/newsfirstlive-kannada/media/post_attachments/wp-content/uploads/2025/07/Shubman_Gill-3.jpg)
ಇಂಡೋ-ಇಂಗ್ಲೆಂಡ್ 4ನೇ ಟೆಸ್ಟ್ ಪಂದ್ಯದ ನಡುವೆಯೇ ಸ್ಫೋಟಕ ಸುದ್ದಿ ಹೊರಬಿದ್ದಿದೆ. ಟೀಮ್ ಇಂಡಿಯಾ ಟೆಸ್ಟ್ ನಾಯಕತ್ವದಲ್ಲಿ ಮತ್ತೆ ಬದಲಾವಣೆ ಚರ್ಚೆ ಆರಂಭವಾಗಿದೆ. ಕೆಲ ದಿನಗಳ ಹಿಂದಷ್ಟೇ ಪಟ್ಟವೇರಿದ ಶುಭ್ಮನ್ ಗಿಲ್ ಜಸ್ಟ್ 3 ಟೆಸ್ಟ್ಗೆ ಸುಸ್ತಾಗಿದ್ದಾರೆ. ಬಹಿರಂಗವಾಗಿ ನನಗೆ ಸುಸ್ತಾಗ್ತಿದೆ ಎಂದು ಹೇಳಿಕೊಂಡಿದ್ದಾರೆ.
ಇಂಡೋ-ಇಂಗ್ಲೆಂಡ್ ನಡುವಿನ 4ನೇ ಟೆಸ್ಟ್ ಪಂದ್ಯ ಮ್ಯಾಂಚೆಸ್ಟರ್ ಮೈದಾನದಲ್ಲಿ ಭರದಿಂದ ಸಾಗ್ತಿದೆ. ಗೆಲುವಿನ ಅನಿವಾರ್ಯತೆಗೆ ಸಿಲುಕಿರೋ ಟೀಮ್ ಇಂಡಿಯಾ ಮೊದಲು ಬ್ಯಾಟಿಂಗ್ ನಡೆಸ್ತಿದ್ದು, ಪಂದ್ಯದ ಮೊದಲ ದಿನವೇ ಭರ್ಜರಿ ಹೋರಾಟ ನಡೆಸಿದೆ. ಇದರ ನಡುವೆ ಟೀಮ್ ಇಂಡಿಯಾ ಡ್ರೆಸ್ಸಿಂಗ್ ರೂಮ್ನಿಂದ ಸ್ಫೋಟಕ ಸುದ್ದಿ ಹೊರಬಿದ್ದಿದೆ.
ಉಲ್ಟಾ ಹೊಡೆದ ಮ್ಯಾನೇಜ್ಮೆಂಟ್ನ ಲೆಕ್ಕಾಚಾರ.!
ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ಟೀಮ್ ಇಂಡಿಯಾ ಭಾರೀ ಬದಲಾವಣೆಗೆ ಸಾಕ್ಷಿಯಾಗಿದ್ದು ಗೊತ್ತೆ ಇದೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ದಿಢೀರ್ ಎಂದು ಟೆಸ್ಟ್ ಕ್ರಿಕೆಟ್ಗೆ ಗುಡ್ ಬೈ ಹೇಳಿದ್ದು ದೊಡ್ಡ ಶಾಕ್ ಮೂಡಿಸಿತ್ತು. ಇದಾದ ಬಳಿಕ ಅಚ್ಚರಿಯ ನಿರ್ಧಾರ ತಳೆದ ಟೀಮ್ ಮ್ಯಾನೇಜ್ಮೆಂಟ್ & ಸೆಲೆಕ್ಷನ್ ಕಮಿಟಿ ಸೀನಿಯರ್ಗಳನ್ನ ಸೈಡ್ಲೈನ್ ಮಾಡಿ ಯುವ ಆಟಗಾರ ಶುಭ್ಮನ್ ಗಿಲ್ಗೆ ನಾಯಕನ ಪಟ್ಟ ಕಟ್ಟಿತು. ಭವಿಷ್ಯದ ಲೆಕ್ಕಾಚಾರ ಹಾಕಿ ಗಿಲ್ಗೆ ಪಟ್ಟಾಭಿಶೇಕ ಮಾಡಲಾಯ್ತು. ಆದ್ರೆ, 3 ಪಂದ್ಯಕ್ಕೆ ಆ ಲೆಕ್ಕಾಚಾರ ತಪ್ಪಾಗಿದೆ.
3 ಪಂದ್ಯಕ್ಕೆ ಸುಸ್ತಾದ ನಾಯಕ ಶುಭ್ಮನ್ ಗಿಲ್.!
ಮುಂದಿನ 5ರಿಂದ 6 ವರ್ಷಗಳ ಸುದೀರ್ಘ ಜರ್ನಿಯ ಲೆಕ್ಕಾಚಾರವನ್ನ ಹಾಕಿ ಯುವ ಶುಭ್ಮನ್ ಗಿಲ್ಗೆ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ನಾಯಕತ್ವದ ಹೊಣೆಗಾರಿಕೆ ನೀಡಿತು. ಆದ್ರೆ, ಮೊದಲ ಪ್ರವಾಸ ಅಂತ್ಯವಾಗೋದ್ರೊಳಗೆ ಗಿಲ್ ಡಲ್ ಆಗಿದ್ದಾರೆ. ಮೊದಲ 3 ಟೆಸ್ಟ್ ಪಂದ್ಯಗಳಲ್ಲಿ ನಾಯಕತ್ವ ನಿಭಾಯಿಸಿದ ಬೆನ್ನಲ್ಲೇ ಶುಭ್ಮನ್ ಗಿಲ್ ಸುಸ್ತಾಗಿದ್ದಾರೆ. ನಾಯಕತ್ವದ ನನಗೆ ಹೊರೆಯಾಗ್ತಿದೆ ಅಂತಾ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಪ್ರಾಮಾಣಿಕವಾಗಿ ಹೇಳಬೇಕಂದ್ರೆ, ದೈಹಿಕವಾಗಿ ಅಷ್ಟೇನು ಸುಸ್ತಾಗಲ್ಲ. ಆದ್ರೆ, ಮಾನಸಿಕವಾಗಿ ದಣಿವಾಗುತ್ತೆ. ಯಾಕಂದ್ರೆ, ಆಟಗಾರನಾಗಿ ನೀವು ಅಲ್ಲಿದ್ದಾಗ ನೀವು ಏನಾದ್ರೂ ಆಗಬೇಕೆಂದು ಕಾಯುತ್ತಿರುತ್ತೇವೆ. ಬಾಲ್ ನಮ್ಮ ಬಳಿ ಬರಬೇಕೆಂದು. ಆದ್ರೆ, ನಾಯಕನಾದಾಗ ಎಲ್ಲಾ ಸಮಯದಲ್ಲೂ ಯೋಚನೆ ಮಾಡ್ತಾ ಇರಬೇಕು. ಅಂದ್ರೆ ಮಾನಸಿಕವಾಗಿ ಒಳಗೊಂಡಿರುತ್ತೇವೆ. ಮಾನಸಿಕವಾಗಿ ಇದು ತುಂಬಾ ದಣಿವುಂಟು ಮಾಡುತ್ತದೆ.
ಶುಭ್ಮನ್ ಗಿಲ್, ಭಾರತ ತಂಡದ ನಾಯಕ
ಮೊದಲ ಪ್ರವಾಸದಲ್ಲೇ ಗಿಲ್ ಅಸಹಾಯಕ.!
ಕ್ಯಾಪ್ಟನ್ ಶುಭ್ಮನ್ ಗಿಲ್ ಮೊದಲ ಪ್ರವಾಸದಲ್ಲಿ ಬೊಂಬಾಟ್ ಬ್ಯಾಟಿಂಗ್ ನಡೆಸಿದ್ದಾರೆ. ಮೊದಲ 3 ಪಂದ್ಯಗಳಲ್ಲೇ 600ಕ್ಕೂ ಅಧಿಕ ರನ್ ಬಾರಿಸಿ ಬ್ಯಾಟಿಂಗ್ ಟೆಸ್ಟ್ನ ಫಸ್ಟ್ಕ್ಲಾಸ್ನಲ್ಲಿ ಪಾಸ್ ಮಾಡಿದ್ದಾರೆ. ಆದ್ರೆ, ನಾಯಕತ್ವದ ವಿಚಾರದಲ್ಲಿ ಗಿಲ್ ಗೊಂದಲದಲ್ಲೇ ಉಳಿದಿದ್ದಾರೆ. ಕೆಲವೊಮ್ಮೆ ಅಂತೂ ಮೈದಾನದಲ್ಲಿ ತಮ್ಮ ಅಸಹಾಯಕತೆಯನ್ನ ಗಿಲ್ ವ್ಯಕ್ತಪಡಿಸಿದ್ದಾರೆ. ಬೌಲಿಂಗ್ ಬದಲಾವಣೆ, ಫೀಲ್ಡ್ ಪ್ಲೇಸ್ಮೆಂಟ್ ವಿಚಾರಗಳಲ್ಲಿ ಪದೇ ಪದೇ ಎಡವಿದ್ದಾರೆ. ಮಾನಸಿಕವಾಗಿ ದಣಿವಾಗಿದೆ.
ಇದನ್ನೂ ಓದಿ: ಚಿಕ್ಕಮಗಳೂರಲ್ಲಿ ಕಾಡು ಆನೆ ದಾಳಿಗೆ ಉಸಿರು ಚೆಲ್ಲಿದ ಮಹಿಳೆ
ಗಿಲ್ಗೆ ಕಾಡ್ತಿದೆ ರೋಹಿತ್, ಕೊಹ್ಲಿ ಅನುಪಸ್ಥಿತಿ.!
ಮೊದಲ ಟಾಸ್ಕ್ನಲ್ಲಿ ಶುಭ್ಮನ್ ಗಿಲ್ಗೆ ಮಾಜಿ ನಾಯಕರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಅನುಪಸ್ಥಿತಿ ಕಾಡ್ತಿದೆ. ಈ ಇಬ್ಬರು ಆಟಗಾರರಿದ್ದಿದ್ರೆ, ಶುಭ್ಮನ್ ಗಿಲ್ಗೆ ಅಗತ್ಯ ಸಲಹೆ ಸೂಚನೆಗಳನ್ನ ನೀಡ್ತಾ ಇದ್ದರೂ. ನಾಯಕತ್ವದ ಒತ್ತಡವನ್ನ ಕಡಿಮೆ ಮಾಡ್ತಾ ಇದ್ರು. ಆದ್ರೆ, ಈಗ ತಂಡದಲ್ಲಿರೋ ಆಟಗಾರರ ಪೈಕಿ ಕೆ.ಎಲ್ ರಾಹುಲ್, ಬೂಮ್ರಾ ನಾಯಕತ್ವದ ವಿಚಾರದಲ್ಲಿ ಹೆಚ್ಚು ನೆರವಾಗ್ತಿಲ್ಲ. ವೈಸ್ ಕ್ಯಾಪ್ಟನ್ ಪಂತ್ ಇನ್ವಾಲ್ಮೆಂಟ್ ಕೂಡ ಕಡಿಮೆಯಿದೆ. ಹೀಗಾಗಿಯೇ 3 ಪಂದ್ಯಗಳಿಗೆ ಶುಭ್ಮನ್ಗೆ ಸುಸ್ತಾಗಿದೆ.
ಮೊದಲ 3 ಪಂದ್ಯದ ಅಂತ್ಯದ ಬೆನ್ನಲ್ಲೇ ನನಗೆ ನಾಯಕತ್ವದ ಹೊರೆಯಾಗ್ತಿದೆ ಅನ್ನೋ ಮಾತನ್ನ ಶುಭ್ಮನ್ ಗಿಲ್ ಆಡಿದ್ದಾರೆ. ಗಿಲ್ ಹೇಳಿರೋ ಈ ಮಾತು ಮತ್ತೆ ಟೀಮ್ ಇಂಡಿಯಾ ನಾಯತ್ವದಲ್ಲಿ ಬದಲಾವಣೆಯಾಗುತ್ತಾ ಅನ್ನೋ ಪ್ರಶ್ನೆಯ ಹುಟ್ಟಿಗೆ ಕಾರಣವಾಗಿದೆ. ಸದ್ಯಕ್ಕಂತೂ ಯಾವುದೇ ಬದಲಾವಣೆಗಳಾಗಲ್ಲ. ಈ ಸರಣಿ ಅಂತ್ಯದ ಬಳಿಕ ಏನ್ ಬೇಕಾದ್ರೂ ಆಗಬಹುದು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ