ನಿರೀಕ್ಷೆಗೂ ಮೀರಿದ ಆರೋಗ್ಯ ಲಾಭ! ಚಳಿಗಾಲದಲ್ಲಿ ನಿತ್ಯ ಕ್ಯಾರೆಟ್​ ಜ್ಯೂಸ್ ತಪ್ಪಿಸಬೇಡಿ!

author-image
Ganesh
Updated On
ನಿರೀಕ್ಷೆಗೂ ಮೀರಿದ ಆರೋಗ್ಯ ಲಾಭ! ಚಳಿಗಾಲದಲ್ಲಿ ನಿತ್ಯ ಕ್ಯಾರೆಟ್​ ಜ್ಯೂಸ್ ತಪ್ಪಿಸಬೇಡಿ!
Advertisment
  • ಚಳಿಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಒಳ್ಳೆಯ ಮಾರ್ಗ
  • ತಾಜಾ ಹಣ್ಣುಗಳು, ತರಕಾರಿಗಳಿಂದ ನಿಮ್ಮ ಆರೋಗ್ಯ ವೃದ್ಧಿ
  • ಕ್ಯಾರೆಟ್ ಜ್ಯೂಸ್ ಕುಡಿದ್ರೆ ಎಷ್ಟೊಂದು ಪ್ರಯೋಜ ಗೊತ್ತಾ?

ಚಳಿಗಾಲ ಪ್ರಾರಂಭವಾಗಿದೆ. ಚಳಿಗಾಲದಲ್ಲಿ ಅನೇಕ ಹಣ್ಣುಗಳು ಮತ್ತು ತರಕಾರಿಗಳು ಲಭ್ಯವಿವೆ. ಮಾರುಕಟ್ಟೆಯಲ್ಲಿ ಕಂಡುಬರುವ ತಾಜಾ ಹಣ್ಣುಗಳು ಮತ್ತು ತರಕಾರಿಗಳು ಹಬ್ಬದಂತಿವೆ. ಅದರಲ್ಲಿ ಕ್ಯಾರೆಟ್ ಕೂಡ ಒಂದು.

ಕ್ಯಾರೆಟ್ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಕ್ಯಾರೆಟ್‌ನಲ್ಲಿ ವಿಟಮಿನ್ ಎ, ಫೈಟೊಕೆಮಿಕಲ್ಸ್ (Phytochemical), ವಿಟಮಿನ್ ಸಿ ಮತ್ತು ಫೈಬರ್ ಸಮೃದ್ಧವಾಗಿದೆ. ಅನೇಕರು ಕ್ಯಾರೆಟ್ ಹಾಗೆಯೇ ತಿನ್ನಲು ಇಷ್ಟಪಡುತ್ತಾರೆ. ಅದನ್ನು ಹಸಿಯಾಗಿ ತಿನ್ನುವುದಕ್ಕಿಂತ ಜ್ಯೂಸ್ ಮಾಡಿ ಕುಡಿಯುವುದು ಉತ್ತಮ ಎನ್ನುತ್ತಾರೆ ಪೌಷ್ಟಿಕತಜ್ಞರು. ಪ್ರತಿದಿನ ಒಂದು ಕಪ್ ಕ್ಯಾರೆಟ್ ಜ್ಯೂಸ್ ಕುಡಿಯುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ.

ಇದನ್ನೂ ಓದಿ:ತಲೆ ನೋವಿಗೆ ಮಾತ್ರೆ ನುಂಗುತ್ತೀರಾ..? ಇಂದೇ ಬಿಟ್ಟುಬಿಡಿ.. ಯಾಕೆಂದರೆ..!

ಏನೆಲ್ಲ ಲಾಭ..?

  • ಕ್ಯಾರೆಟ್​ನಲ್ಲಿ ವಿಟಮಿನ್ ಸಿ ಅಧಿಕವಾಗಿದೆ
  • ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ
  • ವಿಟಮಿನ್ ಸಿ ಅನೇಕ ಸೋಂಕುಗಳಿಂದ ರಕ್ಷಿಸುತ್ತದೆ
  • ಆಯಾಸವಿಲ್ಲದೆ ಚಟುವಟಿಕೆಗೆ ಸಹಾಯ ಮಾಡಲಿದೆ
  • ಕೆಟ್ಟ ಕೊಲೆಸ್ಟ್ರಾಲ್ ಮತ್ತು ತ್ಯಾಜ್ಯವನ್ನು ತೆಗೆದುಹಾಕಲು ಉಪಯುಕ್ತ
  • ಫೈಬರ್ ಜೀರ್ಣಕ್ರಿಯೆಯ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ
  • ಬೀಟಾ ಕ್ಯಾರೋಟಿನ್ ಸಮೃದ್ಧವಾಗಿದೆ, ದೃಷ್ಟಿ ಸುಧಾರಿಸುತ್ತದೆ.
  • ಕಣ್ಣಿನ ಸಮಸ್ಯೆಗಳು ಬಾರದಂತೆ ತಡೆಯುತ್ತವೆ

ಕ್ಯಾರೆಟ್‌ನಲ್ಲಿ ಬೀಟಾ-ಕ್ಯಾರೋಟಿನ್ ಸಮೃದ್ಧವಾಗಿರುತ್ತದೆ. ದೇಹವನ್ನು ಅವುಗಳನ್ನು ವಿಟಮಿನ್-ಎ ಆಗಿ ಪರಿವರ್ತಿಸುತ್ತದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಕ್ಯಾರೆಟ್‌ನಲ್ಲಿರುವ ವಿಟಮಿನ್ ಸಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಸೋಂಕುಗಳಿಂದ ದೇಹವನ್ನು ರಕ್ಷಿಸುತ್ತದೆ. ಚಳಿಗಾಲದಲ್ಲಿ ಹೆಚ್ಚು ಕಾಡುವ ಶೀತ, ಕೆಮ್ಮು ಮತ್ತು ಜ್ವರದಂತಹ ಸಮಸ್ಯೆಗಳಿಂದ ರಕ್ಷಿಸುತ್ತದೆ. ಪ್ರತಿನಿತ್ಯ ಕ್ಯಾರೆಟ್ ಜ್ಯೂಸ್ ಕುಡಿದರೆ ಆರೋಗ್ಯವಾಗಿರುತ್ತೀರಿ.

ಇದನ್ನೂ ಓದಿ:ಬೆಳ್ ಬೆಳಗ್ಗೆ ಟೀ ಜೊತೆ ರಸ್ಕ್​​ ಸೇವನೆ ಡೇಂಜರ್​​! ಏನಾಗುತ್ತೆ ಗೊತ್ತಾ?

ಕ್ಯಾರೆಟ್‌ನಲ್ಲಿರುವ ಪೋಷಕಾಂಶಗಳು ಚರ್ಮದ ಸೌಂದರ್ಯ ಹೆಚ್ಚಿಸಲು ಸಹಾಯಕ. ಪ್ರತಿದಿನ ಜ್ಯೂಸ್ ಕುಡಿಯುವುದರಿಂದ ತ್ವಚೆಯು ಹೊಳೆಯುತ್ತದೆ. ಕ್ಯಾರೆಟ್‌ನಲ್ಲಿರುವ ವಿಟಮಿನ್ ಸಿ ಮತ್ತು ಆಂಟಿಆಕ್ಸಿಡೆಂಟ್‌ಗಳು ಕಾಲಜನ್ (Collagen) ಉತ್ಪಾದನೆಯನ್ನ ಉತ್ತೇಜಿಸುತ್ತದೆ. ಇದರಿಂದ ಚರ್ಮವನ್ನು ನೈಸರ್ಗಿಕವಾಗಿ ಹೊಳೆಯಲು ಸಹಾಯ ಆಗಲಿದೆ. ಜೊತೆಗೆ ಚರ್ಮವನ್ನು ಮೃದುವಾಗಿಸುತ್ತದೆ. ಸುಕ್ಕುಗಳು ಮತ್ತು ಮೊಡವೆಗಳಿಂದ ಮುಕ್ತಗೊಳಿಸುತ್ತದೆ. ಯೌವನಭರಿತ ಚರ್ಮವನ್ನು ನೀಡುತ್ತದೆ.

ಕ್ಯಾರೆಟ್‌ನಲ್ಲಿ ಪೊಟ್ಯಾಸಿಯಮ್ ಅಧಿಕವಾಗಿರುತ್ತದೆ. ಇದು ಮೆದುಳಿನ ಕಾರ್ಯವನ್ನು ಸುಧಾರಿಸುವುದರ ಜೊತೆಗೆ ಸ್ಮರಣೆಯನ್ನು ಹೆಚ್ಚಿಸುತ್ತದೆ. ಕ್ಯಾರೇಟ್ ಜ್ಯೂಸ್ ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿರೋರಿಗೂ ಒಳ್ಳೆಯದು.

ಇದನ್ನೂ ಓದಿ:ಕಳಪೆ ನಿದ್ದೆಯಿಂದ ಮಕ್ಕಳ ಮೆದುಳಿಗೆ ಭಾರೀ ಹಾನಿ; ನಿಮ್ಮ ಮಗು ಅಪಾಯದಲ್ಲಿದಿಯೇ..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment