/newsfirstlive-kannada/media/post_attachments/wp-content/uploads/2025/02/MND_VC_NALE.jpg)
ಮಂಡ್ಯ; ವಿಸಿ ನಾಲೆ ಯಾವಾಗಲೂ ಬಲಿಗಾಗಿ ಕಾಯುತ್ತಿರುತ್ತದೆ. ಯಾವುದಾದರೂ ವಾಹನ ನೀರಿಗೆ ಬಿದ್ದರೇ ಜೀವ ಹೋಯಿತು ಅಂತಾನೆ ತಿಳಿಯಬೇಕು. ಸದ್ಯ ಇದೀಗ ಇಂತಹದ್ದೆ ಘಟನೆ ನಡೆದಿದ್ದು ನಾಲ್ವರು ಪ್ರಯಾಣಿಕರಿದ್ದ ಕಾರೊಂದು ವಿಸಿ ನಾಲೆಗೆ ಬಿದ್ದಿದ್ದು ಓರ್ವನ ಪ್ರಾಣ ಹೋಗಿದೆ.
ಜಿಲ್ಲೆಯ ತಿಬ್ಬನಹಳ್ಳಿ ಗ್ರಾಮದ ಬಳಿ ಹರಿದು ಹೋಗುವ ವಿಸಿ ನಾಲೆಗೆ ಕಾರು ಪಲ್ಟಿಯಾಗಿ ಬಿದ್ದಿದೆ. ಇದರ ಪರಿಣಾಮ ಕಾರು ಮಾಲೀಕ ಫಯಾಜ್ ಅಲಿಯಾಸ್ ಬ್ಯಾಟರಿ ಜೀವ ಹೋಗಿದೆ. ಅಸ್ಲಂ ಪಾಷ, ಪೀರ್ ಖಾನ್ ನಾಪತ್ತೆಯಾಗಿದ್ದಾರೆ. ನಯಾಜ್ ಪ್ರಾಣಾಪಾಯದಿಂದ ಪರಾಗಿದ್ದು ಮಂಡ್ಯ ಮಿಮ್ಸ್‌ನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ನಾಪತ್ತೆಯಾದ ಇಬ್ಬರಿಗಾಗಿ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ. ಚಾಲಕನ ನಿಯಂತ್ರಣ ತಪ್ಪಿದ ಹಿನ್ನೆಲೆಯಲ್ಲಿ ಈ ದುರ್ಘಟನೆ ನಡೆದಿದೆ.
ಇದನ್ನೂ ಓದಿ:1124 ಉದ್ಯೋಗ ಆಹ್ವಾನ ಮಾಡಿದ CISF ಇಲಾಖೆ.. SSLC ಪಾಸ್ ಆಗಿದ್ರೆ ಸಾಕು
ಇನ್ನು ಸ್ಥಳಕ್ಕೆ ಬಂದ ಅಗ್ನಿಶಾಮಕ ದಳ ಸಿಬ್ಬಂದಿ ಅಪಾರ ಪ್ರಮಾಣದಲ್ಲಿ ಹರಿಯುತ್ತಿರುವ ನೀರಿನಲ್ಲಿ ಕಾರ್ಯಾಚರಣೆ ಮುಂದುವರೆಸಿದ್ದಾರೆ. ನೀರಿನ ರಭಸಕ್ಕೆ ಕಾರು ಮುಳುಗಡೆಯಾಗಿತ್ತು. ನಾಲೆಯಲ್ಲಿ ಹೆಚ್ಚಿನ ನೀರು ಹರಿಯುತ್ತಿರುವ ಕಾರಣ ಕಾರ್ಯಾಚರಣೆಗೆ ಅಡ್ಡಿ ಆಗುತ್ತಿದೆ. ಸದ್ಯ ಕಾರನ್ನು ಮೇಲಕ್ಕೆ ಎತ್ತಲು ಸ್ಥಳಿಯರು ಹಾಗೂ ಪೊಲೀಸರು ಹರಸಾಹಸ ಪಡುತ್ತಿದ್ದಾರೆ.
ಕಾರಿನಲ್ಲಿದ್ದ ನಾಲ್ವರು ಹಾಲಹಳ್ಳಿ ಸ್ಲಂನವರು ಆಗಿದ್ದಾರೆ. ನಾಲೆಗೆ ತಡೆಗೋಡೆ ಇಲ್ಲದ ಕಾರಣ ಈ ಘಟನೆ ನಡೆದಿದೆ. ಇದರಿಂದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ. ಪದೇ ಪದೇ ವಿಸಿ ನಾಲೆಗೆ ವಾಹನಗಳು ಬೀಳುತ್ತಿದ್ದರೂ ಅಧಿಕಾರಿಗಳು, ಶಾಸಕರು, ಸಂಸದರು ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ಜನರ ಪ್ರಾಣಕ್ಕೆ ಬೆಲೆಯೇ ಇಲ್ಲದಂತೆ ಆಗಿದೆ. ಒಂದು ವೇಳೆ ರಾಜಕಾರಣಿಗಳ ಮಕ್ಕಳು ಓಡಾಡುತ್ತಿದ್ದರೇ ಈಗಾಗಲೇ ತಡೆಗೋಡೆ ನಿರ್ಮಿಸುತ್ತಿದ್ದರು ಎಂದು ಸಾರ್ವಜನಿಕರು ಕಿಡಿ ಕಾರಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ