ಮದುವೆ ಮುಗಿಸಿ ಬರುವಾಗ ಕಾರು ಅಪಘಾತ.. ಓರ್ವ ಸಾವು, ಇಬ್ಬರಿಗೆ ಗಾಯ

author-image
AS Harshith
Updated On
ಮದುವೆ ಮುಗಿಸಿ ಬರುವಾಗ ಕಾರು ಅಪಘಾತ.. ಓರ್ವ ಸಾವು, ಇಬ್ಬರಿಗೆ ಗಾಯ
Advertisment
  • ಚಾಲಕನ ನಿಯಂತ್ರಣ ತಪ್ಪಿ ಕಾರು ಅಪಘಾತ
  • ಅಪಘಾತದ ರಭಸಕ್ಕೆ ಕಾರಿನ ಮುಂಭಾಗ ನಜ್ಜುಗುಜ್ಜು
  • ಕಾರು ಅಪಘಾತದಲ್ಲಿ ಇಬ್ಬರಿಗೆ ಗಾಯ.. ಆಸ್ಪತ್ರೆಗೆ ದಾಖಲು

ಗದಗ: ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಅಪಘಾತಕ್ಕೀಡಾದ ಘಟನೆ ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಿನ ರಾಜೂರು ಬಳಿ ನಡೆದಿದೆ. ಅಪಘಾತದಲ್ಲಿ ಓರ್ವ ಸಾವನ್ನಪ್ಪಿದ್ದು, ಇಬ್ಬರಿಗೆ ಗಾಯಗಳಾಗಿವೆ.

ಇದನ್ನೂ ಓದಿ:ಮಳೆ..ಮಳೆ..ಮಳೆ ಕಾವೇರಿಗೆ ಜೀವಕಳೆ! KRS ಹರಿದು ಬರುತ್ತಿದೆ ಭಾರೀ ಪ್ರಮಾಣದ ಒಳಹರಿವು!

ಮದುವೆ ಕಾರ್ಯ ಮುಗಿಸಿ ಲಿಂಗಸಗೂರಿನಿಂದ ಸೂಡಿಗೆ ಬರುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಗಣಪತಿ ಭಟ್ (70) ಎಂಬವರು ಸಾವನ್ನಪ್ಪಿದ್ದಾರೆ.

publive-image

ಇದನ್ನೂ ಓದಿ: ಕೇದಾರನಾಥ ದೇವಸ್ಥಾನದಲ್ಲಿ 228kg ಚಿನ್ನ ನಾಪತ್ತೆ! ಈ ಗಂಭೀರ ಆರೋಪ ಮಾಡಿದ್ಯಾರು ಗೊತ್ತಾ?

ಕಾರ್​​ನಲ್ಲಿ ಪ್ರಯಾಣಿಸುತ್ತಿದ್ದ ಕಿರಣ್, ವೈಷ್ಣವಿ ಭಟ್​​ಗೆ ಗಾಯಗಳಾಗಿವೆ. ಗಾಯಾಳುಗಳನ್ನ ಜಿಮ್ಸ್ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ನಿದ್ರೆ ಮಂಪರಿಯಲ್ಲಿ ಕಾರು ನಿಯಂತ್ರಣ ತಪ್ಪಿ ಅಪಘಾತಕ್ಕೀಡಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ. ಗಜೇಂದ್ರಗಡ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ‌ ಘಟನೆ ನಡೆದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment