/newsfirstlive-kannada/media/post_attachments/wp-content/uploads/2025/02/IRELAND-INDIAN-STUDENTS.jpg)
ಐರ್ಲೆಂಡ್ನಲ್ಲಿ ಕಾರ್ ಅಪಘಾತ ಸಂಭವಿಸಿ ಇಬ್ಬರು ಭಾರತೀಯ ವಿದ್ಯಾರ್ಥಿಗಳು ಜೀವ ಕಳೆದುಕೊಂಡ ಘಟನೆ ನಡೆದಿದೆ. ಭಾರತೀಯ ಮೂಲದ ಭಾರ್ಗವ್ ಚಿತ್ತೂರಿ ಹಾಗೂ ಸುರೇಶ ಚೆರುಕುರಿ ಎಂಬ ವಿದ್ಯಾರ್ಥಿಗಳ ಭೀಕರ ಕಾರು ಅಪಘಾತದಲ್ಲಿ ಉಸಿರು ಚೆಲ್ಲಿದ್ದಾರೆ.
ಈ ಒಂದು ಕಾರು ಅಪಘಾತ ಜನವರಿ 31 ರಂದು ನಡೆದಿದೆ ರಾಥಿಯೋದ ಲೀಗ್ಹ್ ಎಂಬಲ್ಲಿ ರೋಡಿನ ಪಕ್ಕದಲ್ಲಿದ್ದ ಮರಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ವಿದ್ಯಾರ್ಥಿಗಳು ಜೀವ ಕಳೆದುಕೊಂಡಿದ್ದಾರೆ. ಸ್ಥಳೀಯ ಮಾಧ್ಯಮಗಳು ವರದಿ ಮಾಡಿರುವ ಪ್ರಕಾರ ಕಾರಿನಲ್ಲಿ ಈ ಇಬ್ಬರನ್ನು ಹೊರತು ಪಡಿಸಿ ಇನ್ನಿಬ್ಬರು ಇದ್ದರಂತೆ ಒಬ್ಬ ಹುಡುಗ ಮತ್ತು ಒಬ್ಬಳು 20 ವರ್ಷದ ಹುಡುಗಿ. ಅವರಿಬ್ಬರೂ ಕೂಡ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ. ಅವರನ್ನು ಲುಕೇ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆಯನ್ನು ನೀಡಲಾಗುತ್ತಿದೆ.
ಇದನ್ನೂ ಓದಿ:ಟೇಕ್ಆಫ್ ಆಗುತ್ತಿದ್ದಂತೆ ಹೊತ್ತಿ ಉರಿದ ವಿಮಾನ; ಆಮೇಲಾಗಿದ್ದೇನು?VIDEO
ಇನ್ನು ಡಬ್ಲಿನ್ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯಿಂದ ವಿದ್ಯಾರ್ಥಿಗಳಿಗೆ ಶೃದ್ಧಾಂಜಲಿಯನ್ನು ಅರ್ಪಿಸಲಾಗಿದೆ. ಐರ್ಲೆಂಡ್ನಲ್ಲಿರುವ ಭಾರತದ ಮೂಲದವರಿಂದ ಕಳೆಬರಹವನ್ನು ಸಾಗಿಸುವುದಕ್ಕಾಗಿ ನಿಧಿ ಸಂಗ್ರಹಿಸಲಾಗಿದೆ. ಒಟ್ಟು 25 ಸಾವಿರ ಯುರೋ ಸಂಗ್ರಹಿಸಿ ಮೃತರ ಕುಟುಂಬಕ್ಕೆ ನೆರವು ನೀಡಿದ್ದಾರೆ. ಆಡಿ ಎ6 ಕಾರು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭಿವಿಸಿದೆ. ಅಪಘಾತದಲ್ಲಿ ಭಾರತದ ವಿದ್ಯಾರ್ಥಿಗಳು ದುರಂತ ಅಂತ್ಯ ಕಂಡಿದ್ಕ್ಕೆ ಐರ್ಲೆಂಡ್ ಪ್ರಧಾನಿ ಆಘಾತ ವ್ಯಕ್ತಪಡಿಸಿದ್ದು. ಸಂತಾಪ ಸೂಚಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ