newsfirstkannada.com

ಹಣ್ಣಿನ ಅಂಗಡಿಗೆ ನುಗ್ಗಿ, ವ್ಯಕ್ತಿಯ ಮೇಲೆ ಹರಿದ ಕಾರು.. ಸ್ಥಳದಲ್ಲೇ ಸಾವು

Share :

Published June 1, 2024 at 6:32pm

    ಹಣ್ಣುಗಳನ್ನು ಖರೀದಿ ಮಾಡಲೆಂದು ಅಂಗಡಿಗೆ ಬಂದಿದ್ದ ವೇಳೆ ಘಟನೆ

    ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಓರ್ವ ಕಿಮ್ಸ್​ಗೆ ದಾಖಲು

    ಹಣ್ಣುಗಳನ್ನು ಮಾರಾಟ ಮಾಡುತ್ತಿದ್ದ ಅಂಗಡಿ ಮಾಲೀಕನಿಗೂ ಗಾಯ

ಧಾರವಾಡ: ಭೀಕರ ರಸ್ತೆ ಅಪಘಾತ ಸಂಭವಿಸಿದ್ದು ಕಾರೊಂದು ಹಣ್ಣಿನ ಅಂಗಡಿಗೆ ನುಗ್ಗಿದ ಬಳಿಕ ವ್ಯಕ್ತಿಯ ಮೇಲೆ ಹರಿದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಈ ಘಟನೆ ಧಾರವಾಡ ನಗರದ ಕೃಷಿ ಇಲಾಖೆ ಎದುರಿಗೆ ನಡೆದಿದೆ.

ಘಟನೆಯಲ್ಲಿ ಮೃತಪಟ್ಟ ವ್ಯಕ್ತಿಯ ಬಗ್ಗೆ ಗುರುತು ಪತ್ತೆ ಹಚ್ಚಲಾಗುತ್ತಿದೆ. ಮೃತ ವ್ಯಕ್ತಿಯು ಹಣ್ಣುಗಳ ಖರೀದಿ ಮಾಡಲೆಂದು ಅಂಗಡಿಗೆ ಬಂದಿದ್ದರು. ಇದೇ ಸಮಯಕ್ಕೆ ಧಾರವಾಡದಿಂದ ಬೆಳಗಾವಿ ಕಡೆ ಹೊರಟಿದ್ದ ಕಾರು ವೇಗವಾಗಿ ಬಂದು ಮೊದಲು ಮರಕ್ಕೆ ಡಿಕ್ಕಿ ಹೊಡೆದಿದೆ. ಬಳಿಕ ಹಣ್ಣಿನ ಅಂಗಡಿಗೆ ಡಿಕ್ಕಿ ಹೊಡೆದು ವ್ಯಕ್ತಿಯ ಮೇಲೆ ಹರಿದಿದೆ. ಇದರಿಂದ ವ್ಯಕ್ತಿಯು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಕಾರು ಬೆಳಗಾವಿ ಮೂಲದ್ದು ಆಗಿದೆ.

ಇದನ್ನೂ ಓದಿ: ಮಗನ ಬದಲು ತಾಯಿಯ ರಕ್ತವೇ ಸ್ಯಾಂಪಲ್‌.. ಪೋರ್ಷೆ ಕಾರು ಆಕ್ಸಿಡೆಂಟ್ ಕೇಸ್‌ನಲ್ಲಿ ನಾಟಕಗಳು ಒಂದು, ಎರಡಲ್ಲ!

ಇನ್ನು ಘಟನೆಯಲ್ಲಿ ಹಣ್ಣಿನ ವ್ಯಾಪಾರಿಗೂ ಗಂಭೀರವಾದ ಗಾಯಗಳು ಆಗಿವೆ. ಅಲ್ಲದೇ ಕಾರು ಪಲ್ಟಿ ಹೊಡೆದಿದ್ದರಿಂದ ಒಳಗಿದ್ದವರಿಗೂ ಗಂಭೀರವಾದ ಗಾಯಗಳು ಆಗಿವೆ. ಗಾಯಾಳುಗಳನ್ನ ಧಾರವಾಡ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಓರ್ವನನ್ನ ಕಿಮ್ಸ್​ಗೆ ದಾಖಲು ಮಾಡಲಾಗಿದೆ. ಈ ಪ್ರಕರಣ ಸಂಚಾರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹಣ್ಣಿನ ಅಂಗಡಿಗೆ ನುಗ್ಗಿ, ವ್ಯಕ್ತಿಯ ಮೇಲೆ ಹರಿದ ಕಾರು.. ಸ್ಥಳದಲ್ಲೇ ಸಾವು

https://newsfirstlive.com/wp-content/uploads/2024/06/DWD_CAR_ACCIDENT.jpg

Load More