ಕುಚಿಕು ಹಾಡು ಕೇಳ್ತಾ ಬಲಿಯಾದ್ರು ಕುಚಿಕು ಸ್ನೇಹಿತರು
ಜಾಲಿ ರೈಡ್ ಹೊರಟ ಸ್ನೇಹಿತರ ದೃಶ್ಯ ಇಲ್ಲಿದೆ
ದಶಪಥ ಹೆದ್ದಾರಿ ಸಾವಿನ ರಹದಾರಿ
ಕರ್ನಾಟಕ ಎಕ್ಸ್‌ಪ್ರೆಸ್ ವೇ ಎಂದೇ ಹೆಸರುವಾಸಿಯಾಗಿರುವ ಬೆಂಗಳೂರು ಮೈಸೂರು ದಶಪಥ ಹೆದ್ದಾರಿ ಸದ್ಯ ಸಾವಿನ ದಾರಿಯಾಗಿದೆ. ಹಾಲಿ ಡೇ ಮೂಡ್‌ನಲ್ಲಿ ಜಾಲಿಯಾಗಿದ್ದ ಸ್ನೇಹಿತರಿಗೆ ಹೆದ್ದಾರಿ ಯಮಪಾಶವಾಗಿದೆ. ಹೆದ್ದಾರಿಯಲ್ಲಿ ಅಡ್ಡಗಟ್ಟಿದ ಯಮರಾಯ ತನ್ನ ಲೋಕಕ್ಕೆ ಕರೆದೊಯ್ದಿದ್ದಾರೆ.
ಅಂದಹಾಗೆಯೇ, ಇವರನ್ನೂ ಕೂಡ ಇದೇ ಹಾಡು ಕಟ್ಟಿ ಹಾಕಿತ್ತು. ಅದೇ ಸ್ನೇಹಕ್ಕೆ ಸೋತ ಈ ನಾಲ್ವರು, ಕುಚಿಕು ಹಾಡನ್ನ ಗುನುಗ್ತಾ ಗುನುಗ್ತಾ, ತಾವು ಯಮನ ಪಾಶಕ್ಕೆ ಹತ್ತಿರ ಆಗ್ತಿದ್ದೀವಿ ಅನ್ನೋದು ಗೊತ್ತೇ ಆಗ್ಲಿಲ್ಲ. ಜಾಲಿ ಮೂಡ್‌ನಲ್ಲಿ ಸಂಡೇ ವೀಕೆಂಡ್ ಅಂತ ಎಂಜಾಯ್ ಮಾಡ್ತಾ. ಇಂಡಿಕಾ ಕಾರ್ನಲ್ಲಿ ಸಾಂಗ್ ಹಾಡ್ಕೊಂಡು ಜಾಲಿ ರೈಡ್ ಹೋಗ್ತಿದ್ದ ಫ್ರೆಂಡ್ಸ್. ಸಾರೀ ಇದು ಅವರ ಪಾಲಿಗೆ ಜಾಲಿ ರೈಡ್ ಆಗಿರಲಿಲ್ಲ. ಬದಲಿಗೆ ಸಾವಿನ ರೈಡ್ ಆಗಿತ್ತು..
ಪ್ರಾಣ ಹೊತ್ತೋಗಲು ರಾಮನಗರದಲ್ಲಿ ಕಾಯ್ತಿದ್ದ ಯಮ
ನಿಧಾನವಾಗಿ ಚಲಿಸುತ್ತಿರೋ ವಾಹನಗಳು. ಅಣ್ಣ ಏನ್ ಆಯ್ತಣ್ಣ, ಅಣ್ಣ ಏನ್ ಆಯ್ತಣ್ಣ ಅಂತ ಕೇಳ್ತಿರೋ ವಾಹನ ಸವಾರರು. ರಸ್ತೆ ಮಧ್ಯೆ ಅಡ್ಡದಾಗಿ ನಿಂತಿರೋ ಇಂಡಿಕಾ ಕಾರು. ಅದೇ ಚಡ್ಡಿ ದೋಸ್ತಿ ಕಣೋ ಕುಚಿಕು ಅಂತ ಹಾಡು ಹಾಡ್ತಿದ್ದ ಕಾರು. ಆ ಕಾರಿನ ಟೇಪ್ ರೆಕಾರ್ಡರ್ ಸ್ತಬ್ಧವಾಗಿತ್ತು. ಟೇಪ್ ರೆಕಾರ್ಡರ್ನ ಹಾಡಿಗೆ ಕೋರಸ್ ಹಾಡ್ತಿದ್ದವರು, ಮೌನ ತಬ್ಬಿ ಬಿದ್ದಿದ್ದರು. ರಸ್ತೆಯುದ್ದಕ್ಕೂ ಚೆಲ್ಲಿರೋ ರಕ್ತ ಎಲ್ಲದಕ್ಕೂ ಉತ್ತರ ಹೇಳ್ತಿತ್ತು.
ಎಕ್ಸ್‌ಪ್ರೆಸ್ ಹೈವೇನಲ್ಲಿ ಭೀಕರ ದುರಂತ
ಮದ್ದೂರು ತಾಲೂಕಿನ ಡಣಾಯಕನಪುರ ಗ್ರಾಮದ ಮಂಜೇಶ್, ಚನ್ನಪಟ್ಟಣ ತಾಲೂಕಿನ ಕೋಡಂಬಳ್ಳಿ ಗ್ರಾಮದ ವಿನಯ್. ಚನ್ನಪಟ್ಟಣದ ನಿಖಿಲ್, ರಾಮನಗರದ ವಿಜಯ್ ಈ ನಾಲ್ವರು ಆಪ್ತ ಮಿತ್ರರು. ಪ್ರಾಣಕ್ಕೆ ಪ್ರಾಣಕೊಡುವ ಸ್ನೇಹಿತರು. ಒಬ್ಬಂಟಿಯಾಗಿ ಹೋಗದೆ, ಎಲ್ಲರೂ ಜೊತೆಗೆ ಹೋಗ್ತಿದ್ರು. ಈಗ ಸಾವಲ್ಲೂ ಇಬ್ಬರು ಒಂದಾಗಿ ಹೋಗಿದ್ದಾರೆ. ಚನ್ನಪಟ್ಟಣದ ಮುದುಗೆರೆ ಗ್ರಾಮದ ಎಕ್ಸ್‌ಪ್ರೆಸ್ ಹೈವೇನಲ್ಲಿ ಭೀಕರ ದುರಂತ ಈ ನಾಲ್ವರನ್ನ ಚದುರಿಸಿದೆ.
ಬಟ್ಟೆ ತರಲು ಹೋದವರು ಹೆಣವಾದರು
ಅಂದಹಾಗೆಯೇ ಮದ್ದೂರಿನ ಬೆಸಗರಹಳ್ಳಿಗೆ ಬಟ್ಟೆ ತರಲು ಹೋಗಿದ್ರು. ಆದ್ರೆ, ವಿಧಿಯಾಟ ಬೇರೆ ಆಗಿತ್ತು. ವಾಪಸ್ಸ್ ಬರುವಾಗ ಕಾರು ಡಿವೈಡರ್‌ಗೆ ಡಿಕ್ಕಿಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಕಾರು ಸಂಪೂರ್ಣ ಜಖಂಗೊಂಡಿದೆ. ಕಾರಿನಲ್ಲಿದ್ದ ಮದ್ದೂರು ತಾಲೂಕಿನ ಡಣಾಯಕನಪುರ ಗ್ರಾಮದ 28 ವರ್ಷದ ಮಂಜೇಶ್, ಚನ್ನಪಟ್ಟಣ ತಾಲೂಕಿನ ಕೋಡಂಬಳ್ಳಿ ಗ್ರಾಮದ ನಿವಾಸಿ 23 ವರ್ಷದ ವಿನಯ್ ಉಸಿರು ಚೆಲ್ಲಿ ಹಾಡು ಮುಗಿಸಿದ್ದಾರೆ.
ರಾಮನಗರದ ಮಂಜುನಾಥ್ ನಗರ ನಿವಾಸಿ 23 ವರ್ಷದ ವಿಜಯ್, ಚನ್ನಪಟ್ಟಣ ಮೂಲದ ನಿಖಿಲ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪಘಾತಕ್ಕೂ ಮುನ್ನ ಕಾರಿನಲ್ಲಿ ಸ್ನೇಹಿತರು ಸಾಂಗ್ ಹಾಕಿಕೊಂಡು ಎಂಜಾಯ್ ಮೂಡ್ನಲ್ಲಿದ್ದ ವಿಡಿಯೋ ಹೃದಯ ಹಿಂಡುವಂತಿದೆ.
ರಸ್ತೆ ಅಪಘಾತದ ಹಿನ್ನೆಲೆ, ಬೆಂಗಳೂರು ಟು ಮೈಸೂರು ಹೆದ್ದಾರಿಯಲ್ಲಿ ಕೆಲಕಾಲ ಸಂಚಾರ ವ್ಯತ್ಯಯ ಉಂಟಾಗಿತ್ತು. ಸ್ಥಳಕ್ಕೆ ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ವೃತ್ತ ನಿರೀಕ್ಷ ಕೃಷ್ಣ ಮತ್ತು ಸಿಬ್ಬಂದಿ ತೆರಳಿ ಸಂಚಾರ ಸುಗಮಗೊಳಿಸಿದ್ರು. ಈ ಸಂಬಂಧ ಚನ್ನಪಟ್ಟಣ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿದೆ.
ಒಟ್ಟಾರೆ, ಹಾಡು ಗುನುಗ್ತಾ ಸಾವಿನ ಡೋರ್ನಲ್ಲಿದ್ದ ಈ ನಾಲ್ವರ ಬಾಳಿನ ಹಾಡನ್ನೇ ವಿಧಿ ಕಸಿದುಕೊಂಡಿದ್ದಾನೆ. ಹಾಡಿನ ಸಪ್ಪಳ ನಿಂತು, ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ದಶಪಥ ಹೆದ್ದಾರಿ, ಸಾವಿನ ರಹದಾರಿ ಆಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ