newsfirstkannada.com

ಒಂದಲ್ಲಾ ನಾಲ್ಕೈದು ಪಲ್ಟಿ.. ಕಾರಿನಲ್ಲಿದ್ದ ಓರ್ವ ಸಾವು, ಮೂವರು ಗಂಭೀರ.. ಭಯಾನಕವಾಗಿದೆ ಈ ವಿಡಿಯೋ

Share :

Published January 15, 2024 at 5:07pm

Update January 15, 2024 at 5:12pm

  ಅತಿಯಾದ ವೇಗ ಅನಾಹುತಕ್ಕೆ ಕಾರಣ ಅನ್ನೋದಕ್ಕೆ ಇದುವೇ ಸಾಕ್ಷಿ

  ವೇಗವಾಗಿ ಬಂದು ನಾಲ್ಕೈದು ಪಲ್ಟಿ ಹೊಡೆದ ಕಾರು, ಗಾಳಿಗೆ ಹಾರಿ ಬಿದ್ದ ಸವಾರರು

  ಓವರ್ ಟೇಕ್​ ಮಾಡುವ ಭರದಲ್ಲಿ ನಿಯಂತ್ರಣ ತಪ್ಪಿತೇ.. ಭಯಾನಕವಾಗಿದೆ ಈ ಅಪಘಾತ

ತೆಲಂಗಾಣ: ಇದೆಂಥಾ ಅಪಘಾತ. ನೋಡ ನೋಡುತ್ತಿದ್ದಂತೆಯೇ ವೇಗವಾಗಿ ಬಂದ ಕಾರೊಂದು ಪಲ್ಟಿ ಹೊಡೆದ ಘಟನೆ ಡ್ಯಾಶ್​ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪಲ್ಟಿಯಾದ ರಭಸಕ್ಕೆ ಕಾರಿನಲ್ಲಿದ್ದವರು ಹೊರಕ್ಕೆ ಎಸೆಯುವ ದೃಶ್ಯ ಕೂಡ ಕಣ್ಣುಕಟ್ಟಿಸುವಂತಿದೆ.

ಅಂದಹಾಗೆಯೇ ಈ ಘಟನೆ ನಡೆದಿರೋದು ತೆಲಂಗಾಣದ ಸಿದ್ದಿಪೇಟ್ ಜಿಲ್ಲೆಯ ಉಸಾನಾಬಾದ್ ನಲ್ಲಿ. ಬಸ್ಸನ್ನು ಓವರ್​ಟೇಕ್​ ಮಾಡಿಕೊಂಡು ಬಂದ ಕಾರೊಂದು ನಿಯಂತ್ರಣ ತಪ್ಪಿ ಉರುಳಿಬಿದ್ದಿದೆ. ನಾಲ್ಕೈದು ಪಲ್ಟಿ ಹೊಡೆಯುತ್ತಿದ್ದಂತೆಯೇ ಕಾರಿನಲ್ಲಿದ್ದವರು ಗಾಳಿಯಲ್ಲಿ ಹಾರಿ ಹೊರಕ್ಕೆ ಬಿದ್ದಿದ್ದಾರೆ. ಪರಿಣಾಮ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಮೂವರಿಗೆ ಗಂಭೀರ ಗಾಯವಾಗಿದೆ.

ಮುಂಭಾಗದಲ್ಲಿ ಬೈಕ್​ ಸವಾರನೋರ್ವ ರಸ್ತೆಯಲ್ಲಿ ಬರುತ್ತಿದ್ದ, ಕೊಂಚದರಲ್ಲಿಯೇ ಆತ ಬಚಾವ್​ ಆಗಿದ್ದಾನೆ. ಈ ದೃಶ್ಯ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಕಾರೊಂದರ ಡ್ಯಾಶ್​​ಬೋರ್ಡ್​​ನಲ್ಲಿ ವಿಡಿಯೋ ರೆಕಾರ್ಡ್​ ಆಗಿದೆ. ಇನ್ನು ಅಪಘಾತದ ವೇಳೆ ಹಿಂಭಾಗದಲ್ಲಿದ್ದ ಬಸ್​ ಅನ್ನು ಡ್ರೈವರ್​ ನಿಲ್ಲಿಸಿದ್ದಾನೆ. ಬಳಿಕ ಬಸ್​ನಲ್ಲಿದ್ದವರು ಪಲ್ಟಿ ಹೊಡೆದ ಕಾರಿನ ಬಳಿ ಓಡಿ ಬಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಒಂದಲ್ಲಾ ನಾಲ್ಕೈದು ಪಲ್ಟಿ.. ಕಾರಿನಲ್ಲಿದ್ದ ಓರ್ವ ಸಾವು, ಮೂವರು ಗಂಭೀರ.. ಭಯಾನಕವಾಗಿದೆ ಈ ವಿಡಿಯೋ

https://newsfirstlive.com/wp-content/uploads/2024/01/Telangana.jpg

Load More