/newsfirstlive-kannada/media/post_attachments/wp-content/uploads/2024/11/Carrot-Recall-1.jpg)
ಯುಎಸ್​​ನಾದ್ಯಂತ ಆರ್ಗ್ಯಾನಿಕ್ ಹಾಗೂ ಬೇಬಿ ಕ್ಯಾರೆಟ್​ಗಳನ್ನು ಎಲ್ಲಾ ತರಕಾರಿ ಅಂಗಡಿಗಳಿಂದ ವಾಪಸ್ ಪಡೆದುಕೊಂಡಿದೆ. ಕಾರಣ ಇ-ಕೊಲಿ ಎಂಬ ಸೋಂಕು​ ಸದ್ಯ ಯುಎಸ್​ನ 18 ರಾಜ್ಯಗಳಲ್ಲಿ ಕ್ಯಾರೆಟ್​ನಿಂದಾಗಿ ಹರಡಿಕೊಂಡಿದೆ ಎಂದು ಹೇಳಲಾಗುತ್ತಿದೆ. ಈ ಒಂದುಸೋಂಕಿನಿಂದಾಗಿ ಕೆಲವು ದಿನಗಳ ಹಿಂದೆ ಒಬ್ಬ ಮೃತಪಟ್ಟಿದ್ದು 15 ಜನರು ಆಸ್ಪತ್ರೆಗೆ ದಾಖಲಾಗಿದ್ದರು. ಯುಎಸ್​​ ರೋಗ ನಿಯಂತ್ರಣ ಹಾಗೂ ನಿರ್ವಹಣಾ ಕೇಂದ್ರದ ಸಲಹೆಯ ಮೇರೆಗೆ ಮಾರುಕಟ್ಟೆಗೆ ಬಂದಿದ್ದ ಎಲ್ಲಾ ಕ್ಯಾರೆಟ್​ಗಳನ್ನು ವಾಪಸ್ ಪಡೆದುಕೊಳ್ಳಲಾಗಿದೆ. ಸಿಡಿಸಿ ಹೇಳುವ ಪ್ರಕಾರ ಇ-ಕೊಲಿ ವೈರಸ್​​ಗೂ ಆರ್ಗ್ಯಾನಿಕ್ ಕ್ಯಾರೆಟ್​ಗೂ ನಂಟಿದೆ ಎಂದು ಹೇಳಲಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಕ್ಯಾರೆಟ್​​ಗಳನ್ನ ವಾಪಸ್ ಪಡೆದುಕೊಳ್ಳಲಾಗಿದೆ.
ಇದನ್ನೂ ಓದಿ:ನಿಮ್ಮ ಮಕ್ಕಳ ಸ್ಕ್ರೀನ್​ ಟೈಂ ಎಷ್ಟಿದೆ.. ಅಲರ್ಟ್​ ಆಗೋ ಸಮಯ ಬಂದಿದೆ ಹುಷಾರ್..!
ಎಲ್ಲ ಸೂಪರ್ ಮಾರ್ಕೆಟ್, ವಾಲ್​ಮಾರ್ಟ್,ಮಾರುಕಟ್ಟೆಯ ಬದಿ ಮಾರುವ ಕ್ಯಾರೆಟ್ ಹೀಗೆ ಎಲ್ಲೆಲ್ಲಿ ಕ್ಯಾರೆಟ್​ಗಳನ್ನು ಮಾರಲಾಗುತ್ತದೆಯೋ ಅಲ್ಲಿಂದ ವಾಪಸ್ ಪಡೆದುಕೊಳ್ಳಲಾಗಿದೆ. ಈಗಾಗಲೇ ಅಮೆರಿಕಾದ ಒಟ್ಟು 18 ರಾಜ್ಯಗಳಲ್ಲಿ 39 ಇ-ಕೊಲಿ ಕೇಸ್​ಗಳು ದಾಖಲಾಗಿದ್ದು. ಇದು ಫ್ರೆಶ್ ಕ್ಯಾರೆಟ್​​ನೊಂದಿಗೆ ಲಿಂಕ್ ಹೊಂದಿದೆ ಎಂಬುದು ಖಚಿತವಾದ ಹಿನ್ನೆಲೆ ಈ ನಿರ್ಧಾರಕ್ಕೆ ಬರಲಾಗಿದೆ.
ಇದನ್ನೂ ಓದಿ:ಅರಿಶಿನಕ್ಕೂ ಬಂತು ಕೇಡುಗಾಲ ! ಹಳದಿ ಪದಾರ್ಥದಲ್ಲಿದೆ ಹೃದಯಕ್ಕೆ ಮಾರಕವಾಗುವ ಅಂಶ!
ಯುಎಸ್​ನ ರೋಗ ನಿಯಂತ್ರಣ ಹಾಗೂ ನಿರ್ವಹಣಾ ಕೇಂದ್ರ (ಸಿಡಿಸಿ) ದೇಶದ ಜನರಲ್ಲಿ ಯಾವುದೇ ಕಾರಣಕ್ಕೂ ಕ್ಯಾರೆಟ್​ ಸೇವಿಸದಂತೆ ಮನವಿ ಮಾಡಿದೆ. ಅದು ಮಾತ್ರವಲ್ಲ ಅದನ್ನು ತರುವಾಗ ಉಳಿದ ತರಕಾರಿಗಳು ಬ್ಯಾಗ್​ನಲ್ಲಿ ಕ್ಯಾರೆಟ್​ನೊಂದಿಗೆ ಅಂಟಿಕೊಂಡಿದ್ದರೆ ಅವುಗಳನ್ನು ಸ್ವಚ್ಛವಾಗಿ ತೊಳೆದು ಉಪಯೋಗಿಸಿ ಎಂದು ಕೂಡ ಸೂಚನೆ ನೀಡಲಾಗಿದೆ. ಒಂದು ವೇಳೆ ಈ ಹಿಂದೆ ಕೊಂಡ ಕ್ಯಾರೆಟ್​ಗಳು ಮನೆಯಲ್ಲಿ ಇದ್ದರೆ ಅವುಗಳನ್ನು ಆಚೆ ಬಿಸಾಕುವಂತೆ ಸಿಡಿಸಿ ಸಲಹೆಯನ್ನು ನೀಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us