ಬಟ್ಟೆ ತಗೊಂಡು ಬರುವಷ್ಟರಲ್ಲಿ ಬೆಂಕಿಯಿಂದ ಧಗ ಧಗ ಹೊತ್ತಿ ಉರಿದ ಕಾರು.. ಹಚ್ಚಿದವರು ಯಾರು?

author-image
Bheemappa
Updated On
ಬಟ್ಟೆ ತಗೊಂಡು ಬರುವಷ್ಟರಲ್ಲಿ ಬೆಂಕಿಯಿಂದ ಧಗ ಧಗ ಹೊತ್ತಿ ಉರಿದ ಕಾರು.. ಹಚ್ಚಿದವರು ಯಾರು?
Advertisment
  • ಬೆಂಕಿಯಲ್ಲಿ ಸುಟ್ಟು ಹೋದ ಲಕ್ಷಾಂತರ ರೂಪಾಯಿ ಮೌಲ್ಯದ ಕಾರು
  • ನಗರದ ಹದಡಿ ರಸ್ತೆಯ ವಿಶಾಲ್ ಮಾರ್ಟ್ ಬಳಿ ನಡೆದ ಅವಘಡ
  • ಬಟ್ಟೆ ಖರೀದಿ ಮಾಡಿಕೊಂಡು ವಾಪಸ್ ಬರುವಷ್ಟರಲ್ಲಿ ಕಾರಿಗೆ ಬೆಂಕಿ

ದಾವಣಗೆರೆ: ಬಟ್ಟೆ ಖರೀದಿಸಿ ವಾಪಸ್ ಆಗುವಷ್ಟರಲ್ಲಿ ಮಾರುತಿ ಬೊಲೆರೊ ಕಾರೊಂದಕ್ಕೆ ಬೆಂಕಿ ಹೊತ್ತಿಕೊಂಡು ಧಗ ಧಗ ಉರಿದಿರುವ ಘಟನೆ ನಗರದ ಹದಡಿ ರಸ್ತೆಯ ವಿಶಾಲ್ ಮಾರ್ಟ್ ಬಳಿ ನಡೆದಿದೆ. ಸದ್ಯ ಕಾರಿನಲ್ಲಿ ಯಾರು ಇಲ್ಲದ ವೇಳೆ ಬೆಂಕಿ ಹೊತ್ತಿಕೊಂಡಿದ್ದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಶಿವಮೊಗ್ಗದ ಶಿಕಾರಿಪುರ ಮೂಲದ ನಾಗನಾಯಕ್ ಎನ್ನುವ ತಮ್ಮ ಕಾರಿನಲ್ಲಿ ದಾವಣಗೆರೆಗೆ ಬಂದಿದ್ದಾರೆ. ಬಳಿಕ ನಗರದ ಹದಡಿ ರಸ್ತೆಯಲ್ಲಿರುವ ವಿಶಾಲ್ ಮಾರ್ಟ್​​ನಲ್ಲಿ ಬಟ್ಟೆಗಳನ್ನು ಖರೀದಿ ಮಾಡಿದ್ದು ವಾಪಸ್​ ಆಗುವಷ್ಟರಲ್ಲಿ ಇದ್ದಕ್ಕೆ ಇದ್ದಂತೆ ಕಾರು ಬೆಂಕಿಯಿಂದ ಧಗ ಧಗಿಸಿ ಉರಿದಿದೆ.

ಪರಿಣಾಮ ಕಾರೆಲ್ಲ ಸಂಫೂರ್ಣವಾಗಿ ಸುಟ್ಟು ಕರಕಲಾಗಿದ್ದು ಇದರಿಂದ ಕಾರು ಮಾಲೀಕ ತೀವ್ರ ಬೇಸರ ವ್ಯಕ್ತೊಡಿಸಿದ್ದಾರೆ. ಇನ್ನು ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಬೆಂಕಿ ಹೊತ್ತಿಕೊಳ್ಳಲು ನಿಖರವಾದ ಕಾರಣ ತಿಳಿದು ಬಂದಿಲ್ಲ. ದಕ್ಷಿಣ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment