಲ್ಲಿ ಶುಭ್​ಮನ್​ ಗಿಲ್​ ಬ್ಯಾಟ್​ ಸೌಂಡ್​ ಮಾಡ್ತು. 155.87ರ ಸ್ಟ್ರೈಕ್​ ರೇಟ್​ನಲ್ಲಿ ಗುಜರಾತ್​ ಕ್ಯಾಪ್ಟನ್​ ರನ್​ ಕೊಳ್ಳೆ ಹೊಡೆದಿದ್ದರು.

ಇದನ್ನೂ ಓದಿ: ಸೋಶಿಯಲ್ ಮೀಡಿಯಾದಲ್ಲಿ ಪರಿಚಯ, ಮದುವೆ.. ಹೆಂಡತಿಯ ಉಸಿರು ನಿಲ್ಲಿಸಿದ ಪಾಪಿ ಗಂಡ

publive-image

IPL-2025ರಲ್ಲಿ ಶುಭ್​ಮನ್​ ಗಿಲ್​

ಈ ಸೀಸನ್​ನಲ್ಲಿ 15 ಇನ್ನಿಂಗ್ಸ್​ಗಳಲ್ಲಿ ಬ್ಯಾಟ್​ ಬೀಸಿದ ಶುಭ್​ಮನ್​ ಗಿಲ್​ 650 ರನ್​ಗಳಿಸಿದರು. 50ರ ಸರಾಸರಿಯಲ್ಲಿ ರನ್​ ಕೊಳ್ಳೆ ಹೊಡೆದ ಶುಭ್​ಮನ್​ 6 ಹಾಫ್​ ಸೆಂಚುರಿ ಸಿಡಿಸಿದರು.

ಗಿಲ್​ 2025ರಲ್ಲಿ ತಾನು ಆಲ್​​​ ಫಾರ್ಮೆಟ್​ ಅನ್ನೋದನ್ನ ಆಟದಿಂದಲೇ ನಿರೂಪಿಸಿದ್ದಾರೆ. ಜೊತೆಗೆ ಯುವರಾಜನ ಆಟ ಕಿಂಗ್​ ಕೊಹ್ಲಿಯನ್ನ ನೆನಪಿಸ್ತಿರೋದು ಸುಳ್ಳಲ್ಲ. ಕೊಹ್ಲಿ ಪ್ರೈಮ್​ ಫಾರ್ಮ್​ನಲ್ಲಿದ್ದ ದಿನಗಳಲ್ಲಿ ಮೂರೂ ಫಾರ್ಮೆಟ್​​ನಲ್ಲಿ ಅಬ್ಬರಿಸಿ ಬೊಬ್ಬಿರಿದಿದ್ರು. ಇದೀಗ ಕೊಹ್ಲಿ ಉತ್ತರಾಧಿಕಾರಿ ಎಂದೇ ಬಿಂಬಿತವಾಗಿರೋ ಶುಭ್ಮನ್​ ಗಿಲ್​ ಕೂಡ ಅದೇ ಆಟವಾಡ್ತಿದ್ದಾರೆ. ಗಿಲ್​ ಆಟಕ್ಕೆ ಫ್ಯಾನ್ಸ್​​​ ಬಹುಪರಾಕ್​ ಹಾಕ್ತಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment