newsfirstkannada.com

ಒನ್​ ವೇನಲ್ಲಿ ಬಂದಿದ್ದಲ್ಲದೆ ಗೂಂಡಾವರ್ತನೆ; ಬೈಕ್​ ಸವಾರನ ಮೇಲೆ ಕಾರ್​ ಚಾಲಕ ಹಲ್ಲೆ; ಆಮೇಲೇನಾಯ್ತು?

Share :

Published March 17, 2024 at 6:50am

Update March 17, 2024 at 6:35am

    ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೊಲೀಸರಿಗೆ ದೂರು

    ವೈಟ್ ಫೀಲ್ಡ್ ಬಳಿಯ ಗ್ರಾಫೈಟ್ ಜಂಕ್ಷನ್​ನಲ್ಲಿ ನಡೆದ ಗೂಂಡಾಗಿರಿ

    ಅಪಘಾತದ ಬಳಿಕ ಅವಾಚ್ಯ ಶಬ್ದಗಳಿಂದ ನಿಂದಿಸಿದ ಕಾರು ಚಾಲಕ

ಬೆಂಗಳೂರು: ನಗರದಲ್ಲಿ ಒಂದಲ್ಲ ಎರಡಲ್ಲ ದಿನದಿಂದ ದಿನಕ್ಕೆ ಹತ್ತಾರು ಅಪಘಾತಗಳು ವರದಿಯಾಗ್ತಾನೇ ಇದೆ. ಸಂಚಾರಿ ನಿಯಮಗಳನ್ನ ಸರಿಯಾಗಿ ಪಾಲನೆ ಮಾಡಿ ಅಂತ ಪೊಲೀಸರು ನಿತ್ಯ ವಿವಿಧ ರೀತಿಯಲ್ಲಿ ಅರಿವು ಮೂಡಿಸೋ ಕೆಲಸಗಳನ್ನ ಮಾಡ್ತಾನೇ ಇದ್ದಾರೆ. ಆದ್ರೆ ಇದನ್ನ ಕೆಲ ವಿದ್ಯಾವಂತ ಮೂರ್ಖರು​ ಮಾತ್ರ ಅರ್ಥ ಮಾಡ್ಕೊಳ್ಳೋ ಗೋಜಿಗೇ ಹೋಗದೇ ವಾದಕ್ಕೆ ಇಳಿದು ಸುದ್ದಿಯಾಗ್ತಿದ್ದಾರೆ.

ವೈಟ್ ಫೀಲ್ಡ್ ಬಳಿಯ ಗ್ರಾಫೈಟ್ ಜಂಕ್ಷನ್​ನಲ್ಲಿ ಈ ಘಟನೆ ನಡೆದಿದ್ದು, ಒನ್ ವೇನಲ್ಲಿ ಯಾಕೆ ಬರ್ತಿದ್ದೀರಾ ಅಂತ ಆತನನ್ನ ಬೇರೆ ವಾಹನ ಸವಾರರು ಪ್ರಶ್ನೆ ಮಾಡಿದ್ರು. ಈ ವೇಳೆ ಆತ ವಿಡಿಯೋ ಮಾಡ್ತಿದ್ದ ಬೈಕ್ ಸವಾರನ ಕಪಾಳಕ್ಕೆ ಹೊಡೆದಿದ್ದಾನೆ. ಬಳಿಕ ಅವಾಚ್ಯ ಶಬ್ದಗಳಿಂದ ನಿಂದಿಸಿದಿದ್ದಾನೆ. ಈ ವಿಡಿಯೋ ಮಾಡಿಕೊಂಡಿದ್ದ ಬೈಕ್​ ಸವಾರ ಸಾಮಾಜಿಕ ಜಾಲತಾಣ ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಮಾಡಿ ಪೊಲೀಸರಿಗೆ ದೂರು ನೀಡಿದ್ದಾನೆ.

ಹಲ್ಲೆ ಮಾಡುವ ವಿಡಿಯೋ ಸಮೇತ ಪೊಲೀಸರಿಗೆ ದೂರು ನೀಡ್ತಿದ್ದಂತೆ ಅಲರ್ಟ್​ ಆದ ಮಹದೇವಪುರ ಪೊಲೀಸರು ಕಾರು ಸಮೇತ ಆ ಕಾರು ಚಾಲಕನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಜೊತೆಗೆ ದೂರನ್ನೂ ದಾಖಲಿಸಿದ್ದಾರೆ. ತಪ್ಪು ಮಾಡಿದ್ಮೇಲೆ ತಪ್ಪಾಯ್ತು ಅನ್ನೋದನ್ನ ಒಪ್ಪಿಕೊಳ್ಳಬೇಕು. ಆದ್ರೆ ತಪ್ಪು ಅಂತ ಗೊತ್ತಿದ್ದೂ ತಪ್ಪನ್ನ ತಪ್ಪಲ್ಲ ಅಂತ ಮತ್ತೊಂದು ತಪ್ಪು ಮಾಡಿದ್ರೆ ಅಂಥವರಿಗೆ ಶಿಕ್ಷೆ ಕಟ್ಟಿಟ್ಟ ಬುತ್ತಿ ಅಲ್ವಾ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಒನ್​ ವೇನಲ್ಲಿ ಬಂದಿದ್ದಲ್ಲದೆ ಗೂಂಡಾವರ್ತನೆ; ಬೈಕ್​ ಸವಾರನ ಮೇಲೆ ಕಾರ್​ ಚಾಲಕ ಹಲ್ಲೆ; ಆಮೇಲೇನಾಯ್ತು?

https://newsfirstlive.com/wp-content/uploads/2024/03/bng-car.jpg

Load More