/newsfirstlive-kannada/media/post_attachments/wp-content/uploads/2025/06/Sumit-Sabharwal.jpg)
ಮುಂಬೈ: ಗುಜರಾತ್ನ ಅಹಮದಾಬಾದ್ನಲ್ಲಿ ಏರ್ ಇಂಡಿಯಾ ವಿಮಾನ ಪತನಗೊಂಡು ಬರೋಬ್ಬರಿ 265 ಮಂದಿ ತಮ್ಮ ಜೀವವನ್ನು ಕಳೆದುಕೊಂಡಿದ್ದಾರೆ. ಲಂಡನ್ಗೆ ಹೊರಟಿದ್ದ ಬೋಯಿಂಗ್ ಡ್ರೀಮ್ಲೈನರ್ ವಿಮಾನದಲ್ಲಿ 242 ಪ್ರಯಾಣಿಸುತ್ತಿದ್ದರು. ಇದರಲ್ಲಿ ಓರ್ವ ಪ್ರಯಾಣಿಕ ಮಾತ್ರ ಬದುಕುಳಿದಿದ್ದಾನೆ.
ಆದ್ರೆ, ಈ ದುರಂತದಲ್ಲಿ ಪೈಲಟ್-ಇನ್-ಕಮಾಂಡ್ ಸುಮಿತ್ ಸಭರ್ವಾಲ್ ಏರ್ ಇಂಡಿಯಾ ವಿಮಾನದಲ್ಲಿ ದುರಂತ ಅಂತ್ಯ ಕಂಡಿದ್ದಾರೆ. ಈ ಘಟನೆಗೂ ಕೆಲ ನಿಮಿಷಗಳ ಮುನ್ನ ತನ್ನ ತಂದೆಗೆ ಕಾಲ್ ಮಾಡಿ ಮಾತು ಕೊಟ್ಟಿದ್ದರಂತೆ. ಹೌದು, ಮುಂಬೈಯಲ್ಲಿರುವ ಅಸ್ವಸ್ಥ ತಂದೆಯ ಭರವಸೆ ನುಚ್ಚುನೂರಾಗಿದೆ. ಮಗ ಮನೆಗೆ ಬಂದು ನನ್ನ ಯೋಗಕ್ಷೇಮ ವಿಚಾರಿಸುತ್ತಾನೆ ಎಂಬ ನಿರೀಕ್ಷೆ ಹುಸಿಯಾಗಿದೆ. ಹೌದು, ನಿನ್ನೆ ನಡೆದ ವಿಮಾನ ಪತನದ ಘೋರ ದುರಂದಲ್ಲಿ ಪೈಲಟ್-ಇನ್-ಕಮಾಂಡ್ ಸುಮಿತ್ ಸಭರ್ವಾಲ್ ನಿಧನರಾದ್ದರು.
ಲಂಡನ್ಗೆ ಹೋಗುವ ಮೊದಲು ಸುಮಿತ್ ಸಭರ್ವಾಲ್ ತನ್ನ ತಂದೆಗೆ ಫೋನ್ ಮಾಡಿ, ನಾನು ಲಂಡನ್ ತಲುಪಿದ ನಂತರ ನಿಮಗೆ ಕರೆ ಮಾಡುತ್ತೇನೆ ಎಂದು ಹೇಳಿ ವಿಮಾನ ಹತ್ತಿದ್ದರಂತೆ. ಕರೆ ಕಟ್ ಮಾಡಿ ಕೆಲವೇ ನಿಮಿಷಗಳಲ್ಲಿ ವಿಮಾನದಲ್ಲಿದ್ದ ಎಲ್ಲರೂ ಸುಟ್ಟು ಕರಕಲಾಗಿದ್ದಾರೆ.
ಇದನ್ನೂ ಓದಿ: ವಿಮಾನದ ಬೆಲೆ 2.18 ಸಾವಿರ ಕೋಟಿ ರೂ.. ಪತನಗೊಂಡ Boeing 787 ವಿಶೇಷತೆ ಏನೇನು..?
ಹೌದು, ಪೈಲೆಟ್ ಸುಮಿತ್ ಅವರ ನಿಧನದ ಬಳಿಕ ಮುಂಬೈನಲ್ಲಿರುವ ಅವರ ನಿವಾಸಕ್ಕೆ ಶಾಸಕ ದಿಲೀಪ್ ಭೇಟಿ ಕೊಟ್ಟಿದ್ದಾರೆ. ಮೃತ ಸುಮಿತ್ ಸಭರ್ವಾಲ್ 88 ವರ್ಷದ ತಂದೆ ಅನಾರೋಗ್ಯದಿಂದ ಬಳಲುತ್ತಿದ್ದರು. ಕೆಲಸ ಬಿಟ್ಟು ನಿಮ್ಮನ್ನು ನೋಡಿಕೊಳ್ತೇನೆ ಎಂದು ತಂದೆಗೆ ಸಮಾಧಾನ ಮಾಡಿದ್ದರಂತೆ. ಮೂರು ದಿನಗಳ ಹಿಂದೆ, ಸುಮಿತ್ ಸಬರ್ವಾಲ್ ತನ್ನ ತಂದೆಯೊಂದಿಗೆ ಬಹಳ ಪ್ರೀತಿಯಿಂದ ಮಾತುಕತೆ ನಡೆಸಿದ್ದರು. ಒಂದೆರಡು ವರ್ಷಗಳ ಹಿಂದೆ ಸುಮಿತ್ ಅವರ ತಾಯಿ ನಿಧನರಾದ ನಂತರ ತಂದೆ ಒಂಟಿಯಾಗಿ ವಾಸಿಸುತ್ತಿದ್ದರಂತೆ. ಮಗ ಸುಮಿತ್ಗೆ ಮದುವೆಯಾಗಿರಲಿಲ್ಲ ಅಂತ ಶಿವಸೇನೆ ಶಾಸಕ ದಿಲೀಪ್ ಲಾಂಡೇ ಬಳಿ ತಂದೆ ಹೇಳಿಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ