/newsfirstlive-kannada/media/post_attachments/wp-content/uploads/2025/01/CAR-NUMBER-PLATE.jpg)
ತಾಜ್ ಹೋಟೆಲ್ ಅಂದ ತಕ್ಷಣವೇ ದೇಶದ ಪ್ರತಿಷ್ಠಿತ ಹೋಟೆಲ್​ನ ಚಿತ್ರಣ ಹಾಗೂ ಗೇಟ್​ವೇ ಆಫ್ ಇಂಡಿಯಾದ ವೈಭವ ಕಣ್ಣಮುಂದೆ ಬರುತ್ತದೆ. ಇದೇ ತಾಜ್ ಅಂದಾಗ 26/11ರ ದಾಳಿಯೂ ಕರಾಳ ದಿನಗಳು ಕೂಡ ನೆನಪಾಗುತ್ತವೆ. ಅಂದಿನಿಂದ ಇಲ್ಲಿ ಒಂದು ಸಣ್ಣ ಹುಲ್ಲುಕಡ್ಡಿ ಅಲುಗಾಡಿದರೂ ಕೂಡ ಅದು ರಾಷ್ಟ್ರೀಯ ಸುದ್ದಿಯಾಗುತ್ತದೆ. ಈ ರೀತಿ ಸೂಕ್ಷ್ಮ ಪ್ರದೇಶದಂತಿರುವ ತಾಜ್​ ಅಂಗಳದಲ್ಲಿ ಒಂದು ಕಾರ್ ಹಲವು ಆತಂಕವನ್ನು ಸೃಷ್ಟಿಸಿತ್ತು. ತನ್ನದೇ ಕಾರ್​ ಮಾಡೆಲ್ ಹಾಗೂ ತನ್ನದೇ ಕಾರ್​ನ ನಂಬರ್ ಹೊಂದಿದ್ದ ಕಾರನ್ನು ಕಂಡ ವ್ಯಕ್ತಿ ಬೆಚ್ಚಿ ಬಿದ್ದು ಪೊಲೀಸರ ಬಳಿ ಹೋಗಿ ದೂರು ನೀಡಿದ್ದಾನೆ.
/newsfirstlive-kannada/media/post_attachments/wp-content/uploads/2025/01/CAR-NUMBER-PLATE-1.jpg)
ಮುಂಬೈ ಮೂಲದ ಡ್ರೈವರ ಸಾಕಿರ್ ಅಲಿ ಎಂಬ ವ್ಯಕ್ತಿ ತಾಜ್​ ಪಕ್ಕದಲ್ಲಿಯೇ ಇರುವ ನಾರಿಮನ್ ಪಾಯಿಂಟ್​ ಬಳಿ ವಾಸವಿರುತ್ತಾರೆ. ಅವರ ಬಳಿ ಒಂದು ಎರ್ಟಿಗಾ ಕಾರ್ ಇದೆ. ಅದರ ಲೈಸನ್ಸ್ ಪ್ಲೇಟ್ ಬಂದು MH01 EE2388. ಈ ಸಾಕಿರ್ ಅಲಿ ಗೇಟ್​ವೇ ಆಫ್ ಇಂಡಿಯಾದ ಬಳಿ ಹೋದ ವೇಳೆ ಒಂದು ಅಚ್ಚರಿಯ ಘಟನೆ ನಡೆದಿದೆ. ತಮ್ಮ ಕಣ್ಣನ್ನು ತಾವೇ ನಂಬದ ರೀತಿಯಲ್ಲಿ ಅವರು ಬೆಚ್ಚಿ ಬಿದ್ದಿದ್ದಾರೆ. ಕಾರಣ ಅದೇ ಎರ್ಟಿಗಾದ ಸೇಮ್ ಮಾಡೆಲ್ ಹಾಗೂ ಸೇಮ್ ನಂಬರ್​ನ ಪ್ಲೇಟ್ ಇರುವ ವಾಹನ ಅಲ್ಲಿ ನಿಂತಿದ್ದನ್ನು ಕಂಡಿದ್ದಾರೆ. ಅದು ಕೂಡ ತಾಜ್ ಹೋಎಲ್ ಪಕ್ಕದಲ್ಲಿಯೇ. ಇದನ್ನು ಕಂಡ ಸಾಕೀರ್ ಅಲಿ ಕೂಡಲೇ ಆರ್​ಟಿಓಗೆ ಸುದ್ದಿ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಬಂದ ಕೊಲಾಬಾ ಪೊಲೀಸರು ಎರಡು ಕಾರನ್ನು ಠಾಣೆಗೆ ತೆಗೆದುಕೊಂಡು ಹೋಗಿದ್ದು ತನಿಖೆ ಶುರು ಮಾಡಿದ್ದಾರೆ.
ತನಿಖೆ ಕೈಗೆತ್ತಿಕೊಂಡ ಪೊಲೀಸರಿಗೆ ತಿಳಿದು ಬಂದ ವಿಷಯ ಅಂದ್ರೆ ಪ್ರಸಾದ್ ಕದಮ್ ಎಂಬ ನವಿ ಮುಂಬೈನ ಸೀವೂಡ್ಸ್​ ನಿವಾಸಿಯವರಿಗೆ ಸೇರಿದ ಕಾರು. ಇತ್ತೀಚೆಗಷ್ಟೇ ಉದ್ದೇಶಪೂರ್ವಕವಾಗಿಯೇ ಅವರು ಕಾರ್ ನಂಬರ್ ಅನ್ನು ಬದಲಾಯಿಸಿದ್ದಾರೆ. ಕಾರಣ ಅವರು ಚೋಳಾ ಮಂಡ್ಲಮ್​ನಲ್ಲಿ ಸಾಲ ಪಡೆದು ಕಾರು ಖರೀದಿಸಿದ್ದರಂತೆ. ಇತ್ತೀಚೆಗೆ ಅವರು ಸಾಲ ವಾಪಸ್ ತೀರಿಸುವಂತೆ ಅವರು ಬೆನ್ನು ಬಿದಿದ್ದಾರೆ. ಇದರಿಂದ ರೋಸಿಹೋದ ಪ್ರಸಾದ್ ಕದಮ್​, ಕಾರಿನ ನಂಬರ್​ನ್ನು ಬದಲಿಸಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯ ಪ್ರಸಾದ್ ಕದಮ್ ಮೇಲೆ ಎಫ್​ಐಆರ್ ದಾಖಲಾಗಿದ್ದು ತನಿಖೆ ಮುಂದುವರಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us