/newsfirstlive-kannada/media/post_attachments/wp-content/uploads/2024/10/Traffic-Police.jpg)
ಶಿವಮೊಗ್ಗ: ಇತ್ತೀಚಿನ ದಿನಗಳಲ್ಲಿ ರೋಡ್​ ರೇಜ್​ ಪ್ರಕರಣಗಳು ಹೆಚ್ಚಾಗುತ್ತಿವೆ. ಬೆಂಗಳೂರಿನಲ್ಲೇ ಸಾಕಷ್ಟು ಪ್ರಕರಣಗಳು ಮುನ್ನೆಲೆಗೆ ಬಂದಿವೆ. ಇದೀಗ ಶಿವಮೊಗ್ಗದಲ್ಲೂ ಇಂತಹ ಘಟನೆಯೊಂದು ಬೆಳಕಿಗೆ ಬಂದಿದ್ದು, ಚಾಲಕನೋರ್ವ ಟ್ರಾಫಿಕ್ ಸಿಬ್ಬಂದಿಯನ್ನ ಕಾರಿನಲ್ಲಿ ಎಳೆದೊಯ್ದಿದ್ದಾನೆ.
ಶಿವಮೊಗ್ಗದ ಸಹ್ಯಾದ್ರಿ ಕಾಲೇಜು ಬಳಿ ಈ ಘಟನೆ ನಡೆದಿದೆ. ನಿನ್ನೆ ಮಧ್ಯಾಹ್ನ 2 ಗಂಟೆ ಸುಮಾರಿಗೆ ಈ ದೃಶ್ಯ ಸ್ಥಳೀಯರ ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದೆ. ಕರ್ತವ್ಯದಲ್ಲಿದ್ದ ಟ್ರಾಫಿಕ್​ ಸಿಬ್ಬಂದಿಯನ್ನೇ ಚಾಲಕ ಕಾರಿನ ಬೊನೆಟ್​ ಮೇಲೆ ಹತ್ತಿಸಿ ಎಳೆದೊಯ್ದಿದ್ದಾನೆ.
ಅಷ್ಟಕ್ಕೂ ಆಗಿದ್ದೇನು?
ಟ್ರಾಫಿಕ್ ಸಿಬ್ಬಂದಿ ಸಹ್ಯಾದ್ರಿ ಕಾಲೇಜಿನ ಬಳಿ ವಾಹನಗಳ ದಾಖಲೆ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಭದ್ರಾವತಿ ಕಡೆಯಿಂದ ಬಂದ ಕಾರೊಂದನ್ನ ಟ್ರಾಫಿಕ್ ಸಿಬ್ಬಂದಿಯೊಬ್ಬರು ತಡೆದಿದ್ದಾರೆ. ಈ ವೇಳೆ ಕಾರು ನಿಲ್ಲಿಸಿದ ಚಾಲಕ ಪೇದೆ ಮೇಲೆಯೇ ಕಾರು ಹತ್ತಿಸುವ ರೀತಿ ವರ್ತಿಸಿದ್ದಾನೆ.
ಶಿವಮೊಗ್ಗದ ಸಹ್ಯಾದ್ರಿ ಕಾಲೇಜು ಬಳಿ ಈ ಘಟನೆ ನಡೆದಿದೆ. ನಿನ್ನೆ ಮಧ್ಯಾಹ್ನ 2 ಗಂಟೆ ಸುಮಾರಿಗೆ ಈ ದೃಶ್ಯ ಸ್ಥಳೀಯರ ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದೆ. ಕರ್ತವ್ಯದಲ್ಲಿದ್ದ ಟ್ರಾಫಿಕ್ ಸಿಬ್ಬಂದಿಯನ್ನೇ ಚಾಲಕ ಕಾರಿನ ಬೊನೆಟ್ ಮೇಲೆ ಎಳೆದೊಯ್ದಿದ್ದಾನೆ.#Shivamogga#trafficpolice#RoadRagepic.twitter.com/yc7pIiEiFQ
— Harshith Achrappady (@HAchrappady)
ಶಿವಮೊಗ್ಗದ ಸಹ್ಯಾದ್ರಿ ಕಾಲೇಜು ಬಳಿ ಈ ಘಟನೆ ನಡೆದಿದೆ. ನಿನ್ನೆ ಮಧ್ಯಾಹ್ನ 2 ಗಂಟೆ ಸುಮಾರಿಗೆ ಈ ದೃಶ್ಯ ಸ್ಥಳೀಯರ ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದೆ. ಕರ್ತವ್ಯದಲ್ಲಿದ್ದ ಟ್ರಾಫಿಕ್ ಸಿಬ್ಬಂದಿಯನ್ನೇ ಚಾಲಕ ಕಾರಿನ ಬೊನೆಟ್ ಮೇಲೆ ಎಳೆದೊಯ್ದಿದ್ದಾನೆ.#Shivamogga#trafficpolice#RoadRagepic.twitter.com/yc7pIiEiFQ
— Harshith Achrappady (@HAchrappady) October 25, 2024
">October 25, 2024
ಇದನ್ನೂ ಓದಿ: ಇಂದು ಹಿತಶತ್ರುಗಳ ಕಾಟ ಹೆಚ್ಚಾಗಬಹುದು, ತುಂಬಾ ಶ್ರಮ ಪಡಬೇಕಾದ ದಿನ; ಇಲ್ಲಿದೆ ಇಂದಿನ ಭವಿಷ್ಯ!
ಪೇದೆ ಪದೇ ಪದೇ ಹಿಂದೆ ಸರಿದು, ಕಾರನ್ನ ನಿಲ್ಲಿಸುವಂತೆ ಸೂಚಿಸಿದರು ಸಹ ಕಾರಿನ ಚಾಲಕ ತನ್ನ ಅಹಂಕಾರ ಪ್ರದರ್ಶಿಸಿದ್ದಾನೆ. ಕಾರು ಚಾಲಕನ ವರ್ತನೆ ನೋಡಿ ಅಲ್ಲಿದ್ದ ವ್ಯಕ್ತಿಯೊಬ್ಬರು ಸ್ಮಾರ್ಟ್​ಫೋನಿನಲ್ಲಿ ದೃಶ್ಯವನ್ನು ಸೆರೆಹಿಡಿಯಲು ಆರಂಭಿಸಿದ್ದಾರೆ. ಅದೇ ವೇಳೆ ಅತ್ತ ಟ್ರಾಫಿಕ್ ಸಿಬ್ಬಂದಿಯನ್ನ ಚಾಲಕ ಕಾರು ಚಲಾಯಿಸುತ್ತಾ ತಳ್ಳಿಕೊಂಡು ಬಂದಿದ್ದಾನೆ. ಆನಂತರ ಇದ್ದಕ್ಕಿದ್ದಂತೆ ಕಾರಿನ ಸ್ಪೀಡ್ ಜಾಸ್ತಿ ಮಾಡಿದ್ದಾನೆ.
100 ಮೀಟರ್​ ಎಳೆದೊಯ್ದ ಚಾಲಕ
ಕಾರಿನ ಸ್ಪೀಡ್​ ಜಾಸ್ತಿ ಮಾಡಿದಂತೆ ಟ್ರಾಫಿಕ್ ಸಿಬ್ಬಂದಿ ಬೊನೆಟ್ ಮೇಲೆ ಬಿದ್ದಿದ್ದಾರೆ. ಅದಕ್ಕೂ ಕೇರ್ ಮಾಡದೆ ಕಾರು ಚಾಲಕ ಸುಮಾರು ನೂರು ಮೀಟರ್‌ಗೂ ಹೆಚ್ಚು ದೂರ ಅವರನ್ನ ಎಳೆದೊಯ್ದಿದ್ದಾನೆ. ಅದೃಷ್ಟಕ್ಕೆ ಟ್ರಾಫಿಕ್ ಸಿಬ್ಬಂದಿಯ ಜೀವಕ್ಕೆ ಅಪಾಯವಾಗಿಲ್ಲ ಎನ್ನಲಾಗಿದೆ.
ಭದ್ರಾವತಿಯ ಕೇಬಲ್ ಆಪರೇಟರ್ ಮಿಥುನ್ ಜಗದಾಳೆ ಕಾರು ಚಲಾಯಿಸುತ್ತಿದ್ದ ವ್ಯಕ್ತಿ ಎಂದು ತಿಳಿದು ಬಂದಿದೆ. ಪೊಲೀಸರು ಈತನ ವಿರುದ್ಧ ಎಫ್ ಐಆರ್ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ