Advertisment

ಭಾರೀ ಗಾಳಿ ಮಳೆಗೆ ನಡು ರಸ್ತೆಯಲ್ಲಿ ಪಲ್ಟಿ ಹೊಡೆದ ಕಾರು.. ಮಳೆ ಮಾಡಿದ ಅನಾಹುತ..!

author-image
Ganesh
Updated On
ಭಾರೀ ಗಾಳಿ ಮಳೆಗೆ ನಡು ರಸ್ತೆಯಲ್ಲಿ ಪಲ್ಟಿ ಹೊಡೆದ ಕಾರು.. ಮಳೆ ಮಾಡಿದ ಅನಾಹುತ..!
Advertisment
  • ಗಾಳಿ ಮಳೆಗೆ ನೆಲಕ್ಕಪ್ಪಳಿಸಿದ ಬೃಹತ್ ಮರ
  • ಮರ ಬಿದ್ದ ಹಿನ್ನೆಲೆಯಲ್ಲಿ ರಸ್ತೆ ಸಂಚಾರಕ್ಕೆ ಅಡಚಣೆ
  • ಕಾರು ಪಲ್ಟಿ, ವಾಹನದಲ್ಲಿದ್ದ ಪ್ರಯಾಣಿಕರಿಗೆ ಏನಾಯಿತು..?

ತುಮಕೂರು: ಜಿಲ್ಲೆಯಲ್ಲಿ ತಡರಾತ್ರಿ ಸುರಿದ ಭಾರೀ ಗಾಳಿ ಮಳೆಯಿಂದ ಅನಾಹುತ ಸೃಷ್ಟಿಯಾಗಿದೆ. ಗುಬ್ಬಿ ತಾಲೂಕಿನ ಹೊಸಳ್ಳಿ ರಸ್ತೆಯಲ್ಲಿ ಬೃಹತ್ ಮರ ನೆಲಕ್ಕೆ ಬದಿದ್ದಿದೆ.

Advertisment

ಪರಿಣಾಮ ಗುಬ್ಬಿ- ಹೊಸಳ್ಳಿ ಮಾರ್ಗದಲ್ಲಿ ಸಂಚಾರಕ್ಕೆ ಅಡ್ಡಿಯಾಗಿದೆ. ಬಿರುಗಾಳಿಯ ರಭಸಕ್ಕೆ ಮರ ಬಿದ್ದಿದೆ. ಮಳೆಯಿಂದ ರಸ್ತೆಯಲ್ಲಿ ಆಗಿರುವ ಸಮಸ್ಯೆಯಿಂದ ಕಾರು ಪಲ್ಟಿ ಹೊಡೆದಿದೆ. ಜೋರಾದ ಗಾಳಿ ಬಂದ ಹಿನ್ನೆಲೆಯಲ್ಲಿ ಡ್ರೈವರ್ ಬ್ರೇಕ್ ಹಾಕಲು ಮುಂದಾಗಿದ್ದಾನೆ.
ಬ್ರೇಕ್ ಹಾಕುತ್ತಿದ್ದಂತೆಯೇ ಕಾರು ನಿಯಂತ್ರಣಕ್ಕೆ ಸಿಗದೇ ಪಲ್ಟಿ ಹೊಡೆದಿದೆ. ನಡು ರಸ್ತೆಯಲ್ಲಿ ಕಾರು ಪಲ್ಟಿಯಾಗಿದೆ. ಕಾರಿನಲ್ಲಿದ್ದ ಪ್ರಯಾಣಿಕರು ಪ್ರಾಣಾಯದಿಂದ ಪಾರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ:Rain in Karnataka: ರಾಜ್ಯದ ಈ ಜಿಲ್ಲೆಗಳಲ್ಲಿ 6 ದಿನ ಭರ್ಜರಿ ಮಳೆ.. ಎಚ್ಚರಿಕೆ ಕೊಟ್ಟ ಹವಾಮಾನ ಇಲಾಖೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment