/newsfirstlive-kannada/media/post_attachments/wp-content/uploads/2024/10/Surya_New.jpg)
ಇತ್ತೀಚೆಗೆ ಹೈದರಾಬಾದಿನ ರಾಜೀವ್​ ಗಾಂಧಿ ಇಂಟರ್​ ನ್ಯಾಷನಲ್​​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಕೊನೆಯ ಟಿ20 ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ಟೀಮ್​​ ಇಂಡಿಯಾ ಬರೋಬ್ಬರಿ 133 ರನ್​​ಗಳಿಂದ ಗೆದ್ದು ಬೀಗಿದೆ. ಈ ಮೂಲಕ ಬಾಂಗ್ಲಾ ವಿರುದ್ಧದ ಟಿ20 ಸರಣಿ ಕ್ಲೀನ್​ ಸ್ವೀಪ್​ ಮಾಡಿದೆ.
ಇನ್ನು, ಟೀಮ್​ ಇಂಡಿಯಾದ ಭರ್ಜರಿ ಗೆಲುವಿನ ಬಳಿಕ ಕ್ಯಾಪ್ಟನ್​​ ಸೂರ್ಯಕುಮಾರ್​ ಯಾದವ್​ ಮಾತಾಡಿದ್ದಾರೆ. ನಾವು ಒಂದು ತಂಡವಾಗಿ ಸಾಕಷ್ಟು ಸಾಧನೆ ಮಾಡಿದ್ದೇವೆ. ನಮ್ಮದು ಸ್ವಾರ್ಥವಿಲ್ಲದ ತಂಡವಾಗಬೇಕು. ನನ್ನ ತಂಡದಲ್ಲಿ ನಿಸ್ವಾರ್ಥ ಕ್ರಿಕೆಟಿಗರು ಇರಬೇಕು ಎಂದರು.
ಹಾರ್ದಿಕ್​ ಪಾಂಡ್ಯ ಹೇಳಿದಂತೆ ನಾವು ಎಲ್ಲರ ಆಟವನ್ನು ಎಂಜಾಯ್​ ಮಾಡಬೇಕು. ಎಲ್ಲರೊಂದಿಗೂ ಟೈಮ್​ ಕಳೆಯಬೇಕು. ಸದಾ ಮಾತುಕತೆಯಲ್ಲಿ ತೊಡಗಿರಬೇಕು ಎಂದು ಮುಖ್ಯ ಕೋಚ್​ ಗೌತಮ್​ ಗಂಭೀರ್​ ಹೇಳುತ್ತಾರೆ. ಟೀಮ್​ಗಿಂತ ಯಾರು ದೊಡ್ಡವರಲ್ಲ ಎಂದರು ಸೂರ್ಯ.
/newsfirstlive-kannada/media/post_attachments/wp-content/uploads/2024/10/SANJU_SAMSON.jpg)
ಭಾರತದ ಗೆಲುವಿಗೆ ಸಂಜು ಕಾರಣ
ಭಾರತ ತಂಡದ ಗೆಲುವಿಗೆ ಸಂಜು ಸ್ಯಾಮ್ಸನ್​​ ಕಾರಣ. ನಿಮ್ಮ ಸ್ಕೋರ್​​ 49 ಅಥವಾ 99 ಇರುವಾಗ ದೊಡ್ಡ ಹೊಡೆತಕ್ಕೆ ಕೈ ಹಾಕಬೇಕು. ಸಿಕ್ಸ್​ ಹೊಡೆಯಬೇಕು ಅನಿಸಿದ್ರೆ ಸಂಜು ರೀತಿ ಹೊಡೆದುಬಿಡಬೇಕು. ಸಂಜು ಸ್ಯಾಮ್ಸನ್​​ ಬ್ಯಾಟಿಂಗ್​ ನೋಡಿ ನಿಜಕ್ಕೂ ಖುಷಿಯಾಯ್ತು ಎಂದರು.
ಸಂಜು ಅದ್ಭುತ ಬ್ಯಾಟಿಂಗ್​
ಬಾಂಗ್ಲಾದೇಶ 3ನೇ ಟಿ20 ಪಂದ್ಯದಲ್ಲಿ ಸಂಜು ಸ್ಯಾಮ್ಸನ್​ ಅಬ್ಬರದ ಬ್ಯಾಟಿಂಗ್​ ಪ್ರದರ್ಶಿಸಿದರು. ದಸರಾ ಹಬ್ಬದಂದು ರನ್​ಗಳ ಹೊಳೆಯನ್ನೇ ಹರಿಸಿದ ಸಂಜು ಸ್ಯಾಮ್ಸನ್​ 40 ಎಸೆತಗಳಲ್ಲಿ ಶತಕ ಸಿಡಿಸಿದ್ರು. ಇನ್ನು, 236.17 ಸ್ಟ್ರೈಕ್​ ರೇಟ್​ನೊಂದಿಗೆ ರನ್​ ಕಲೆ ಹಾಕಿದ ಸಂಜು ಸ್ಯಾಮ್ಸನ್​ 47 ಎಸೆತಗಳಲ್ಲಿ 111 ರನ್​ ಗಳಿಸಿ ಔಟಾದರು. ತಮ್ಮ ಇನ್ನಿಂಗ್ಸ್​ನಲ್ಲಿ 11 ಬೌಂಡರಿ, 8 ಸಿಕ್ಸರ್​ ಸಿಡಿಸಿದರು. ಒಂದು ಓವರ್​ನಲ್ಲಿ ಸತತ 4 ಬೌಂಡರಿ, ಇನ್ನೊಂದು ಓವರ್​ನಲ್ಲಿ ಸತತ 5 ಸಿಕ್ಸರ್​ ಬಾರಿಸಿದ್ದು ಇನ್ನಿಂಗ್ಸ್​ನ ಮತ್ತೊಂದು ಹೈಲೈಟ್​.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us