ರಾಜಸ್ಥಾನ ಪೊಲೀಸರಿಂದ ಐಐಟಿ ಬಾಬಾ ಅಭಯ್ ಸಿಂಗ್​​ ಅರೆಸ್ಟ್.. ಕಾರಣ ಏನು ಗೊತ್ತಾ?

author-image
Ganesh
Updated On
ರಾಜಸ್ಥಾನ ಪೊಲೀಸರಿಂದ ಐಐಟಿ ಬಾಬಾ ಅಭಯ್ ಸಿಂಗ್​​ ಅರೆಸ್ಟ್.. ಕಾರಣ ಏನು ಗೊತ್ತಾ?
Advertisment
  • ಕುಂಭಮೇಳದಲ್ಲಿ ಫೇಮಸ್ ಆಗಿರುವ ಐಐಟಿ ಬಾಬಾ
  • ರಿದ್ಧಿ ಸಿದ್ಧಿ ಪ್ರದೇಶದ ಹೋಟೆಲ್‌ನಲ್ಲಿ ಉಳಿದುಕೊಂಡು ಗದ್ದಲ
  • ಗಾಂಜಾವನ್ನು ಪ್ರಸಾದ ಎಂದ ಐಐಟಿ ಬಾಬಾ

ಮಹಾ ಕುಂಭಮೇಳದಲ್ಲಿ ಫೇಮಸ್ ಆದ ಐಐಟಿ ಬಾಬಾ ಅಭಯ್ ಸಿಂಗ್​ರನ್ನ (Abhay Singh) ಗಾಂಜಾ ಇಟ್ಟುಕೊಂಡಿದ್ದಕ್ಕಾಗಿ ಬಂಧಿಸಲಾಗಿದೆ.

ರಾಜಸ್ಥಾನದ ಜೈಪುರದಲ್ಲಿ ಅರೆಸ್ಟ್​ ಆದ ಬಾಬಾ (IIT Baba) ವಿರುದ್ಧ ನಾರ್ಕೋಟಿಕ್ ಡ್ರಗ್ಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಅಭಯ್ ಸಿಂಗ್ ಭಾರತೀಯ ತಂತ್ರಜ್ಞಾನ ಸಂಸ್ಥೆ ಪದವೀಧರರಾಗಿದ್ದು, ಮಹಾ ಕುಂಭದಲ್ಲಿ (Maha Kumbh mela) ಐಐಟಿ ಬಾಬಾ ಎಂದೇ ಜನಪ್ರಿಯರಾದರು. ರಿದ್ಧಿ ಸಿದ್ಧಿ ಪ್ರದೇಶದ ಹೋಟೆಲ್‌ನಲ್ಲಿ ಉಳಿದುಕೊಂಡು ಗದ್ದಲ ಸೃಷ್ಟಿಸುತ್ತಿದ್ದ ವೇಳೆ ಸ್ಥಳಕ್ಕಾಗಮಿಸಿದ ಪೊಲೀಸರು ಅವರಿಂದ ಗಾಂಜಾವನ್ನ ವಶಪಡಿಸಿಕೊಂಡಿದ್ದಾರೆ.

ಅವರ ಬಳಿ ದೊರೆತ ಗಾಂಜಾದ ಪ್ರಮಾಣವು ಅನುಮತಿಸಲಾದ ಮಿತಿಯೊಳಗೆ ಇದ್ದುದರಿಂದ ಪೊಲೀಸರು ಆತನನ್ನ ಸ್ವಲ್ಪ ಸಮಯದ ನಂತರ ಬಿಡುಗಡೆ ಮಾಡಿದ್ದಾರೆ. ಗಾಂಜಾ ಬಗ್ಗೆ ಪೊಲೀಸರಿಗೆ ಪ್ರತಿಕ್ರಿಯಿಸಿರುವ ಬಾಬಾ, ಅದು ಪ್ರಸಾದ. ಪ್ರಸಾದವಾಗಿ ಇಟ್ಟುಕೊಂಡಿದ್ದೇನೆ ಎಂದಿದ್ದಾನೆ ಅಂತಾ ವರದಿಯಾಗಿದೆ.

ಇದನ್ನೂ ಓದಿ: ‘ರಜೆ ಸಿಗಲಿಲ್ಲ, ಕಡೆಗೂ ‌ಮಗ ಬದುಕಿ ಉಳಿಯಲಿಲ್ಲ..’ ವಿಜಯಪುರ ಕಾನ್ಸ್​ಸ್ಟೇಬಲ್​ನ ಕಣ್ಣೀರ ಕತೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment