/newsfirstlive-kannada/media/post_attachments/wp-content/uploads/2025/05/UP_CAR_ACCIDENT.jpg)
ಲಕ್ನೋ: ಮದುವೆ ಮುಗಿಸಿಕೊಂಡು ವಾಪಸ್​ ಊರಿಗೆ ಬರುವಾಗ ಕಾರೊಂದು ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ ಐವರು ಜೀವ ಬಿಟ್ಟಿದ್ದು, 6 ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಉತ್ತರ ಪ್ರದೇಶದ ಹಾರ್ಡೋಯ್​ನ ಆಲಮ್‌ನಗರದ ರಸ್ತೆ ತಿರುವಿನಲ್ಲಿ ಈ ಘಟನೆ ನಡೆದಿದೆ.
ಎರ್ಟಿಗಾ ಕಾರಿನಲ್ಲಿ ಒಟ್ಟು 11 ಜನರು ಪ್ರಯಾಣ ಮಾಡುತ್ತಿದ್ದರು. ಇದರಲ್ಲಿ 5 ಮಂದಿ ಜೀವ ಬಿಟ್ಟಿದ್ದಾರೆ. ಉಳಿದ 6 ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಆರು ಜನರ ಸ್ಥಿತಿ ಚಿಂತಾಜಕನವಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.
/newsfirstlive-kannada/media/post_attachments/wp-content/uploads/2025/05/UP_CAR_ACCIDENT_NEW.jpg)
ಉತ್ತರ ಪ್ರದೇಶದ ಪಾಲಿ ಪೊಲೀಸ್ ಠಾಣೆ ವ್ಯಾಪ್ತಿಯ ಪಟಿಯಾನಿಮ್ ಗ್ರಾಮದವರು ಆಗಿದ್ದು ನೀರಜ್ ಎನ್ನುವ ಯುವಕನ ವಿವಾಹ ಸಂಬಂಧ ಕುಸುಮಾ ಗ್ರಾಮಕ್ಕೆ ತೆರಳಿದ್ದರು. ಮದುವೆಯನ್ನು ಸಂತೋಷದಿಂದ ಮಾಡಿದ್ದ ಇವರು ಅದೇ ಖುಷಿಯಲ್ಲಿ ಕಾರಿನಲ್ಲಿ ವೇಗವಾಗಿ ಊರಿನ ಕಡೆಗೆ ಬರುತ್ತಿದ್ದರು. ಇದೇ ವೇಳೆ ಆಲಮ್‌ನಗರದ ರಸ್ತೆ ತಿರುವಿನಲ್ಲಿ ಕಾರು ನಿಯಂತ್ರಣ ತಪ್ಪಿ, ಕಂದಕಕ್ಕೆ ಉರುಳಿ ಬಿದ್ದಿದೆ ಎಂದು ಹೇಳಲಾಗಿದೆ.
ಜಿತೇಂದ್ರ ಹಾಗೂ ಇವರ ಮಗ ಸಿದ್ಧಾರ್ಥ್, ರಾಮು, ಆಕಾಶ್, ಜೋಹ್ರಿ ಎಂದು ಮೃತರನ್ನು ಗುರುತಿಸಲಾಗಿದೆ. ಇನ್ನು ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಎಲ್ಲರನ್ನೂ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹೆಚ್ಚಿನ ಚಿಕಿತ್ಸೆ ಹಿನ್ನೆಲೆಯಲ್ಲಿ ಬೇರೆ ಆಸ್ಪತ್ರೆಗೆ ಗಾಯಾಳುಗಳನ್ನು ಕರೆದುಕೊಂಡು ಹೋಗಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us