ದರ್ಶನ್​ ಫ್ಯಾನ್ಸ್​ ವಿರುದ್ಧ ಕೇಸ್​; ರಮ್ಯಾ ಕೊಟ್ಟ 43 ಅಕೌಂಟ್​ಗಳಲ್ಲಿ A1, A2 ಆರೋಪಿ ಯಾರು, ಪ್ರಥಮ್ ಏನಂದ್ರು?

author-image
Bheemappa
Updated On
ದರ್ಶನ್​ ಫ್ಯಾನ್ಸ್​ ವಿರುದ್ಧ ಕೇಸ್​; ರಮ್ಯಾ ಕೊಟ್ಟ 43 ಅಕೌಂಟ್​ಗಳಲ್ಲಿ A1, A2 ಆರೋಪಿ ಯಾರು, ಪ್ರಥಮ್ ಏನಂದ್ರು?
Advertisment
  • ಎಫ್​ಐಆರ್​ ದಾಖಲಾದ್ರೂ ಹೊಲಸು ಬುದ್ಧಿ ಬಿಡದ ಕ್ರಿಮಿಗಳು
  • ನಟನ ಹೆಸರಿಗೆ ಮಸಿ ಬಳಿಯುತ್ತಿರುವ ಹಲವು ಕಿಡಿಗೇಡಿಗಳು
  • ಈಗಲೇ ಫೇಕ್ ಅಕೌಂಟ್ಸ್ ಬ್ಲಾಕ್ ಮಾಡಿಸಿರೋ ಪೊಲೀಸರು

ತಮಗೆ ತಾವೇ ಡಿ ಫ್ಯಾನ್ಸ್​ ಅಂತ ಹೇಳಿಕೊಂಡು ಅಭಿಮಾನದ ಹೆಸರಲ್ಲಿ ಕೆಲ ಪುಂಡ-ಪೋಕರಿಗಳು ತೀರಾ ಕೆಳಮಟ್ಟಕ್ಕೆ ಇಳಿದುಬಿಟ್ಟಿದ್ದಾರೆ. ಅದು ಎಷ್ಟರ ಮಟ್ಟಿಗೆ ಅಂದ್ರೆ ತಲೆಯೊಳಗಿನ ಮೆದುಳನ್ನೇ ಬದಿಗಿಟ್ಟು ಸಾಮಾಜಿಕ ಜಾಲತಾಣದಲ್ಲಿ ವಾರಿಯರ್ಸ್​ ರೀತಿ ಪೋಸ್ ಕೊಡ್ತಿದ್ದಾರೆ. ಒಂದು ಹೆಣ್ಣಿನ ಬಗ್ಗೆ ಅಶ್ಲೀಲವಾಗಿ ಮಾತಾಡಿ ತಮ್ಮ ಬಣ್ಣ ಬಯಲು ಮಾಡುವ ಜೊತೆಗೆ ನಟ ದರ್ಶನ್​ಗೂ ಮಸಿ ಬಳಿಯುವ ಕಾರ್ಯವನ್ನು ನೆಕ್ಸ್ಟ್​ ಲೆವೆಲ್​ಗೆ ಕೊಂಡೊಯ್ದಿದ್ದಾರೆ.

ದರ್ಶನ್ ಫ್ಯಾನ್ಸ್​ ವಿರುದ್ಧ ಕ್ರಮಕ್ಕೆ ಮುಂದಾದ ಪೊಲೀಸರು

ರಮ್ಯಾ ವರ್ಸಸ್​ ದರ್ಶನ್ ಫ್ಯಾನ್ಸ್​​ ನಡುವಿನ ಕಚ್ಚಾಟ ತೀವ್ರ ಸ್ವರೂಪ ಪಡೆದಿದೆ. ಸಾಮಾಜಿಕ ಜಾಲತಾಣಕ್ಕೆ ಸಿಮೀತವಾಗದೇ ಪೊಲೀಸ್​ ಠಾಣೆ ಮೆಟ್ಟಿಲೇರಿ ಸಂಚಲನ ಸೃಷ್ಟಿಸಿದೆ. ನಿನ್ನೆ 43 ಇನ್​ಸ್ಟಾ ಖಾತೆಗಳನ್ನ​ ಉಲ್ಲೇಖಿಸಿ ನಟಿ ರಮ್ಯಾ ದೂರು ಬೆನ್ನಲ್ಲೇ ದರ್ಶನ್ ಫ್ಯಾನ್ಸ್​ ವಿರುದ್ಧ ಪೊಲೀಸರು ಕ್ರಮಕ್ಕೆ ಮುಂದಾಗಿದ್ದಾರೆ. ಎಫ್​ಐಆರ್​​​ನಲ್ಲಿ ಪ್ರಮೋದ್ ಗೌಡ A1 ಆದ್ರೆ ಉಳಿದವರು A2 ಆಗಿದ್ದಾರೆ. ಸೈಬರ್​ ಕ್ರೈಮ್​ ಹಾಗೂ ಐಟಿ ಕಾಯಿದೆ ಪ್ರಕಾರ ತನಿಖೆ ನಡೆಸುತ್ತಿದ್ದಾರೆ. ಆದ್ರೆ ಈ ವೇಳೆ ಈ ಹುಳಗಳ ಅಸಲಿಯತ್ತು ಬಯಲಾಗಿದೆ.

publive-image

ನಕಲಿ ಶೂರರ ಬೆನ್ನತ್ತಿ

  • ದೂರಿನಲ್ಲಿ ಒಟ್ಟು 43 ಅಕೌಂಟ್ಸ್​ಗಳ ಉಲ್ಲೇಖ ಮಾಡಿರೋ ರಮ್ಯಾ
  • ನಟಿ ರಮ್ಯಾ ದೂರು ಪರಿಶೀಲಿಸಿರುವ ಸೈಬರ್ ಕ್ರೈಂ ಪೊಲೀಸರು
  • ಉಲ್ಲೇಖ ಮಾಡಿದ ಅಕೌಂಟ್ಸ್​ಗಳ ಪೈಕಿ ಬಹುತೇಕವು ಫೇಕ್
  • ಅಶ್ಲೀಲ ಕಾಮೆಂಟ್ ಬಂದ ಅಕೌಂಟ್ಸ್​ಗಳಲ್ಲಿ ಬಹುತೇಕವು ನಕಲಿ
  • ಯುವತಿಯರ ಪೊಟೋ, VPN ಸಾಫ್ಟ್‌ವೇರ್ ಬಳಸಿ ನಕಲಿ ಖಾತೆ​
  • ಸಂದೇಶ ಬಂದ ಫೇಕ್ ಅಕೌಂಟ್ಸ್ ಬ್ಲಾಕ್ ಮಾಡಿಸಿರೋ ಪೊಲೀಸರು
  • ಐಟಿ ಆ್ಯಕ್ಟ್​ನಡಿ ನೋಟಿಸ್ ನೀಡಲು ಸೈಬರ್ ಕ್ರೈಂ ಪೊಲೀಸರ ಸಿದ್ಧತೆ
  • ಸಂದೇಶ ಕಳಿಸಿದವರ IP ಅಡ್ರೆಸ್ ಹುಡುಕಿ ನೋಟಿಸ್ ಕೊಟ್ಟು ವಿಚಾರಣೆ

ಇನ್ನು ಪ್ರಕರಣ ಇಷ್ಟು ಎಲ್ಲ ಗಂಭೀರ ಸ್ವರೂಪ ಪಡೆದು ಕೆಲವರ ಬುರುಡೆಗೆ ಬೀಸಿ ನೀರು ಕಾಯಿಸುವಂತಾಗಿದ್ರೂ ಈ ಮತಿಗೆಟ್ಟ ಫ್ಯಾನ್ಸ್​ ತೆಪ್ಪಗಾಗಿಲ್ಲ. ಮತ್ತೆ ರಮ್ಯಾ ವಿರುದ್ಧ ಅಶ್ಲೀಲ ಸಂದೇಶ ಕಳಿಸುವುದನ್ನ ಮುಂದುವರೆಸಿದ್ದಾರೆ. ಇವುಗಳ ಸ್ಕ್ರೀನ್ ಶಾಟ್​ಗಳನ್ನ ನಟಿ​ ಹಂಚಿಕೊಂಡಿದ್ದಾರೆ.

ಇನ್ನು ದರ್ಶನ್​​ ಫ್ಯಾನ್ಸ್​​​ ವಿರುದ್ಧ ನಟಿ ರಮ್ಯಾ ಕಾನೂನು ಸಮರವನ್ನು ಬಹಳ ಗಂಭೀರವಾಗಿ ಪರಿಗಣಿಸಬೇಕು ಅಂತ ಗೃಹ ಸಚಿವ ಪರಂ ಹೇಳಿದ್ದಾರೆ. ಇತ್ತ ಪ್ರಕರಣವನ್ನು CCB ತನಿಖೆಗೆ ನೀಡಲಾಗಿದೆ. ACP ನೇತೃತ್ವದಲ್ಲಿ ಪ್ರಕರಣದ ಮಾನಿಟರ್ ಮಾಡಲಾಗ್ತಿದೆ ಅಂತ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಮಾಹಿತಿ ನೀಡಿದ್ದಾರೆ.

ರಮ್ಯಾ ಪರ ನಿಂತ ದೊಡ್ಮನೆ ಕುಡಿ ಶಿವಣ್ಣ

ಇನ್ನು ಇದುವರೆಗೆ ರಮ್ಯಾ ಪರ ಪ್ರಥಮ್ ಬಿಟ್ರೆ ಬೇಱವ ಕಲಾವಿದರು ಧ್ವನಿ ಎತ್ತಿರಲಿಲ್ಲ. ಈಗ ಖುದ್ದು ದೊಡ್ಮನೆ ಕುಟುಂಬದ ಕುಡಿ ಎಂಟ್ರಿಯಾಗಿದೆ. ಅಶ್ಲೀಲ ಮೆಸೇಜ್​ಗಳನ್ನು ಕಟುವಾಗಿ ಖಂಡಿಸಿ ರಮ್ಯಾ ಪರ ಶಿವಣ್ಣ ನಿಂತಿದ್ದಾರೆ. ಇದಕ್ಕೆ ರಮ್ಯಾ ಧನ್ಯವಾದ ತಿಳಿಸಿದ್ದಾರೆ.

ದರ್ಶನ್ ಹಾಗೂ ಫ್ಯಾನ್ಸ್ ವಿರುದ್ಧ ಪ್ರಥಮ್ ಸಿಡಿಮಿಡಿ

ಇನ್ನು ರಮ್ಯಾ ದರ್ಶನ್​ ಫ್ಯಾನ್ಸ್​ ವಿರುದ್ಧ ದೂರು ಸಲ್ಲಿಸಿದ ಬೆನ್ನಲ್ಲೇ ನಟ ಪ್ರಥಮ್ ಕೂಡ ದರ್ಶನ್ ಅಭಿಮಾನಿಗಳ ವಿರುದ್ಧ ದೂರು ನೀಡಿದ್ದಾರೆ. ಬೆಂಗಳೂರು ಗ್ರಾಮಾಂತರ ಎಸ್​ಪಿ ಸಿಕೆ ಬಾಬಾಗೆ ತಮ್ಮ ಮೇಲಿನ ದಾಳಿ ಹಾಗೂ ಫ್ಯಾನ್ಸ್ ನಿಂದನೆ ಸಂಬಂಧ ದೂರು ನೀಡಿದ್ದಾರೆ. ನಾನು ಎಲ್ಲೇ ಹೋದ್ರೂ ರಾತ್ರಿ ಮನೆಗೆ ಬರ್ತೀನಿ. ಎಲ್ಲೋ ಕುತ್ಕೊಂಡು ಕುಡಿದು ಇನ್ನೇನೋ ಮಾಡಲ್ಲ ಅಂತ ದರ್ಶನ್ ಅಭಿಮಾನಿಗಳಿಗೆ ಸವಾಲ್ ಹಾಕಿದ್ದಾರೆ.

ಇದನ್ನೂ ಓದಿ:ಮುಂದಿನ CM ಮಲ್ಲಿಕಾರ್ಜುನ ಖರ್ಗೆನಾ.. ಎಷ್ಟು ಬಾರಿ ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡರು ಹಿರಿಯ ರಾಜಕಾರಣಿ?

publive-image

‘ಸಾಯಲಿ ಬಿಡಿ ಎಂದರೆ ಸಾಯಲಿ’

ಇವತ್ತಿನಿಂದ ಅಮರಣಾಂತ ಉಪವಾಸ ಮಾಡುತ್ತೇನೆ. ಒಂದು ಹನಿ ನೀರು ಕುಡಿಯಲ್ಲ. ಇದರ ಹಿಂದೆ ಯಾರಿದ್ದಾರೆ ಎನ್ನುವುದು ಗೊತ್ತಾಗಬೇಕು. ಬಂದು ತನಿಖೆ ಮಾಡಬೇಕು. ದರ್ಶನ್ ಅವರು ಬಂದು ಇಲ್ಲಿ ಪ್ರತಿಕ್ರಿಯೆ ಕೊಡಬೇಕು. ಪ್ರತಿಕ್ರಿಯೆ ಕೊಟ್ಟು ಇನ್ನೊಮ್ಮೆ ಪ್ರಥಮ್ ವಿಚಾರಕ್ಕೆ ಆಗಲಿ ನಮ್ಮ ಫ್ಯಾನ್ಸ್​ ಬರಲ್ಲ ಎಂದು ಹೇಳಬೇಕು. ಅವರು ಬರೋವರೆಗೆ ಅಮರಣಾಂತ ಉಪವಾಸ. ಇಲ್ಲಂದ್ರೆ ಪ್ರಥಮ ಸತ್ತರೂ ಸಾಯಲಿ ಬಿಡಿ ಎಂದರೆ ಸಾಯಲಿ ಬಿಡಿ.

ಪ್ರಥಮ್, ನಟ

ರಮ್ಯಾ ವರ್ಸಸ್​ ದರ್ಶನ್​ರ ಕೆಲ ಲಜ್ಜೆಗೆಟ್ಟ ಫ್ಯಾನ್ಸ್​ ಸಮರ ತಾರಕಕ್ಕೇರಿದೆ. ಇದರಲ್ಲಿ ದೊಡ್ಮನೆ ಕೂಡ ಎಂಟ್ರಿಯಾಗಿದ್ದು ಪ್ರಕರಣ ಮತ್ತಷ್ಟು ಗಂಭೀರ ಸ್ವರೂಪ ಪಡೆದಿದೆ. ಇದೇ ವೇಳೆ ನಟಿ ರಮ್ಯಾ ಪರ ರಾಜ್ಯ ಮಹಿಳಾ ಕಾಂಗ್ರೆಸ್​ ಕೂಡ ಹಸ್ತ ಚಾಚಿ ಅಶ್ಲೀಲ ಮೆಸೇಜ್ ಕಳಿಸಿದವರ ವಿರುದ್ಧ ದೂರು ನೀಡಿದೆ. ಈ ಬಗ್ಗೆ ಖುದ್ದು ದರ್ಶನ್ ಮಧ್ಯಪ್ರವೇಶಿಸಿ ಹುಚ್ಚು ಅಭಿಮಾನಿಗಳ ಬಾಯಿ ಮುಚ್ಚಿಸಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment