/newsfirstlive-kannada/media/post_attachments/wp-content/uploads/2024/07/CTR_ACCIDEN.jpg)
ಚಿತ್ರದುರ್ಗ: ಬೈಕ್ ಹಾಗೂ ಕಾರಿನ ನಡುವೆ ರಾತ್ರಿ ಭೀಕರ ರಸ್ತೆ ಅಪಘಾತ ಸಂಭವಿಸಿ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಹೊಸದುರ್ಗ ಪಟ್ಟಣದ ಬಳಿ ನಡೆದಿದೆ.
ಇದನ್ನೂ ಓದಿ:ವರುಣಾರ್ಭಟಕ್ಕೆ 90 ಜನ ಸಾವು.. 12 ಲಕ್ಷಕ್ಕೂ ಹೆಚ್ಚು ಮಂದಿ ನಿರಾಶ್ರಿತ; ಇಂದು ಕೂಡ ಭಾರೀ ಮಳೆ ಎಚ್ಚರಿಕೆ
ಚಿಕ್ಕಮಗಳೂರು ಜಿಲ್ಲೆಯ ಕಡೂರು ಮೂಲದ ಪ್ರವೀಣ್ (29), ಯೋಗೀಶ್ (27) ಮೃತಪಟ್ಟವರು. ಬೈಕ್ನಲ್ಲಿ ಒಟ್ಟು ಮೂವರು ತೆರಳುತ್ತಿದ್ದರು. ಹೊಸದುರ್ಗ ಕಡೆಯಿಂದ ಕಡೂರು ಕಡೆಗೆ ಬರುತ್ತಿದ್ದಾಗ ಬೈಕ್-ಕಾರು ಡಿಕ್ಕಿಯಾಗಿವೆ. ಪರಿಣಾಮ ಬೈಕ್ನಲ್ಲಿದ್ದ ಮೂವರ ಪೈಕಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: ಕಾವೇರಿ ನೀರಿಗಾಗಿ ಸಿದ್ದು ಒಗ್ಗಟ್ಟಿನ ತಂತ್ರ.. ಸರ್ವ ಪಕ್ಷ ಸಭೆಗೆ ಬಿಜೆಪಿ-ಜೆಡಿಎಸ್ ಸಾಥ್.. ಯಾರೆಲ್ಲ ಬರ್ತಿದ್ದಾರೆ..?
ಓರ್ವ ಸವಾರ ಅಜ್ಜಯ್ಯ ಎನ್ನುವವರು ಗಂಭೀರವಾಗಿ ಗಾಯಗೊಂಡಿದ್ದು, ತಾಲೂಕು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಕುಂದಾಪುರ ಮೂಲದ ಚಿತ್ರೇಶ್ ಕುಮಾರ್ ಶೆಟ್ಟಿ ಎಂಬುವರಿಗೆ ಕಾರು ಸೇರಿದ್ದಾಗಿದೆ. ಘಟನೆ ಸಂಬಂಧ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಹೊಸದುರ್ಗ ಪೊಲೀಸ್ ಠಾಣೆಯ ಸಿಪಿಐ ತಿಮ್ಮಣ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ