newsfirstkannada.com

ರಸ್ತೆಯಲ್ಲಿ ಮಲಗಿದ್ದ ಕರುವಿನ ಮೇಲೆ ಕಾರು ಹತ್ತಿಸಿ ವಿಕೃತಿ ಮೆರೆದ ಚಾಲಕ.. ಮೂಕ ಪ್ರಾಣಿ ನರಳಾಟ!

Share :

Published March 18, 2024 at 3:37pm

  ಕಾರು ಚಾಲಕನ ಅಮಾನವೀಯ ನಡೆಗೆ ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ

  ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆಯಲ್ಲಿ ಕೇಸ್​ ದಾಖಲು

  ನೋವಿನಿಂದ ಒದ್ದಾಡುತ್ತಿದ್ದ ಕರುವನ್ನ ರಕ್ಷಣೆ ಮಾಡಿದ ಸಿಬ್ಬಂದಿ

ಬೆಂಗಳೂರು: ಮೂಕ ಪ್ರಾಣಿ ತನ್ನ ಪಾಡಿಗೆ ಆರಾಮಾಗಿತ್ತು. ಆದ್ರೆ ಈ ವೇಳೆ ಚಾಲಕನೊಬ್ಬ ಕಾರಲ್ಲಿ ಯಮನಂತೆ ಬಂದ ಎಂಟ್ರಿ ಕೊಟ್ಟಿದ್ದ. ಈ ವೇಳೆ ರಸ್ತೆ ಮೇಲೆ ಮಲಗಿಕೊಂಡಿದ್ದ ಕರುವಿನ ಮೇಲೆ ಕಾರು ಹತ್ತಿಸಿ ಅಕ್ಷರಶಃ ರಾಕ್ಷಸನಂತೆ ವರ್ತಿಸಿದ್ದಾನೆ. ಈ ಕಿರಾತಕನ ಕ್ರೌರ್ಯದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಈ ದೃಶ್ಯ ಮಾನವೀಯತೆಯೇ ನಾಚುವಂತಿದೆ. ಮನುಷ್ಯತ್ವವೇ ಮತ್ತೊಂದು ಮಗ್ಗಲಿಗೆ ಹೊರಳುವಂತಿದೆ. ಕರುವಿನ ಮೇಲೆ ಕಾರು ಹತ್ತಿಸಿ ಕ್ರೌರ್ಯದ ಕೇಕೆ ಹಾಕಿದ ಕಿರಾತಕನ ಕೃತ್ಯ, ಆ ಮೂಕ‌ ಪ್ರಾಣಿ ಮರಣವೇದನೆಯಲ್ಲಿ ನರಳಾಡಿದ ದೃಶ್ಯ ನಿಜಕ್ಕೂ ಕರುಳು ಚುರುಕ್ ಅನ್ನುವಂತಿದೆ. ಕಳೆದ ಮಾರ್ಚ್ 2ರಂದು ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆಯ ಸರಹದ್ದು. ಠಾಣೆಯ ಕೂಗಳತೆಯ ದೂರದಲ್ಲಿರುವ ಇದೇ ಜಾಗದಲ್ಲಿ ಆಸಾಮಿ, ಕರು ಮೇಲೆ ಕಾರು ಹತ್ತಿಸಿದ್ದ. ಈ ವೇಳೆ ಹೊಟ್ಟೆ-ಕಾಲಿಗೆ ಗಂಭೀರವಾದ ಗಾಯವಾಗಿತ್ತು.

ಇದನ್ನು ಓದಿ: ಬಟ್ಟೆ ತಗೊಂಡು ಬರುವಷ್ಟರಲ್ಲಿ ಬೆಂಕಿಯಿಂದ ಧಗ ಧಗ ಹೊತ್ತಿ ಉರಿದ ಕಾರು.. ಹಚ್ಚಿದವರು ಯಾರು?

ಕೂಡಲೇ ಗ್ರೀನ್ ಆರ್ಮಿ ಫೋರ್ಸ್ ಸಿಬ್ಬಂದಿ ಕರುವನ್ನ ರಕ್ಷಣೆ ಮಾಡುವ ಪ್ರಯತ್ನ ನಡೆದ್ರೂ ಕೂಡ, ಚಿಕಿತ್ಸೆ ಫಲಕಾರಿಯಾಗದೆ ಮೂಕ ಪ್ರಾಣಿ ಸಾವಿನ ಮನೆ ಸೇರಿದೆ. ಒಟ್ಟಿನಲ್ಲಿ ಮೂಕ ಪ್ರಾಣಿಯ ಮೇಲೆ ಅಮಾನವೀಯವಾಗಿ ಎರಗಿದ ಪಾಪಿಯ ನಡೆಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ. ಈ ಬಗ್ಗೆ ಮಹಾಲಕ್ಷ್ಮೀ ಲೇಔಟ್ ಠಾಣೆಯಲ್ಲಿ ದೂರು ದಾಖಲು ಮಾಡಲು ಕೂಡ ಪ್ರಾಣಿಪ್ರಿಯರು ಮುಂದಾಗಿದ್ದು, ತಪ್ಪಿತಸ್ಥನ ವಿರುದ್ಧ ಕ್ರಮ ಆಗಬೇಕಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಸ್ತೆಯಲ್ಲಿ ಮಲಗಿದ್ದ ಕರುವಿನ ಮೇಲೆ ಕಾರು ಹತ್ತಿಸಿ ವಿಕೃತಿ ಮೆರೆದ ಚಾಲಕ.. ಮೂಕ ಪ್ರಾಣಿ ನರಳಾಟ!

https://newsfirstlive.com/wp-content/uploads/2024/03/bng-86.jpg

Load More