newsfirstkannada.com

VIDEO: ಕಾರ್​​​ ಪಾರ್ಕಿಂಗ್​​​ ವಿಚಾರಕ್ಕೆ ಜಗಳ: ಎರಡು ಕುಟುಂಬಗಳ ಮಧ್ಯೆ ಮಾರಾಮಾರಿ!

Share :

Published March 18, 2024 at 4:29pm

  ಕಾರ್​​ ಪಾರ್ಕಿಂಗ್​​ ವಿಚಾರವಾಗಿ ಎರಡು ಕುಟುಂಬಗಳ ಮಧ್ಯೆ ಮಾರಾಮಾರಿ

  ನಮ್ಮ ಜಾಗದಲ್ಲೇ ಕಾರ್​ ಪಾರ್ಕ್​ ಮಾಡ್ತೀಯ ಎಂದು ದಂಪತಿ ಮೇಲೆ ಹಲ್ಲೆ

  ದಂಪತಿ ಮೇಲೆ ಮನಸೋ-ಇಚ್ಛೆ ಹಲ್ಲೆ ನಡೆಸಿದ ಕಿಡಿಗೇಡಿಗಳ ಮೇಲೆ ಕೇಸ್​​​

ಬೆಂಗಳೂರು: ಕಾರ್​​ ಪಾರ್ಕಿಂಗ್​​ ವಿಚಾರವಾಗಿ ಎರಡು ಕುಟುಂಬಗಳ ಮಧ್ಯೆ ಮಾರಾಮಾರಿ ನಡೆದಿದೆ. ನಮ್ಮ ಜಾಗದಲ್ಲೇ ಕಾರ್​ ಪಾರ್ಕ್​ ಮಾಡ್ತೀಯ ಎಂದು ದಂಪತಿ ಮೇಲೆ ಕಿಡಿಗೇಡಿಗಳು ಮನಸೋ-ಇಚ್ಛೆ ಥಳಿಸಿದ್ದಾರೆ.

ಇನ್ನು, ರೋಹಿಣಿ ಮತ್ತು ವೃಷಭ್​ ಅನ್ನೋರು ಹಲ್ಲೆಗೆ ಒಳಗಾದ ದಂಪತಿ. ಅನಂತಮೂರ್ತಿ ಕುಟುಂಬದವರು ಮನಸೋ-ಇಚ್ಛೆ ಹಲ್ಲೆ ನಡೆಸಿದವರು. ಈ ಘಟನೆ ಹೆಚ್​​​ಎಎಲ್​​ ಪೊಲೀಸ್​ ಠಾಣಾ ವ್ಯಪ್ತಿಯಲ್ಲಿ ನಡೆದಿದೆ.

ಅಸಲಿಗೆ ಆಗಿದ್ದೇನು..?

ರೋಹಿಣಿ, ವೃಷಭ್​​ ಅಪಾರ್ಟ್​​ಮೆಂಟ್​ ಒಂದರಲ್ಲಿ ಬಾಡಿಗೆಗೆ ಇದ್ದರು. ಇವರ ಅಪಾರ್ಟ್​ಮೆಂಟ್​ ಪಕ್ಕ ಇದ್ದ ಖಾಲಿ ಜಾಗದಲ್ಲಿ ತಮ್ಮ ಐ20 ಕಾರ್​ ಪಾರ್ಕ್​ ಮಾಡಿದ್ದಾರೆ. ಇದರಿಂದ ಸಿಟ್ಟಿಗೆದ್ದ ಅನಂತಮೂರ್ತಿ ಕುಟುಂಬ ಜಾಗ ನಮ್ಮದು, ಕಾರ್​ ಹೇಗೆ ಪಾರ್ಕ್​ ಮಾಡಿದ್ರಿ ಎಂದು ಖ್ಯಾತೆ ತೆಗೆದಿದ್ದಾರೆ. ಈ ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆದು ಜಗಳ ಆಗಿದೆ.

ಈ ಸಂಬಂಧ ತಮ್ಮ ಮೇಲೆ ಹಲ್ಲೆ ನಡೆಸಿದ್ದಾಗಿ ದಂಪತಿ ಪೊಲೀಸ್​ ದೂರು ನೀಡಿದ್ದಾರೆ. ಹಾಗಾಗಿ ಪೊಲೀಸ್ರು ಅನಂತಮೂರ್ತಿ, ಪ್ರಶಾಂತ್​ ಮತ್ತಿಡೀ ಕುಟುಂಬದ ವಿರುದ್ಧ ಎಫ್​ಐಆರ್​ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಕಾರ್​​​ ಪಾರ್ಕಿಂಗ್​​​ ವಿಚಾರಕ್ಕೆ ಜಗಳ: ಎರಡು ಕುಟುಂಬಗಳ ಮಧ್ಯೆ ಮಾರಾಮಾರಿ!

https://newsfirstlive.com/wp-content/uploads/2024/03/Shimoga-Fight.jpg

Load More