Advertisment

ಮಧ್ಯರಾತ್ರಿ ಭೀಕರ ಅಪಘಾತ.. ಮೂವರು ಸ್ಥಳದಲ್ಲೇ ಸಾವು.. ಮರಕ್ಕೆ ಸಿಲುಕಿ ನೇತಾಡಿದ ಮೃತದೇಹ

author-image
Ganesh
Updated On
ಮಧ್ಯರಾತ್ರಿ ಭೀಕರ ಅಪಘಾತ.. ಮೂವರು ಸ್ಥಳದಲ್ಲೇ ಸಾವು.. ಮರಕ್ಕೆ ಸಿಲುಕಿ ನೇತಾಡಿದ ಮೃತದೇಹ
Advertisment
  • ಚಾಲಕನ ನಿಯಂತ್ರಣ ತಪ್ಪಿ ಕಾಲುವೆಗೆ ಬಿದ್ದ ಕಾರು
  • ಓರ್ವ ಕಾರು ಪ್ರಯಾಣಿಕ ಪ್ರಾಣಾಪಾಯದಿಂದ ಪಾರು
  • ಸ್ಥಳಕ್ಕೆ ಗೌರಿಬಿದನೂರು ಗ್ರಾಮಾಂತರ ಪೊಲೀಸರು ಭೇಟಿ

ಭೀಕರ ಕಾರು ಅಪಘಾತದಲ್ಲಿ ಮೂವರು ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ‌ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ವಾಟದಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ. ಅಪಘಾತದಲ್ಲಿ ಓರ್ವ ಪ್ರಾಣಾಪಾಯದಿಂದ‌ ಪಾರಾಗಿದ್ದಾನೆ.

Advertisment

ಕಳೆದ ರಾತ್ರಿಯೇ ಅಪಘಾತ ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ. ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ಕಾಲುವೆಗೆ ಕಾರು ಉರುಳಿದೆ. ಅಪಘಾತದ ತೀವ್ರತೆಗೆ ಓರ್ವ ಪ್ರಯಾಣಿಕ ಮರಕ್ಕೆ ಸಿಲುಕಿ ನೇತಾಡಿದ್ದಾನೆ. ಬೆಸ್ಕಾಂ ಸಿಬ್ಬಂದಿ ಪ್ರಯಾಣಿಸುತ್ತಿದ್ದ ಬ್ರಿಜಾ ಕಾರು ಇದಾಗಿದೆ ಎನ್ನಲಾಗಿದೆ.

ಇದನ್ನೂ ಓದಿ:ಅಯೋಧ್ಯೆಯಲ್ಲಿ ಬಿಜೆಪಿಗೆ ಮುಖಭಂಗ.. ಹೀನಾಯ ಸೋಲಿಗೆ ಅಸಲಿ ಕಾರಣ ಬಿಚ್ಚಿಟ್ಟ ಸ್ಥಳೀಯ ನಿವಾಸಿಗಳು..!

ಕೆಪಿಟಿಸಿಎಲ್ ವೇಣಗೋಪಾಲ್ (34), ಶ್ರೀಧರ್ (35), ಬೆಸ್ಕಾಂ ಲೈನ್​ಮ್ಯಾನ್ ಮಂಜಪ್ಪ (35) ಮೃತ ದುರ್ದೈವಿಗಳು. ಸ್ಥಳಕ್ಕೆ ಗೌರಿಬಿದನೂರು ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment