/newsfirstlive-kannada/media/post_attachments/wp-content/uploads/2024/06/Vijayanagar.jpg)
ವಿಜಯನಗರ: ಬೈಕ್​ ಮತ್ತು ಕಾರು ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬೆಳಕಿಗೆ ಬಂದಿದೆ. ಹೊಸಪೇಟೆ ತಾಲೂಕಿನ ಹಂಪಿ ಕನ್ನಡ ವಿಶ್ವವಿದ್ಯಾಲಯದ ಬಿ ಗೇಟ್ ಬಳಿ ಘಟನೆ ನಡೆದಿದೆ.
/newsfirstlive-kannada/media/post_attachments/wp-content/uploads/2024/06/car-Accident-1.jpg)
ಇದನ್ನೂ ಓದಿ: ಕಲೆಗಳು.. ರಕ್ತದ ಕಲೆಗಳು.. ಸೆಕ್ಯುರಿಟಿ ಗಾರ್ಡ್​ ಬಿಚ್ಚಿಟ್ಟ ರೇಣುಕಾಸ್ವಾಮಿ ಹತ್ಯೆಯ ಬಗೆಗಿನ ಸ್ಫೋಟಕ ಮಾಹಿತಿ
ಆಂಜನೇಯ (53), ಹನುಮೇಶ್(18) ಮೃತ ದುರ್ದೈವಿಗಳು. ಮೃತರಿಬ್ಬರೂ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಮಲ್ಲಾಪುರ ಗ್ರಾಮದವರು ಎಂದು ತಿಳಿದುಬಂದಿದೆ.
/newsfirstlive-kannada/media/post_attachments/wp-content/uploads/2024/06/car-Accident.webp)
ಇದನ್ನೂ ಓದಿ: ದರ್ಶನ್​ ಸೇಫ್​ ಮಾಡುವಂತೆ ಕಣ್ಣೀರಿಟ್ಟ ಸಚಿವ.. ಗೃಹ ಸಚಿವರ ಕಾಲಿಗೆ ಬಿದ್ದು ಹೈಡ್ರಾಮಾ?
ಬೈಕ್​ನಲ್ಲಿದ್ದವರು ಕಮಲಾಪುರದಿಂದ ಪಾಪಿನಾಯಕನ ಹಳ್ಳಿಯ ಕಡೆ ಹೋಗುತ್ತಿದ್ದರು. ಈ ವೇಳೆ ಎದುರಿಗೆ ಸ್ಪೀಡಾಗಿ ಬಂದ ಕಾರು ಬೈಕ್​ಗೆ ಗುದ್ದಿದೆ. ಗುದ್ದಿದ ಪರಿಣಾಮ ಸ್ಥಳದಲ್ಲಿ ಬೈಕ್ ಸವಾರರಿಬ್ಬರು ಸಾವನ್ನಪ್ಪಿದ್ದಾರೆ. ಕಮಲಾಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us