/newsfirstlive-kannada/media/post_attachments/wp-content/uploads/2023/10/Car_Accident.jpg)
ಹೈದರಾಬಾದ್​: ನಿಯಂತ್ರಣ ತಪ್ಪಿದ ಕಾರು ರಸ್ತೆ ಮಧ್ಯದ ಡಿವೈಡರ್​​ಗೆ ಗುದ್ದಿ ಎರಡು ಜೀವವನ್ನ ಬಲಿ ಪಡೆದಿದೆ. ಇಂಥದ್ದೊಂದು ಭೀಕರ ಅಪಘಾತ ನಡೆದಿರೋದು ತೆಲಂಗಾಣದ ಖಮ್ಮಂ ಜಿಲ್ಲೆಯಲ್ಲಿ.
ರಸ್ತೆಯಲ್ಲಿ ಕಾರೊಂದು ಚಲಿಸುತ್ತಾ ಬರ್ತಿತ್ತು. ಹೀಗೆ ಬರುವಾಗ ಕಾರು ನಿಯಂತ್ರಣ ತಪ್ಪಿ, ರಸ್ತೆಯಿಂದ ಪಕ್ಕಕ್ಕೆ ಸರಿದಿದೆ. ಅಷ್ಟೇ ಅಲ್ಲದೇ ಡಿವೈಡರ್​ಗೂ ಗುದ್ಬಿಟ್ಟಿದೆ. ಪರಿಣಾಮ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಕಾರಿನ ಪಾರ್ಟ್ಸ್​ಗಳು ರಸ್ತೆಯಲ್ಲೇ ಚಲ್ಲಾಪಿಲ್ಲಿಯಾಗಿಬಿಟ್ಟಿವೆ.
ಇನ್ನು, ಈ ಅಪಘಾತದಲ್ಲಿ ಕಾರಲ್ಲಿದ್ದ ದಂಪತಿ ಸಾವನ್ನಪ್ಪಿದ್ದಾರೆ. ಇನ್ನು ಜೊತೆಗಿದ್ದ ನಾಲ್ವರು ಮಕ್ಕಳಿಗೆ ಗಂಭೀರ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಹೈದರಾಬಾದ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಕಾಕತಾಳೀಯ ಏನಪ್ಪಾ ಅಂದ್ರೆ ಸಂಬಂಧಿಕರೊಬ್ಬರ ಅಂತ್ಯಸಂಸ್ಕಾರ ಮುಗಿಸಿ ವಾಪಸ್ ಆಗುತ್ತಿದ್ದ ವೇಳೆ ಅಪಘಾತವಾಗಿ ದಂಪತಿ ಮೃತಪಟ್ಟಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us