newsfirstkannada.com

ಬೆಂಗಳೂರಿಗರೇ ಎಚ್ಚರ! ಜಸ್ಟ್​​ ಹಾರ್ನ್​​ ಮಾಡಿದ್ದಕ್ಕೆ ಕಾರಿನ ಗಾಜು ಪುಡಿ ಪುಡಿ; ಚಾಲಕನ ಮೇಲೂ ಹಲ್ಲೆ!

Share :

Published July 15, 2023 at 6:29am

  ರಾಜಧಾನಿಯಲ್ಲಿ ಪುಂಡ-ಪೋಕರಿಗಳ ಹಾವಳಿ

  ಕಾರು ಚಾಲಕನ ಜೊತೆ ಕ್ಯಾತೆ ತೆಗೆದು ದರ್ಪ..!

  ಸೈಡ್ ಬಿಡುವಂತೆ ಹಾರ್ನ್​ ಮಾಡಿದ್ದೇ ತಪ್ಪಾ?

ಬೆಂಗಳೂರು: ರಸ್ತೆಯಲ್ಲಿ ಮುಂದೆ ಹೋಗೋ ವಾಹನಕ್ಕೆ ಹಾರ್ನ್​ ಹಾಕಂಗೆ ಇಲ್ಲ. ಹಾಕಿದ್ರೆ, ನಿಮ್ಮ ವಾಹನದ ಗಾಜು ಪುಡಿ ಪುಡಿ ಹಾಗೂ​ ನಿಮ್ಗೂ ಚೆನ್ನಾಗಿ ಏಟು ಬೀಳುತ್ತೆ. ಹೀಗೆ ನಾವು ಹೇಳುತ್ತಿಲ್ಲ. ಗಳೂರಿನಲ್ಲಿ ಹಾರ್ನ್​ ಹಾಕಿ ಸೈಡ್​ ಕೇಳಿದ್ದಕ್ಕೆ ಕಾರು ಚಾಲಕನಿಗೆ ಸಿಕ್ಕಿರೋ ಬಹುಮಾನನೇ ಇದು.

ಹಾರ್ನ್ ಮಾಡಿದಕ್ಕೆ ಕಾರು ಅಡ್ಡಗಟ್ಟಿದ ಪುಂಡರು

ನಗರದ ವರ್ತೂರು ಬಳಿ ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ಮೂರ್ನಾಲ್ಕು ಜನ ಸಾಗ್ತಾಯಿದ್ರು. ಹೀಗಾಗಿ ಹಿಂಬಂದಿಯಿಂದ ಬಂದ ಕಾರ್​ ಚಾಲಕ ಸೈಡ್​ ಬಿಡುವಂತೆ ಹಾರ್ನ್​ ಹಾಕಿದ್ದಾರೆ. ಇದೇ ಕಾರಣಕ್ಕೆ ಖ್ಯಾತೆ ತೆಗೆದ ಪುಂಡರು, ಕಾರು ಅಡ್ಡಗಟ್ಟಿ ದರ್ಪ ಮೆರೆದಿದ್ದಾರೆ. ಮನಸೋ ಇಚ್ಚೆ ವರ್ತಿಸಿದ್ದಾರೆ.

ಬೈಕ್​ನಿಂದ ಕಾರಿಗೆ ಡಿಕ್ಕಿ.. ಚಾಲಕನ ಮೇಲೆ ಹಲ್ಲೆ

ಮೊದಲು ಒಬ್ಬ ಬಂದು ಗಲಾಟೆಗೆ ಇಳಿತಾನೇ ಈ ನಡುವೆ ಮತ್ತೊಬ್ಬ ಬಂದು, ಬೈಕ್​ನಿಂದ ಕಾರಿಗೆ ಡಿಕ್ಕಿ ಹೊಡಿತಾನೆ. ಇಷ್ಟಾಗುವಾಗಲೇ ಕಾರು ಚಾಲಕನ ಮೇಲೆ ಪುಂಡರು ಹಲ್ಲೆ ಮಾಡೋದಕ್ಕೆ ಶುರು ಮಾಡ್ತಾರೆ. ಈ ವೇಳೆ ಎಚ್ಚೆತ್ತ ಕಾರು ಚಾಲಕ, ರಿವರ್ಸ್​ ಬಂದು ಅಲ್ಲಿಂದ ತಪ್ಪಿಸಿಕೊಳ್ತಾರೆ.

ಕಾರ್​ ಫಾಲೋ.. ಅಪಾರ್ಟ್‌ಮೆಂಟ್ ಬಳಿ ಬಂದು ಹಲ್ಲೆ

ಇಷ್ಟಕ್ಕೆ ಸುಮ್ಮನಾಗದ ಪುಂಡರು ಬಳಿಕ ಕಾರು ಫಾಲೋ ಮಾಡಿಕೊಂಡು ಅಪಾರ್ಟ್‌ಮೆಂಟ್ ಬಳಿಗೆ ಬಂದು ಗಲಾಟೆಗೆ ಇಳಿದಿದ್ದಾರೆ. ಅಷ್ಟೇ ಅಲ್ಲ, ಕಾರಿನ ಗಾಜು ಪುಡಿ ಪುಡಿ ಮಾಡಿದ್ದಾರೆ. ಈ ಎಲ್ಲಾ ದೃಶ್ಯ ಗುಂಜೂರು ಬಳಿಯ ಅಪಾರ್ಟ್‌ಮೆಂಟ್​ನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ವರ್ತೂರು ಪೊಲೀಸರಿಂದ ಆರೋಪಿಗಳ ಬಂಧನ

ಹಲ್ಲೆಗೊಳಗಾದ ವ್ಯಕ್ತಿ ಈ ಬಗ್ಗೆ ಟ್ವಿಟ್​ ಮೂಲಕ ಪೊಲೀಸರಿಗೆ ದೂರು ನೀಡಿದ್ದಾರೆ. ಸದ್ಯ, ದೂರು ದಾಖಲಿಸಿಕೊಂಡ ವರ್ತೂರು ಪೊಲೀಸರು ರಾತ್ರೋ ರಾತ್ರಿ ಕಾರ್ಯಚರಣೆ ನಡೆಸಿ, ಆರೋಪಿಗಳನ್ನ ಬಂಧಿಸಿದ್ದಾರೆ. ಕೇಶವ ಮೂರ್ತಿ, ರವೀಂದ್ರ, ಗಣೇಶ್ ಬಂಧಿತ ಆರೋಪಿಗಳು.

ಅದೇನೇ ಇರಲಿ ಸಿಲಿಕಾನ್​ ಸಿಟಿಯಲ್ಲಿ ಪುಂಡರ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಳವಾಗ್ತಾನೇ ಇದೆ. ಈ ನಡುವೆ ರಸ್ತೆಯಲ್ಲಿ ತಮ್ಮ ಪಾಡಿಗೆ ತಾವು ಸಾಗ್ತಾಯಿದ್ರು, ಹಲ್ಲೆಗೆ ಮುಂದಾಗ್ತಾರೆ ಅಂದ್ರೆ ನಾವೆಷ್ಟು ಸೇಫ್​ ನೀವೇ ಯೋಚಿಸಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಂಗಳೂರಿಗರೇ ಎಚ್ಚರ! ಜಸ್ಟ್​​ ಹಾರ್ನ್​​ ಮಾಡಿದ್ದಕ್ಕೆ ಕಾರಿನ ಗಾಜು ಪುಡಿ ಪುಡಿ; ಚಾಲಕನ ಮೇಲೂ ಹಲ್ಲೆ!

https://newsfirstlive.com/wp-content/uploads/2023/07/Car_1.jpg

Load More