/newsfirstlive-kannada/media/post_attachments/wp-content/uploads/2024/06/Accident-1.jpg)
ಚಿತ್ರದುರ್ಗ: ಬೆಳ್ಳಂಬೆಳಿಗ್ಗೆ ಚಿತ್ರದುರ್ಗದಲ್ಲಿ ಜವರಾಯನ ಅಟ್ಟಹಾಸ ಮೆರೆದಿದ್ದಾನೆ. ಚಲಿಸುತ್ತಿದ್ದ ಕಾರಿಗೆ ರಭಸವಾಗಿ ಬಂದ ಲಾರಿಯೊಂದು ಡಿಕ್ಕಿ ಹೊಡೆದಿದೆ. ಪರಿಣಾಮ ಇಬ್ಬರು ಚಿಕ್ಕ ಮಕ್ಕಳು ಸೇರಿ ನಾಲ್ವರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: ಬದಲಾಯ್ತು ನಟನ ಮನಸ್ಥಿತಿ.. ತಪ್ಪಾಯ್ತು.. ತಪ್ಪಾಯ್ತು ಅಂತಿದ್ದಾರಂತೆ ದರ್ಶನ್!
ಚಿತ್ರದುರ್ಗ ತಾಲೂಕಿನ ಚಿಕ್ಕಬೆನ್ನೂರು ಗ್ರಾಮದ NH 4 ರಲ್ಲಿ ಘಟನೆ ನಡೆದಿದೆ. ಭರಮಸಾಗರ ಹೋಬಳಿಯ ಚಿಕ್ಕಬೆನ್ನೂರು ಗ್ರಾಮದಲ್ಲಿ ಅಪಘಾಥ ಸಂಭವಿಸಿದೆ. ಲಾರಿ ಮತ್ತು ಕಾರು ಚಿತ್ರದುರ್ಗ ಕಡೆಯಿಂದ ದಾವಣಗೆರೆ ಕಡೆಗೆ ಹೊರಟಿತ್ತು. ಈ ವೇಳೆ ಕಾರಿನ ಹಿಂಬಾಗಕ್ಕೆ ಲಾರಿ ಗುದ್ದಿದೆ.
ಇದನ್ನೂ ಓದಿ: ಮುಕ್ತಾಯದ ಹಂತಕ್ಕೆ ಬಂದ ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ.. ದರ್ಶನ್ ಮತ್ತು ಗ್ಯಾಂಗ್ ಜೈಲು ಸೇರುವ ಸಾಧ್ಯತೆ
ಮೂವರು ಗಾಯಾಳುಗಳನ್ನು ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಭರಮಸಾಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಪೊಲೀಸ್ ತನಿಖೆಯಿಂದ ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ