/newsfirstlive-kannada/media/post_attachments/wp-content/uploads/2024/11/CARROT-HEALTH-BENEFITS-4.jpg)
ಕ್ಯಾರೆಟ್ ಅಥವಾ ಗಜ್ಜರಿ ಕೇವಲ ತಿನ್ನಲು ರುಚಿಕರವಾದ ತರಕಾರಿ ಅಲ್ಲ. ಅದರಿಂದ ಅನೇಕ ಆರೋಗ್ಯಕರ ಲಾಭಗಳು ಇವೆ. ಇದು ಹಲವು ಪೋಷಕಾಂಶಗಳನ್ನು ತನ್ನೊಡಲಲ್ಲಿ ಇಟ್ಟುಕೊಂಡಿದೆ. ನಿಮ್ಮ ಇಡೀ ಆರೋಗ್ಯದ ಮೇಲೆ ಬಹುಮುಖಿ ಉಪಯೋಗವನ್ನು ನೀಡಬಲ್ಲ ಶಕ್ತಿ ಕ್ಯಾರೆಟ್ನಲ್ಲಿದೆ. ದೃಷ್ಟಿ ಸಮಸ್ಯೆಯಿಂದ ದೂರವಾಗಲು, ರೋಗ ನಿರೋಧಕ ಶಕ್ತಿ ಹೆಚ್ಚಿಸುವುದರಿಂದ ಹಿಡಿದು, ಪ್ರಮುಖ ಎಂಟು ಆರೋಗ್ಯದ ಲಾಭಗಳು ನಮಗಿವೆ.
1 ದೃಷ್ಟಿದೋಷವನ್ನು ನಿವಾರಿಸುತ್ತದೆ
ನಾವು ಬೆಳೆಯುವ ಹಾಗೂ ಸೇವಿಸುವ ಪ್ರತಿಯೊಂದು ತರಕಾರಿಯಲ್ಲಿ ಒಂದಿಲ್ಲ ಒಂದು ವೈಶಿಷ್ಟ್ಯವನ್ನು ನಾವು ಕಾಣುತ್ತೇವೆ. ಏನೇ ಸಮಸ್ಯೆಯೆಂದು ವೈದ್ಯರ ಬಳಿ ಹೋದರು ಕೂಡ ಹೆಚ್ಚು ಹೆಚ್ಚು ತರಕಾರಿಗಳನ್ನು ತಿನ್ನಲು ಹೇಳುತ್ತಾರೆ. ಅದರಲ್ಲೂ ದೃಷ್ಟಿ ಸಮಸ್ಯೆ ಇರುವುವರು ಈ ಕ್ಯಾರೆಟ್ ತಿಂದರೆ ಹೆಚ್ಚು ಲಾಭಗಳಿವೆ. ದೃಷ್ಟಿಯ ದೋಷಗಳನ್ನು ನೀವಾರಿಸಿ ನಮ್ಮ ನೋಡುವ ಶಕ್ತಿಯನ್ನು ಹೆಚ್ಚಿಸುತ್ತದೆ ಈ ಕ್ಯಾರೆಟ್ಆರೋಗ್ಯಯುಕ್ತ ದೃಷ್ಟಿಯನ್ನು ನೀಡುತ್ತದೆ. ನಿತ್ಯ ಸೇವನೆಯಿಂದ ವಯೋಸಹಜವಾಗಿ ಉಂಟಾಗುವ ಕುರುಡುತನವನ್ನು ಕೂಡ ಇದು ನಿವಾರಿಸುತ್ತದೆ ಎಂದು ತಜ್ಞರು ಹೇಳುತ್ತಾರೆ.
ಇದನ್ನೂ ಓದಿ:ಕಣ್ಣು, ಹೃದಯ, ಚರ್ಮದ ಆರೋಗ್ಯ; ದಿನಕ್ಕೊಂದು ಬಟರ್ ಫ್ರೂಟ್ ಸೇವಿಸುವುದರಿಂದ ಆಗಲಿರುವ ಲಾಭಗಳೇನು ಗೊತ್ತಾ?
2. ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ
ನಿತ್ಯ ಕನಿಷ್ಠ ಒಂದು ಕ್ಯಾರೆಟ್ ತಿನ್ನುವುದರಿಂದ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯು ವೃದ್ಧಿಯಾಗುತ್ತದೆ. ಈ ಒಂದು ತರಕಾರಿಯಲ್ಲಿ ವಿಟಮಿನ್ ಸಿ ಹಾಗೂ ಹೇರಳವಾಗಿ ಆ್ಯಂಟಿಆಕ್ಸಿಡೆಂಟ್ಸ್ಗಳು ಇರುವುದರಿಂದ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚುಸುವಲ್ಲಿ ಸಹಕಾರಿಯಾಗುತ್ತದೆ. ಇದರಿಂದ ದೇಹ ಸೋಂಕುಗಳನ್ನು ಪ್ರತಿರೋಧಿಸಬಲ್ಲ ಶಕ್ತಿಯನ್ನು ಪಡೆಯುತ್ತದೆ ಅಷ್ಟು ಮಾತ್ರವಲ್ಲದೇ ದೇಹದಲ್ಲಿ ಆಕಸ್ಮಿಕವಾಗಿ ಆಗುವ ಗಾಯಗಳನ್ನು ಕೂಡ ಬೇಗ ವಾಸಿಗೊಳಿಸಬಲ್ಲ ಶಕ್ತಿಯೂ ಕೂಡ ದೇಹಕ್ಕೆ ಬರುತ್ತದೆ.
3. ತ್ವಚೆಯ ಆರೋಗ್ಯಕ್ಕೂ ಕೂಡ ಇದು ಸಹಾಯಕ
ಆ್ಯಂಟಿ ಆಕ್ಸಿಡೆಂಟ್ಸ್ಗಳ ಜೊತೆ ಜೊತೆಗೆ ಇದರಲ್ಲಿ ಬೆಟಾ ಕ್ಯಾರೊಟೆನ್ ಅಂಶವೂ ಕೂಡ ಇರುವುದರಿಂದ ಇದು ತ್ವಚೆಯ ಆರೋಗ್ಯವನ್ನು ಕಾಪಾಡುತ್ತದೆ. ನಿತ್ಯ ಕ್ಯಾರೆಟ್ ಸೇವನೆಯಿಂದ ತ್ವಚೆ ನೈಸರ್ಗಿಕವಾಗಿ ಕಾಂತಿಯುಕ್ತಗೊಳ್ಳುತ್ತದೆ. ಅದು ಮಾತ್ರವಲ್ಲ ಮೊಡವೆ ಕಲೆಗನ್ನು ಕೂಡ ತೊಡೆದು ಹಾಕುವ ಶಕ್ತಿ ಈ ಕ್ಯಾರೆಟ್ನಲ್ಲಿದೆ.
4. ಜೀರ್ಣಕ್ರಿಯೆಗೆ ಸರಳಗೊಳಿಸುತ್ತದೆ.
ಕ್ಯಾರೆಟ್ನಲ್ಲಿ ಹೈ ಡೈಯಟರಿ ಫೈಬರ್ ಅಂಶವಿದೆ. ಇದು ಪಚನಕ್ರಿಯೆಯ ವ್ಯವಸ್ಥೆಗೆ ಸಹಾಯಕವಾಗಿ ನಿಲ್ಲುತ್ತದೆ.ಇದು ಕರುಳಿನ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಮೂಲಕ ಮಲಬದ್ಧತೆಯಂತಹ ಸಮಸ್ಯೆಗಳನ್ನು ನಿವಾರಿಸುತ್ತದೆ. ಜೊತೆಗೆ ಪಚನಕ್ರಿಯೆಯನ್ನು ಸರಳವಾಗಿ ಆಗುವಂತೆ ನೋಡಿಕೊಳ್ಳುತ್ತದೆ.
5. ಹೃದಯ ಆರೋಗ್ಯಕ್ಕೆ ಅತ್ಯುತ್ತಮ ಕ್ಯಾರೆಟ್
ಕ್ಯಾರೆಟ್, ಅತಿ ಕಡಿಮೆ ಕೊಲೆಸ್ಟ್ರಾಲ್ ಹೊಂದಿರುವಂತಹ ಹಾಗೂ ಅತಿಹೆಚ್ಚು ಪೋಟ್ಯಾಶಿಯಂ ಖನಿಜಾಂಶವನ್ನು ಹೊಂದಿರುವುದರಿಂದ ಇದು ರಕ್ತದೊತ್ತಡವನ್ನು ನಿಯಂತ್ರಣ ಮಾಡುವಲ್ಲಿ ಸಹಕಾರಿಯಾಗುತ್ತದೆ. ಕ್ಯಾರೆಟ್ನಲ್ಲಿರುವ ಆ್ಯಂಟಿಆಕ್ಸಿಡೆಂಟ್ಸ್ ಅಂಶಗಳು ಹೃಯದ ಆರೋಗ್ಯವನ್ನು ಸುಧಾರಿಸುವಲ್ಲಿ ತುಂಬಾ ಸಹಕಾರಿಯಾಗುತ್ತವೆ. ಅಪಧಮನಿಗಳನ್ನು ಅನಾರೋಗ್ಯದಿಂದ ಸುರಕ್ಷಿತವಾಗಿಡುವುದರೊಂದಿಗೆ ರಕ್ತಪರಿಚಲನೆ ಸರಿಯಾಗಿ ಆಗುವಂತೆ ನೋಡಿಕೊಳ್ಳುತ್ತದೆ.
6. ತೂಕ ನಿರ್ವಹಣೆಗೆ ಅತ್ಯುತ್ತಮ ತರಕಾರಿ
ಕ್ಯಾರೆಟ್ನಲ್ಲಿ ಅತ್ಯಂತ ಕಡಿಮೆ ಕ್ಯಾಲರೀಸ್ಗಳು ಇರುವುದರಿಂದ ಇದು ತೂಕ ನಿರ್ವಹಣೆಯಲ್ಲಿ ತುಂಬಾ ಸಹಾಯಕವಾಗಿ ನಿಲ್ಲುತ್ತವೆ. ಈ ಕ್ಯಾರೆಟ್ಗಳನ್ನು ತಿನ್ನುವುದರಿಂದ ಅದರು ಬಹಳ ಹೊತ್ತು ಹೊಟ್ಟೆಯಲ್ಲಿಯೇ ಉಳಿಯುವುದರಿಂದ ಆಗಾಗ ಹಸಿವಾಗುವಂತಹ ಬಯಕೆಗಳನ್ನು ಹುಟ್ಟಿಸುವುದಿಲ್ಲ. ಇದರಿಂದ ಪದೇ ಪದೇ ಸ್ನ್ಯಾಕ್ಸ್ಗಳನ್ನು ತಿನ್ನುವ ರೂಢಿ ತಪ್ಪಿ ತೂಕ ನಿರ್ವಹಣೆಯೂ ಸರಳವಾಗುತ್ತೆ.
7. ಮೆದುಳಿನ ಆರೋಗ್ಯಕ್ಕೆ ಬಹಳ ಉಪಯೋಗ
ಈಗಾಗಲೇ ಹೇಳಿದಂತೆ ಕ್ಯಾರೆಟ್ನಲ್ಲಿ ಬೆಟಾ ಕ್ಯಾರೊಟಿನ್ ಅಂಶವಿರುತ್ತದೆ ಅದ ಜೊತೆಗೆ ಲೂಟೈನ್ನಂತಹ ಜೀವಪೋಷಕಗಳನ್ನು ಇದು ಹೊಂದಿರುವುದರಿಂದ ಮೆದುಳಿನ ಕಾರ್ಯಗಳು ಸರಾಗಿವಾಗಿ ಆಗುವಂತೆ ನೋಡಿಕೊಳ್ಳುತ್ತದೆ. ಮೆದುಳಿಗೆ ಒತ್ತಡವನ್ನು ನಿರ್ವಹಿಸುವ ಕ್ಷಮತೆ ಬರುವ ಮೂಲಕ ನೆನಪಿನ ಶಕ್ತಿಯೂ ಕೂಡ ಹೆಚ್ಚುತ್ತದೆ.
ಇದನ್ನೂ ಓದಿ: ನಿರೀಕ್ಷೆಗೂ ಮೀರಿದ ಆರೋಗ್ಯ ಲಾಭ! ಚಳಿಗಾಲದಲ್ಲಿ ನಿತ್ಯ ಕ್ಯಾರೆಟ್ ಜ್ಯೂಸ್ ತಪ್ಪಿಸಬೇಡಿ!
8 ದೀರ್ಘಕಾಲ ಕಾಡುವ ಕಾಯಿಲೆಗಳಿಂದ ಮುಕ್ತಿ
ಕ್ಯಾರೆಟ್ನಲ್ಲಿ ಹಲವಾರು ಪೋಷಕಾಶಂಗಳು, ಜೀವಸತ್ವಗಳು ಖನಿಜಾಂಶಗಳು ಇರುವುದರಿಂದ ಇವು ದೀರ್ಘಕಾಲದವರೆಗೆ ಕಾಡುವಂತಹ ಕಾಯಿಲೆಗಳಿಂದ ನಮ್ಮನ್ನು ಕಾಪಾಡುತ್ತದೆ. ದಿನಕ್ಕೆ ಕನಿಷ್ಠ ಒಂದು ಕ್ಯಾರೆಟ್ ತಿನ್ನುವದನ್ನು ರೂಢಿ ಮಾಡಿಕೊಳ್ಳಿ. ಅದನ್ನು ನೀವು ಹಲವು ರೂಪಗಳಲ್ಲಿ ಸೇವಿಸಬಹುದು. ನೇರವಾಗಿ ಸೇವಿಸಬಹುದು. ಜ್ಯೂಸ್ ರೂಪದಲ್ಲಿ ಸೇವಿಸಬಹುದು. ಸಲಾಡ್ ರೂಪದಲ್ಲಿ ಇತರ ತರಕಾರಿ ಜೊತೆ ಸೇವಿಸಬಹುದು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ