ರಸ್ತೆಯಲ್ಲಿ ಆಡುತ್ತಿದ್ದ ಮಗುವಿನ ಮೇಲೆ ಹತ್ತಿದ ಕಾರು​.. ಮುಂದೇನಾಯ್ತು..? ಶಾಕಿಂಗ್ ವಿಡಿಯೋ

author-image
Gopal Kulkarni
Updated On
ರಸ್ತೆಯಲ್ಲಿ ಆಡುತ್ತಿದ್ದ ಮಗುವಿನ ಮೇಲೆ ಹತ್ತಿದ ಕಾರು​.. ಮುಂದೇನಾಯ್ತು..? ಶಾಕಿಂಗ್ ವಿಡಿಯೋ
Advertisment
  • ಆಡುತ್ತಿದ್ದ ಮಗುವಿನ ಮೇಲೆ ಹರಿದು ಹೋದ ಕಾರು
  • ಕ್ಷಣಿಕ ಮೈಮರವಿನಿಂದಾಯ್ತು ದೊಡ್ಡ ಅನಾಹುತ
  • ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾದ ಬೆಚ್ಚಿ ಬೀಳಿಸುವ ದೃಶ್ಯ

ವಾಹನ ಚಲಾಯಿಸುವಾಗ ನಮ್ಮ ಮೈಯೆಲ್ಲಾ ಕಣ್ಣಾಗಿರಬೇಕು. ಕೊಂಚ ಯಾಮಾರಿದರು, ಕೊಂಚ ಮೈಮರೆತರು ಕೂಡ ದೊಡ್ಡ ಅನಾಹುತಗಳೇ ಆಗುತ್ತವೆ ಅದಕ್ಕೆ ದೊಡ್ಡ ಸಾಕ್ಷಿಯಾಗಿ ಸದ್ಯ ಘಾಜಿಯಾಬಾದ್​ನಲ್ಲಿ ನಡೆದ ಘಟನೆಯೇ ಒಂದು ಉದಾಹರಣೆ.

ಮಹಿಳೆಯೊಬ್ಬರು ಕಾರು ಡ್ರೈವ್​ ಮಾಡುತ್ತಾ ಬರುವಾಗ ರಸ್ತೆಯಲ್ಲಿ ಮಕ್ಕಳು ಆಡುತ್ತಿದ್ದರು. ಅದರೊಂದಿಗೆ ಐದೂವರೆ ವರ್ಷದ ಮಗುವೊಂದು ಕೂಡ ಇತ್ತು. ಕಾರು ಡ್ರೈವ್​ ಮಾಡುತ್ತಾ ಬಂದ ಮಹಿಳೆ ಆ ಮಗುವಿನ ಮೇಲೆಯೇ ಕಾರನ್ನು ಚಲಾಯಿಸಿಬಿಟ್ಟಿದ್ದಾಳೆ. ಇದು ಫೆಬ್ರವರಿ 24 ರಂದು ಸಂಜೆ ಸುಮಾರು 4.30ರ ಸಮಯದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಘಾಜಿಯಾಬಾದ್​​ನ ರಾಜ ನಗರ ಎಕ್ಸ್​ಟೆನ್ಷನಲ್ಲಿರುವ ಎಸ್​​ಜಿ ಸೋಸೈಟಿಯ ಬಳಿ ಈ ಘಟನೆ ನಡೆದಿದೆ.

ಇದನ್ನೂ ಓದಿ:ಗದ್ದೆಯಲ್ಲಿ 500 ಮುಖಬೆಲೆಯ ಕಂತೆ, ಕಂತೆ ನೋಟು ಸಿಕ್ಕ ರೈತನಿಗೆ ಬಿಗ್ ಶಾಕ್! ಏನಿದರ ಅಸಲಿಯತ್ತು?

ಮಗುವಿನ ಮೇಲೆ ಕಾರು ಚಲಾಯಿಸಿದ ವಿಡಿಯೋ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದ್ದು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ವಿಡಿಯೋದಲ್ಲಿ ಹೊಂಡಾ ಸಿಟಿ ಕಾರೊಂದು ಸೊಸೈಟಿ ಬಳಿ ಪ್ರವೇಶಿಸುವಾಗ ಮಗುವಿನ ಮೇಲೆಯ ಹರಿದು ಹೋಗಿದೆ. ಕಾರಿನ ಮುಂದಿನ ಚಕ್ರ ಮಗುವಿನ ಮೇಲೆಯೇ ಹರಿದು ಹೋಗಿದೆ. ಅದೃಷ್ಟವಷಾತ್​ ಮಗವಿಗೆ ಗಂಭೀರವಾದಂತ ಗಾಯಗಳೇನು ಆಗಿಲ್ಲ. ಪವಾಡ ಸದೃಶ್ಯದಂತೆ ಮಗು ಬದುಕುಳಿದಿದೆ.


">February 26, 2025

ಇನ್ನು ಕಾರು ಓಡಿಸುತ್ತಿದ್ದ ಚಾಲಕಿಯನ್ನು ಸಂಧ್ಯಾ ಎಂದು ಗುರುತಿಸಲಾಗಿದೆ. ಅಪಘಾತ ಮಾಡಿದ ಬಳಿಕ ಕಾರಿಂದ ಇಳಿದು ಮಗುವನ್ನು ನೋಡಿದ ಆಕೆ ನಂತರ ಏನು ಎತ್ತ ಅಂತ ಕೂಡ ಯೋಚಿಸದೇ ಅಲ್ಲಿಂದ ಪರಾರಿಯಾಗಿದ್ದಾಳೆ. ವರದಿಗಳು ಹೇಳುವ ಪ್ರಕಾರ ಸಂಧ್ಯಾ ತನ್ನ ಪತಿಯ ಕಾರನ್ನು ಓಡಿಸುತ್ತಿದ್ದಳಂತೆ. ಒಂದು ಕ್ಷಣದ ಮೈಮರವಿನಿಂದ ಈ ಒಂದು ಅಪಘಾತ ನಡೆದಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದು:ಗಂಗೆಯ ದಡದಲ್ಲಿ ಯೋಗ ಮಾಡುತ್ತಿದ್ದ ಜನ.. ಸೂಟ್​ಕೇಸ್ ಹಿಡಿದುಕೊಂಡು ಬಂದ ತಾಯಿ, ಮಗಳು! ಅದರಲ್ಲಿ ಇದ್ದಿದ್ದೇನು ಗೊತ್ತಾ?

ಇನ್ನು ಮಗುವಿನ ತಂದೆ ನಂದಗ್ರಾಮ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮಗುವಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಅದೃಷ್ಟವಶಾತ್ ಸಾವಿನಿಂದ ಪಾರಾಗಿದೆ. ಬಲಗೈನಲ್ಲಿ ಹಲವು ಗಾಯಗಳಾಗಿದ್ದು. ಎಡಗಾಲು ಮತ್ತು ಬೆನ್ನಿಗೆ ಏಟು ಬಿದ್ದಿದೆ ಎಂದು ಹೇಳಲಾಗುತ್ತಿದೆ. ಮಗುವನ್ನು ಅಂಟ್ಲಾನಾ ಆಸ್ಪತ್ರೆಗೆ ದಾಖಲಿಸ ಚಿಕಿತ್ಸೆ ನೀಡಲಾಗುತ್ತಿದೆ. ಮಗುವಿನ ಪೋಷಕರ ದೂರಿನನ್ವಯ ಸಂಧ್ಯಾಳ ಮೇಳೆ ಭಾರತೀಯ ನ್ಯಾಯ ಸಂಹಿತೆ 281 ಮತ್ತು 125ಬಿ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment