Advertisment

ಬೆಂಗಳೂರಲ್ಲಿ ಭಯಾನಕ ಅಪಘಾತ.. ಫ್ಲೈಓವರ್​​ನಿಂದ ಕೆಳಗೆ ಬಿದ್ದ ಕಾರು

author-image
Bheemappa
Updated On
ಬೆಂಗಳೂರಲ್ಲಿ ಭಯಾನಕ ಅಪಘಾತ.. ಫ್ಲೈಓವರ್​​ನಿಂದ ಕೆಳಗೆ ಬಿದ್ದ ಕಾರು
Advertisment
  • ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ
  • ಮದ್ಯಪಾನದ ಮತ್ತಿನಲ್ಲಿ ಕಾರು ಚಾಲನೆ ಮಾಡಿದನಾ ಚಾಲಕ?
  • ಫ್ಲೈಓವರ್​ ಮೇಲೆ ಭಯಾನಕ ಆಕ್ಸಿಡೆಂಟ್ ಆಗಿ ಬಿದ್ದ ಕಾರು

ಬೆಂಗಳೂರು: ವೋಕ್ಸ್​ವ್ಯಾಗನ್ ವೆಂಟೋ ಕಾರೊಂದು ಬೈಕ್​​ಗೆ ಡಿಕ್ಕಿಯಾಗಿ ಫ್ಲೈಓವರ್​ ಮೇಲಿಂದ ಕೆಳಗೆ ಬಿದ್ದಿರುವ ಪರಿಣಾಮ ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸಿಲಿಕಾನ್ ಸಿಟಿಯ ಯಶವಂತಪುರ ಸರ್ಕಲ್​ನಲ್ಲಿ ಈ ಘಟನೆ ನಡೆದಿದೆ.

Advertisment

ಇದನ್ನೂ ಓದಿ:ದೇಶಪಾಂಡೆ CM ಆದರೆ ಸ್ವಾಗತ ಎಂದ ಹೆಬ್ಬಾರ್, ನನಗೂ ಖುಷಿ ಎಂದ ವೈದ್ಯ; ಎಲ್ಲರಿಗೂ ಡಿಕೆ ಶಿವಕುಮಾರ್ ಕೌಂಟರ್..!

ವೋಕ್ಸ್​ವ್ಯಾಗನ್ ಕಾರು ಮೇಖ್ರಿ ಸರ್ಕಲ್ ರಸ್ತೆಯಿಂದ ತುಮಕೂರು ರಸ್ತೆ ಕಡೆಗೆ ಯಶವಂತಪುರ ಮಾರ್ಗವಾಗಿ ತೆರಳುತಿತ್ತು. ಈ ವೇಳೆ ಯಶವಂತಪುರ ಫ್ಲೈಓವರ್ ಮೇಲೆ ಹೋಗುವಾಗ ಮೊದಲಿಗೆ ಕಾರು, ಬೈಕ್​ಗೆ ಡಿಕ್ಕಿಯಾಗಿ ಮೇಲಿನಿಂದ ಬಿದ್ದಿದೆ. ಪರಿಣಾಮ ಕಾರಿನಲ್ಲಿದ್ದ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬೈಕ್ ಸವಾರನು ಕೂಡ ಗಾಯಗೊಂಡಿದ್ದಾನೆ. ಗಾಯಗೊಂಡ 5 ಜನರನ್ನೂ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಇದನ್ನೂ ಓದಿ: ಸ್ವಾತಂತ್ರ್ಯ ಬಂದು 76 ವರ್ಷಗಳದ್ರೂ ಬಸ್​ ಕಂಡಿರದ ಗ್ರಾಮಕ್ಕೆ ಬಂತು KSRTC​.. ನ್ಯೂಸ್​ಫಸ್ಟ್ ವರದಿಗೆ ಭಾರೀ ಮೆಚ್ಚುಗೆ 

Advertisment

publive-image

ಈ ಘಟನೆಯು ಬೆಳಗ್ಗೆ 3.45ರ ಸುಮಾರಿಗೆ ನಡೆದಿದ್ದು ಅಪಘಾತದ ಕಾರಿನಲ್ಲಿ ಮದ್ಯದ ಬಾಟಲಿಗಳು ಪತ್ತೆಯಾಗಿವೆ. ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿರುವ ಶಂಕೆ ವ್ಯಕ್ತವಾಗಿದೆ. ಕಾರು (TN 37 DH 9484) ತಮಿಳುನಾಡು ರಿಜಿಸ್ಟ್ರೇಷನ್ ಹೊಂದಿದೆ. ಬೈಕ್​ಗೆ ಗುದ್ದಿದಾಗ ಕಾರಿನಲ್ಲಿದ್ದ ಏರ್ ಬ್ಯಾಗ್ ಓಪನ್ ಆದ ಪರಿಣಾಮ ಎಲ್ಲರೂ ಪ್ರಾಣಾಪಾಯದಿಂದ ಬಚಾವ್ ಆಗಿದ್ದಾರೆ. ಕಾರು ಕೆಳಕ್ಕೆ ಬಿದ್ದ ಪರಿಣಾಮ ನಜ್ಜುಗುಜ್ಜು ಆಗಿದ್ದು ಗುರುತು ಸಿಗದಂತೆ ಆಗಿದೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಯಶವಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment