newsfirstkannada.com

ಭೀಕರ ಅಪಘಾತ.. ಡಿವೈಡರ್​ ಜಂಪ್ ಮಾಡಿ KSRTC ಬಸ್‌​ಗೆ ಡಿಕ್ಕಿ; ಕಾರು ಸಂಪೂರ್ಣ ಜಖಂ

Share :

Published March 15, 2024 at 1:51pm

Update March 15, 2024 at 1:57pm

    ಕಾರಿನಲ್ಲಿದ್ದ ಎಲ್ಲರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ

    ಘಟನೆ ನಡೆದ ಸ್ಥಳಕ್ಕೆ ಟ್ರಾಫಿಕ್ ಪೊಲೀಸ್ರು ಭೇಟಿ ನೀಡಿ, ಪರಿಶೀಲನೆ

    ಕಾರು ಬೆಂಗಳೂರು ಕಡೆಗೆ ಹೋಗುತ್ತಿರುವಾಗ ಕೆಎಸ್ಆರ್​​ಟಿಸಿಗೆ ಡಿಕ್ಕಿ

ರಾಮನಗರ: ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಡಿವೈಡರ್​ನ ಜಂಪ್ ಮಾಡಿ ಕೆಎಸ್ಆರ್​​ಟಿಸಿ ಬಸ್​ಗೆ ಡಿಕ್ಕಿಯಾಗಿದ್ದು ಕೊಂಚದರಲ್ಲಿ ಭಾರೀ ಅನಾಹುತವೊಂದು ತಪ್ಪಿದೆ. ಈ ಘಟನೆಯು ತಾಲೂಕಿನ ಬಿಡದಿ ಹೋಬಳಿಯ ಮಾದಾಪುರ ಗೇಟ್ ಬಳಿ ನಡೆದಿದೆ.

ಕಾರು ಬೆಂಗಳೂರು ಕಡೆಗೆ ತೆರಳುತ್ತಿರುವಾಗ ಹೋಬಳಿಯ ಮಾದಾಪುರ ಗೇಟ್ ಬಳಿ ಬರುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿದೆ. ಅದೇ ರಭಸಲ್ಲಿ ಕಾರು ಡಿವೈಡರ್​ ದಾಟಿ ವಿರುದ್ಧ ದಿಕ್ಕಿನಲ್ಲಿ ಬರುತ್ತಿದ್ದ ಕೆಎಸ್ಆರ್​​ಟಿಸಿಯ ಅಶ್ಚಮೇಧ ಬಸ್​ಗೆ ಡಿಕ್ಕಿ ಹೊಡೆದಿದೆ. ಇದರಿಂದ ಕಾರಿನ ಮುಂದಿನ ಭಾಗವೆಲ್ಲ ಫುಲ್ ಜಖಂ ಆಗಿದೆ.

ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಅದೃಷ್ಟವಶಾತ್ ಎಲ್ಲರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಾಳುಗಳನ್ನ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇನ್ನು ಘಟನಾ ಸ್ಥಳಕ್ಕೆ ರಾಮನಗರ ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಭೀಕರ ಅಪಘಾತ.. ಡಿವೈಡರ್​ ಜಂಪ್ ಮಾಡಿ KSRTC ಬಸ್‌​ಗೆ ಡಿಕ್ಕಿ; ಕಾರು ಸಂಪೂರ್ಣ ಜಖಂ

https://newsfirstlive.com/wp-content/uploads/2024/03/RMG_CAR_ACCIDENT.jpg

Load More