/newsfirstlive-kannada/media/post_attachments/wp-content/uploads/2024/11/gps-navigation.jpg)
ಇಂದು ನಾವು ಯಾವುದೇ ಅಪರಿಚಿತ ಊರಿಗೆ ಹೋಗಬೇಕಾದರೆ, ಪ್ರವಾಸ ಕೈಗೊಳ್ಳಬೇಕಾದರೆ ಜಿಪಿಎಸ್​ ಮೂಲಕ ಮ್ಯಾಪ್ ಹಾಕಿಕೊಂಡು ಹೊರಟು ಬಿಡುತ್ತೇವೆ. ನಮಗೆ ಸರಿಯಾದ ದಾರಿ ಅದು ದೊರಕಿಸುತ್ತದೆ ಎಂಬ ಗಟ್ಟಿ ನಂಬಿಕೆ ನಮ್ಮಲ್ಲಿ ಇದೆ. ಆದ್ರೆ ಒಮ್ಮೊಮ್ಮೆ ಜಿಪಿಎಸ್​​​ ಅನ್ನು ಅವಲಂಬಿಸುವುದು ಎಷ್ಟು ಅಪಾಯಕಾರಿ ಎಂಬುದಕ್ಕೆ ದೊಡ್ಡ ನಿದರ್ಶನವಾಗಿದೆ ಉತ್ತರ ಪ್ರದೇಶದಲ್ಲಿ ನಡೆದಿರುವ ಭೀಕರ ಘಟನೆ.
ಜಿಪಿಎಸ್​ ಮೂಲಕ ತಾವು ಹೋಗಬೇಕಾದ ಕಡೆ ಕಾರ್ ಚಲಾಯಿಸಿಕೊಂಡು ಹೊರಟಿದ್ದ ಮೂವರು ದುರಂತ ಅಂತ್ಯ ಕಂಡಿದ್ದಾರೆ. ಆಗಷ್ಟೇ ಕಾಮಗಾರಿ ನಡೆದಿದ್ದ ಬ್ರಿಡ್ಜ್​ ಮೇಲೆ ಹೋಗುವ ದಾರಿಯನ್ನು ತೋರಿಸಿದೆ ಜಿಪಿಎಸ್​, ಇದನ್ನೆ ನಂಬಿಕೊಂಡು ವೇಗದಲ್ಲಿ ಕಾರ್​ ಚಾಲನೆ ಮಾಡಿಕೊಂಡ ಹೊರಟು ಮೂವರು 50 ಅಡಿ ಎತ್ತರದಿಂದ ರಾಮಗಂಗಾ ನದಿಗೆ ಬಿದ್ದು ಇಬ್ಬರು ಸಹೋದರರು ಸೇರಿ ಒಟ್ಟು ಮೂವರು ದುರಂತ ಅಂತ್ಯ ಕಂಡಿದ್ದಾರೆ.
ಪೊಲೀಸರು ಹೇಳುವ ಪ್ರಕಾರ ವ್ಯಾಗನ್ ಆರ್ ಕಾರ್​ನಲ್ಲಿ ಯುವಕರು ಜಿಪಿಎಸ್​ ಸಹಾಯದೊಂದಿಗೆ ಹೊರಟಿದ್ದರು. ಇತ್ತೀಚೆಗಷ್ಟೇ ಪ್ರವಾಹ ಬಂದು ಬರೇಲಿಯಿಂದ ದಾತಾಗಂಜ್​ ನಡುವೆ ನಿರ್ಮಾಣವಾಗಿದ್ದ ಬ್ರಿಡ್ಜ್​ ಕೊಚ್ಚಿಕೊಂಡು ಹೋಗಿತ್ತು. ಇದೇ ಮಾರ್ಗವಾಗಿ ಕಾರು ಚಲಾಯಿಸಿಕೊಂಡು ಬಂದ ಯುವಕರು ಬ್ರಿಡ್ಜ್ ಮೇಲಿಂದ ಬಿದ್ದು ಅಸುನೀಗಿದ್ದಾರೆ.
ಇದನ್ನು ನೋಡಿದ ಸ್ಥಳೀಯರು ಪೊಲೀಸರಿಗೆ ಸುದ್ದಿಯನ್ನು ಮುಟ್ಟಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ರಾಮಗಂಗಾ ನದಿಯಲ್ಲಿ ಬಿದ್ದಿದ್ದ ಕಾರನ್ನು ಮೇಲಕೆತ್ತಿಸಿ ನೋಡಿದಾಗ ಅದರಲ್ಲಿದ್ದ ಮೂವರು ಕೂಡ ಅಸುನೀಗಿರುವುದು ಗೊತ್ತಾಗಿದೆ. ಇತ್ತೀಚೆಗೆ ಪ್ರವಾಹದಿಂದ ಕೊಚ್ಚಿ ಹೋಗಿದ್ದ ಬ್ರಿಡ್ಜ್ ಮಾರ್ಗವೂ ಜಿಪಿಎಸ್​ನಲ್ಲಿ ಅಪ್​ಡೇಟ್ ಆಗಿಲ್ಲ. ಜಿಪಿಎಸ್​ ತೋರಿಸಿದ ಮಾರ್ಗವನ್ನೇ ನಂಬಿಕೊಂಡು ಬಂದ ಡ್ರೈವರ್ ಈ ಅನಾಹುತಕ್ಕೆ ಕಾರಣನಾಗಿದ್ದಾನೆ ಎಂದು ಹೇಳಲಾಗಿದೆ. ಇನ್ನು ಮೃತರ ಕುಟುಂಬಗಳು ಜಿಲ್ಲಾಡಳಿತದ ವಿರುದ್ಧ ಗರಂ ಆಗಿದ್ದಾರೆ. ಅವರ ನಿರ್ಲಕ್ಷ್ಯವೇ ಈ ದುರಂತಕ್ಕೆ ಕಾರಣವಾಗಿದ್ದು ಕೂಡಲೇ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಮ್ಯಾಜಿಸ್ಟ್ರೇಟ್​​ಗೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ:ಹೇರ್ ಡ್ರೈಯರ್ ಭಯಾನಕ ಸ್ಫೋಟಕ್ಕೆ ಸಿನಿಮಾವನ್ನು ಮೀರಿಸಿದ ಸಂಚು; ಹುಚ್ಚು ಪ್ರೇಮಿ ಮಾಡಿದ್ದೇನು?
ನಿರ್ಮಾಣ ಹಂತದಲ್ಲಿರುವ ಬ್ರಿಡ್ಜ್​ ಬಳಿ ಯಾವುದೇ ಬ್ಯಾರಿಕೇಡ್​ಗಳನ್ನು ಹಾಕುವ ವ್ಯವಸ್ಥೆ ಮಾಡಿಲ್ಲ. ಕಟ್ಟಡ ನಿರ್ಮಾಣ ಹಂತದಲ್ಲಿರುವ ಹಾಗೂ ಮುಂದೆ ಯಾವುದೇ ದಾರಿಯಿಲ್ಲದ ಬಗ್ಗೆ ಯಾವುದೇ ಸೂಚನಾ ಫಲಕಗಳನ್ನೂ ಕೂಡ ಅಲ್ಲಿ ಅಳವಡಿಸಲು ಆಗಿಲ್ಲ. ಈ ಒಂದು ಅಪಘಾತಕ್ಕೆ ಇದೇ ಪ್ರಮುಖ ಕಾರಣ ಎಂದು ಮೃತರ ಪೋಷಕರು ಆರೋಪಿಸಿದ್ದಾರೆ. ಇನ್ನು ಮೃತಪಟ್ಟವರಲ್ಲಿ ಇಬ್ಬರನ್ನು ವಿವೇಕ್ ಕುಮಾರ್ ಮತ್ತು ಅಮಿತ್ ಎಂದು ಗುರುತಿಸಲಾಗಿದೆ. ಮೂರನೇ ವ್ಯಕ್ತಿಯ ಗುರುತಿಗಾಗಿ ಪ್ರಯತ್ನ ನಡೆದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us